ಕೋಳಿ ಮಾಂಸದ ತೂಕದಲ್ಲಿ ಭಾರಿ ವಂಚನೆ – ವ್ಯಾಪಾರಿಯನ್ನು ಮರಕ್ಕೆ ಕಟ್ಟಿಹಾಕಿದ ರೈತ!

ಕೋಳಿ ಮಾಂಸದ ತೂಕದಲ್ಲಿ ಭಾರಿ ವಂಚನೆ – ವ್ಯಾಪಾರಿಯನ್ನು ಮರಕ್ಕೆ ಕಟ್ಟಿಹಾಕಿದ ರೈತ!

ಗ್ರಾಹಕರಿಗೆ ಕೆಲ ವ್ಯಾಪಾರಿಗಳು ಆಗಾಗ ಮೋಸ ಮಾಡುತ್ತಿರುತ್ತಾರೆ. ತೂಕದಲ್ಲಿ ವಂಚಿಸೋದು, ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆ ನಿಗದಿಪಡಿಸಿ ಗ್ರಾಹಕರಿಗೆ ವಂಚಿಸುತ್ತಿರುತ್ತಾರೆ. ಇದೀಗ ಗ್ರಾಹಕರಿಗೆ ಕೋಳಿ ಮಾಂಸ ಕಡಿಮೆ ಕೊಟ್ಟು ವಂಚಿಸಿದ್ದಾತನ್ನು ಮರಕ್ಕೆ ಕಟ್ಟಿ ಹಾಕಿದ ಘಟನೆ ನಡೆದಿದೆ.

ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ತಾರಕಕ್ಕೇರಿದ ಸಂಘರ್ಷ – ಭಾರತದ ಮೇಲೂ ಪರಿಣಾಮ ಬೀರಿದ್ದು ಹೇಗೆ? ಯಾಕೆ?

ಮಂಡ್ಯ  ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿಕ್ಕಬ್ಯಾಡರಹಳ್ಳಿ ಗ್ರಾಮದ ರೈತ ಹನುಮಂತೇಗೌಡ ಅವರು ಕೋಳಿಫಾರಂ ನಡೆಸುತ್ತಿದ್ದು, ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದರು. ಕೋಳಿ ಖರೀದಿಸಲು ಬರುತ್ತಿದ್ದ ಮೈಸೂರು ಮೂಲದ ಎನ್‌ಆರ್ ಚಿಕನ್ ಕಂಪನಿಯ ಸಿಬ್ಬಂದಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ರೈತನಿಗೆ ಕೋಳಿ ತುಂಬುವಾಗ ತೂಕದಲ್ಲಿ ಮೋಸ ಮಾಡುತ್ತಿದ್ದರು. ಅನುಮಾನಗೊಂಡ ರೈತ ಬೇರೆ ತೂಕದ ಯಂತ್ರ ತರಿಸಿ ತೂಕ ಹಾಕಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಬೇರೆ ತೂಕದ ಯಂತ್ರ ತರಿಸಿ ಕೋಳಿ ಮಾಂಸ ತೂಗಿದಾಗ ರೈತನಿಗೆ ಸುಮಾರು 30 ಕೆಜಿ ವ್ಯತ್ಯಾಸ ಬಂದಿದೆ.

ಇದರಿಂದ ರೊಚ್ಚಿಗೆದ್ದ ರೈತ ಹನುಮಂತೇಗೌಡ ಕೋಳಿ ತುಂಬಲು ಬಂದಿದ್ದ ನಾಲ್ವರಲ್ಲಿ ಇಬ್ಬರನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಬಳಿಕ ತೂಕದಲ್ಲಿ ಮೋಸ ಮಾಡಿ ಇದುವರೆಗೂ ವಂಚಿಸಿದ ಇವರ ವಿರುದ್ದ ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

Shwetha M