ವಿಶ್ವಕಪ್‌ನಲ್ಲಿ ಅಂಪೈರ್‌ಗಳು ಎಡವುತ್ತಿದ್ದಾರಾ? – ಕೆಲ ಅಂಪೈರ್‌ಗಳ ತಪ್ಪು ನಿರ್ಧಾರದಿಂದ ತಂಡಗಳಿಗೆ ಭಾರಿ ಹೊಡೆತ

ವಿಶ್ವಕಪ್‌ನಲ್ಲಿ ಅಂಪೈರ್‌ಗಳು ಎಡವುತ್ತಿದ್ದಾರಾ? – ಕೆಲ ಅಂಪೈರ್‌ಗಳ ತಪ್ಪು ನಿರ್ಧಾರದಿಂದ ತಂಡಗಳಿಗೆ ಭಾರಿ ಹೊಡೆತ

ಕ್ರಿಕೆಟ್​ನಲ್ಲಿ ಅಂಪೈರ್​ಗಳ ಪಾತ್ರ ಕೂಡ ಆಟಗಾರರಷ್ಟೇ ಮುಖ್ಯವಾಗಿರುತ್ತೆ. ಅಂಪೈರ್​​ಗಳ ಒಂದೊಂದು ಡಿಸೀಶನ್ ಕೂಡ ಮ್ಯಾಚ್​ನ ರಿಸಲ್ಟ್ ಮೇಲೆ ಎಫೆಕ್ಟ್ ಆಗುತ್ತೆ. ಅಂಪೈರ್​ನ ಒಂದು ಬ್ಯಾಡ್​ ಡಿಸೀಶನ್​​ ಒಂದು ತಂಡದ ಸೋಲಿಗೆ ಕಾರಣವಾಗಬಹುದು. ಮತ್ತೊಂದು ಟೀಂನ ಗೆಲುವಿಗೂ ಕಾರಣವಾಗಬಹುದು. ಅದ್ರಲ್ಲೂ ವರ್ಲ್ಡ್​​ಕಪ್​ನಂಥಾ ಟೂರ್ನಿ ವೇಳೆಯಂತೂ ಅಂಪೈರ್​ಗಳ ಡಿಸೀಶನ್​​ನಿಂದ ತಂಡ ಟೂರ್ನಿಯಿಂದಲೇ ಔಟ್ ಆದ್ರೂ ಆಶ್ಚರ್ಯ ಇಲ್ಲ. ಹೀಗಾಗಿ ವಿಶ್ವಕಪ್​ ಟೂರ್ನಿಗೆ ವರ್ಲ್ಡ್​​ಕ್ಲಾಸ್ ಅಂಪೈರ್ಸ್​ಗಳನ್ನೇ ನೇಮಕ ಮಾಡಲಾಗುತ್ತೆ. ಇಂಟರ್​ ನ್ಯಾಷನಲ್​​ ಕ್ರಿಕೆಟ್ ಕೌನ್ಸಿಲ್ ತನ್ನ ಬೆಸ್ಟ್ ಅಂಪೈರ್ಸ್​ಗಳನ್ನೇ ಸೆಲೆಕ್ಟ್ ಮಾಡಿರುತ್ತೆ. ಆದ್ರೂ ಅದ್ಯಾಕೋ ಈ ಬಾರಿಯ ವರ್ಲ್ಡ್​ಕಪ್​ನಲ್ಲಿ ಕೆಲ ಅಂಪೈರ್ಸ್​ಗಳ ತಪ್ಪು ನಿರ್ಧಾರ ತಂಡಗಳಿಗೆ ಭಾರಿ ಹೊಡೆತ ನೀಡುತ್ತಿರುವಂತೆ ಕಾಣ್ತಿದೆ.

ಇದನ್ನೂ ಓದಿ: 2028ರ ಒಲಿಂಪಿಕ್ಸ್ ಕ್ರೀಡೆಗಳ ಪಟ್ಟಿಗೆ ಕ್ರಿಕೆಟ್ ಸೇರ್ಪಡೆ – 123 ವರ್ಷಗಳ ಬಳಿಕ ಕ್ರಿಕೆಟ್‌ಗೆ ಒಲಿದ ಸ್ಥಾನ

ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ವೇಳೆ ಒಂದು ಇಂಟ್ರೆಸ್ಟಿಂಗ್​ ಬೆಳವಣಿಗೆ ನಡೆದಿದೆ. ಆಸ್ಟ್ರೇಲಿಯಾದ ಮೇನ್ ಬ್ಯಾಟ್ಸ್​ಮನ್​ ಓಪನರ್ ಡೇವಿಡ್ ವಾರ್ನರ್ 5 ಬಾಲ್​ಗಳಲ್ಲಿ 11 ರನ್​​ ಗಳಿಸಿ ಆಡುತ್ತಿದ್ದರು. ಈ ವೇಳೆ ದಿಲ್​ಶಾನ್ ಎಸೆದ ಬಾಲ್​ ಬ್ಯಾಟ್​ನಿಂದ ಮಿಸ್ ಆಗಿ ನೇರವಾಗಿ ಪ್ಯಾಡ್​​ಗೆ ಬಡಿದಿದೆ. ಶ್ರೀಲಂಕನ್ನರು ಅಪೀಲ್ ಮಾಡುತ್ತಲೇ ಅಂಪೈರ್​ ಜೋ ವಿಲ್ಸನ್ ನೇರವಾಗಿ ಔಟ್ ಕೊಟ್ಟಿದ್ದಾರೆ. ಕೂಡಲೇ ಡೇವಿಡ್ ವಾರ್ನರ್ ರಿವ್ಯೂ ತೆಗೆದುಕೊಂಡ್ರು. ಈ ವೇಳೆ ಪರಿಶೀಲನೆ ನಡೆಸಿದಾಗ ಬಾಲ್​ ಆಲ್​ಮೋಸ್ಟ್​ ಔಟ್ ಸೈಡ್​ ದಿ ಆಫ್​ ಸ್ಟಂಪ್ ಹೋಗಿರೋದು ಸ್ಪಷ್ಟವಾಗಿತ್ತು. ಆಫ್​ ಸ್ಟಂಪ್​ ಎಡ್ಜ್​​ಗೆ ಬಾಲ್​​ ಬಡಿದಿರೋದು ಬಾಲ್​​ ಟ್ರ್ಯಾಕಿಂಗ್​ ಸಿಸ್ಟಮ್​ನಿಂದ ಸ್ಪಷ್ಟವಾಗಿತ್ತು. ಆದರೂ, ರೂಲ್ಸ್ ಪ್ರಕಾರ ಡೇವಿಡ್​ ವಾರ್ನರ್ ಔಟ್ ಆಗಿದ್ರು. ಯಾಕಂದ್ರೆ, ಅಂಪೈರ್​ ಮೊದಲಿಗೆ ಔಟ್ ಅನ್ನೋ ಡಿಸೀಶನ್ ತೆಗೆದುಕೊಂಡಿದ್ರು. ಅಂಪೈರ್ಸ್ ಕಾಲ್ ಆಗಿರೋದ್ರಿಂದ ಬಾಲ್​ ಆಫ್​ ಸ್ಟಂಪ್​ ಎಡ್ಜ್​​ಗೆ ಬಡಿಯುವಂತೆ ಇದ್ದರೂ ವಾರ್ನರ್​ ಕ್ರೀಸ್​ನಿಂದ ಹೊರನಡೆಯಬೇಕಾಯ್ತು. ಡಿಸೀಶನ್ ಶ್ರೀಲಂಕನ್ನರ ಫೇವರ್ ಆಗಿತ್ತು.

ಇಲ್ಲಿ ಪ್ರಾಬ್ಲಂ ಆಗ್ತಿರೋದು ಇದೇ ಅಂಪೈರ್ಸ್​ ಕಾಲ್​ನಲ್ಲಿ. ಒಂದು ವೇಳೆ ಅಂಪೈರ್​ ನಾಟ್​ಔಟ್ ಅಂತಾ ಡಿಸೀಶನ್ ಕೊಟ್ಟು, ಆಗ ಶ್ರೀಲಂಕನ್ನರು ರಿವ್ಯೂ ತಗೋತಿದ್ರೆ ಡೇವಿಡ್​​ ವಾರ್ನರ್​ ನಾಟ್​​ಔಟ್ ಆಗುತ್ತಿದ್ದರು. ಆದ್ರೆ ಅಂಪೈರ್ ಔಟ್ ಅಂತಾ ಕೊಟ್ಟಿದ್ರಿಂದಾಗಿ ರಿವ್ಯೂ ಕೂಡ ವಾರ್ನರ್​ಗೆ ಉಲ್ಟಾ ಹೊಡೆಯಿತು. ರೊಚ್ಚಿಗೆದ್ದ ವಾರ್ನರ್​ ಬ್ಯಾಟ್​​ನ್ನ ನೆಲಕ್ಕೆ ಬಡಿದು ಬಳಿಕ ಅಂಪೈರ್​ಗೆ ಬೈದುಕೊಂಡೇ ಹೊರ ನಡೆದರು. ಅಂಪೈರ್​ ಡಿಸೀಶನ್​ನಲ್ಲಾದ ಎಡವಟ್ಟಿನಿಂದ ಡೇವಿಡ್ ವಾರ್ನರ್ ಔಟಾಗಬೇಕಾಯ್ತು.

ಇಂಥಾ ಡಿಸೀಶನ್​ಗಳು ಬಂದಿರೋದು ಇದೇ ಮೊದಲೇನಲ್ಲ. ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ವೇಳೆಯೂ ಇದೇ ರೀತಿ. ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಮ್ಯಾಚ್ ವೇಳೆಯೂ ಹೀಗೆಯೇ ಆಗಿತ್ತು. ಅಷ್ಟೇ ಅಲ್ಲ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ-ಪಾಕಿಸ್ತಾನ ಮ್ಯಾಚ್​ ವೇಳೆಯೂ ಅಂಪೈರ್ಸ್​ ಕಾಲ್​ನಿಂದ ಟೀಂ ಇಂಡಿಯಾಗೆ ನಷ್ಟವಾಗಿತ್ತು. ಕುಲ್​ದೀಪ್ ಯಾದವ್​ ಬೌಲಿಂಗ್​​ನಲ್ಲಿ ಪಾಕಿಸ್ತಾನದ ಬಾಬರ್ ಆಜಂ ಸ್ವೀಪ್ ಮಾಡೋಕೆ ಮುಂದಾಗ್ತಾರೆ. ಆಗ ಬಾಲ್​ ಪ್ಯಾಡ್​ಗೆ ಬಡಿಯುತ್ತೆ. ಆನ್​​ಫೀಲ್ಡ್ ಅಂಪೈರ್ ಆಗಿದ್ದ ಮ್ಯಾರಿಸ್ ಎರಾಸಮ್ಸ್ ನಾಟ್​​ಔಟ್ ಕೊಡ್ತಾರೆ. ಭಾರತ ರಿವ್ಯೂ ತೆಗೆದುಕೊಳ್ಳುತ್ತೆ. ಆಗ ಬಾಲ್​ ಸೈಡ್​ ಸ್ಟಂಪ್​ಗೆ ಬಡಿದಿತ್ತು. ಒಂದು ವೇಳೆ ಅಂಪೈರ್ ಔಟ್ ಕೊಡ್ತಿದ್ರೆ ಆಗ ಬಾಬರ್ ಆಜಂ ಕ್ರೀಸ್ ಬಿಡಬೇಕಿತ್ತು. ಅಂಪೈರ್ ನಾಟ್​​ಔಟ್ ಕೊಟ್ಟಿದ್ರಂದಾಗಿ ಆಗ ಬಚಾವಾಗಿದ್ರು. ಆ ಮ್ಯಾಚ್​ನಲ್ಲಿ ಅಂಪೈರ್ ಮ್ಯಾರಿಸ್ ಎರಾಸಮ್ಸ್ ಒಟ್ಟು ನಾಲ್ಕು ಬಾರಿ ಪಾಕಿಸ್ತಾನದ ಫೇವರ್​ ಆಗಿಯೇ ಡಿಸೀಶನ್ ಕೊಟ್ಟಿದ್ರು. ಡಿಆರ್​ಎಸ್​ ಸಿಸ್ಟಮ್​ನಿಂದಾಗಿ ಕೆಲ ಡಿಸೀಶನ್​ಗಳು ಭಾರತದ ಫೇವರ್ ಆಗಿತ್ತು. ಆ ಪಂದ್ಯದ ಬಳಿಕ ಅಂಪೈರ್​ ಮ್ಯಾರಿಸ್ ಎರಾಸಮ್ಸ್​ರನ್ನ ಪಾಕಿಸ್ತಾನದ 12th ಪ್ಲೇಯರ್ ಅಂತಾನೆ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು.

ಇನ್ನು ರೋಹಿತ್ ಶರ್ಮಾ ಮೇಲಿಂದ ಮೇಲೆ ಸಿಕ್ಸರ್​ ಹೊಡೀತಿದ್ದಾಗ, ಇದೇ ಅಂಪೈರ್​ ನಿಮ್ಮ ಬ್ಯಾಟ್​ನಲ್ಲಿ ಏನೋ ಇದೆ ಅಂತಾ ಕೇಳಿದ್ರಂತೆ. ಆಗ ರೋಹಿತ್​ ನನ್ನ ಮಸಲ್​ ಪವರ್​ನಿಂದಾಗಿ ಸಿಕ್ಸ್ ಹೊಡೀತೀನಿ ಎಂದು ಹೇಳಿದ್ದರು.

Sulekha