ಹಳ್ಳಿಕಾರ್‌ ಒಡೆಯನ ಮನೆಗೆ ಬಂದ ತುಕಾಲಿ ಸಂತುಗೆ ಭರ್ಜರಿ ಗಿಫ್ಟ್‌! – ಸ್ನೇಹಿತನ ಉಡುಗೊರೆಗೆ ಭಾವುಕರಾದ ತುಕಾಲಿ

ಹಳ್ಳಿಕಾರ್‌ ಒಡೆಯನ ಮನೆಗೆ ಬಂದ ತುಕಾಲಿ ಸಂತುಗೆ ಭರ್ಜರಿ ಗಿಫ್ಟ್‌! – ಸ್ನೇಹಿತನ ಉಡುಗೊರೆಗೆ ಭಾವುಕರಾದ ತುಕಾಲಿ

ಇತ್ತೀಚೆಗೆ ಕೊನೆಗೊಂಡ ಬಿಗ್​ಬಾಸ್ ಕನ್ನಡ ಸೀಸನ್ 10 ಈವರೆಗಿನ ಅತ್ಯಂತ ಜನಪ್ರಿಯ ಸೀಸನ್. ಸಾಮಾಜಿಕ ಮಾಧ್ಯಮಗಳ ಮೂಲಕ ಸಕತ್ ಖ್ಯಾತಿ ಮತ್ತು ವೋಟಿಂಗ್‌ನಲ್ಲಿ ಹೆಚ್ಚು ಜನರು ಪಾಲ್ಗೊಂಡ ಶೋ ಇದಾಗಿದೆ. ಪ್ರತಿ ಬಾರಿ ಲವ್ ಸ್ಟೋರಿಗಳಿಂದ ಫೇಮಸ್ ಆಗುತ್ತಿದ್ದ ಬಿಗ್ ಬಾಸ್ ಈ ಬಾರಿ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಸ್ನೇಹದಿಂದ ಹೆಚ್ಚು ಜನರನ್ನು ಆಕರ್ಷಿಸಿದೆ. ಸಂತು -ಪಂತು ನಡುವಿನ ಸ್ನೇಹಕ್ಕೆ ಜನ ಮಾತ್ರವಲ್ಲದೇ ಕಿಚ್ಚ ಸುದೀಪ್‌ ಕೂಡ ಮನಸೋತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ… ಹೊರಗೆ ಹೋದ ಮೇಲೂ ಸ್ನೇಹ ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ್ದ ಇವರು ಅದನ್ನೇ ಮಾಡುತ್ತಿದ್ದಾರೆ. ಅದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಆರ್‌ಸಿಬಿ ಟೀಮ್‌ಗೆ ಇಂಜುರಿ ಶಾಕ್ – ಇಬ್ಬರು ಔಟ್, ಸ್ಟಾರ್ ಬೌಲರ್ ಎಂಟ್ರಿ?

ಬಿಗ್‌ಬಾಸ್‌ ಮುಗಿದ ಬಳಿಕವೂ ತಮ್ಮ ಗೆಳೆತನವನ್ನು ವರ್ತೂರು ಸಂತು ಹಾಗೂ ತುಕಾಲಿ ಸಂತು ಮುಂದುವರೆಸಿದ್ದಾರೆ. ಇದರ ನಡುವೆ ವರ್ತೂರು ಸಂತೋಷ್ ತಮ್ಮ ಮನೆಯಲ್ಲಿ ನಡೆದ ಸಮಾರಂಭಕ್ಕೆ ತುಕಾಲಿ ಸಂತೋಷ್ ಅವರನ್ನು ಕರೆದು, ಅಪರೂಪದ ಉಡುಗೊರೆ ನೀಡಿದ್ದಾರೆ. ತುಕಾಲಿ ಸಂತುಗೆ ಚಿನ್ನದ ಪೆಂಡೆಂಟ್ ಒಂದನ್ನು ವರ್ತೂರು ಸಂತು ನೀಡಿದರು. ಅದರಲ್ಲಿ ಸಂತು ಪಂತು ಎಂದು ಕನ್ನಡದಲ್ಲಿ ಬರೆಸಿದ್ದರು. ಗೆಳೆಯ ಬಂಗಾರದ ಉಡುಗೊರೆಗೆ ತುಕಾಲಿ ಸಂತು ಭಾವುಕರಾದರು.

ವರ್ತೂರು ಸಂತೋಷ್ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಿಗ್‌ಬಾಸ್‌ ಸ್ಪರ್ಧಿಗಳು ಆಗಮಿಸಿದ್ದರು. ಸಂಗೀತಾ, ತುಕಾಲಿ ಸಂತೋಷ್‌, ಮೈಕಲ್‌, ನೀತು ಮುಂತಾದವರು ಆಗಮಿಸಿದ್ದರು. ಇವರಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು ತನಿಷಾ. ತನಿಷಾ ಸಮಾರಂಭಕ್ಕೆ ಆಗಮಿಸುತ್ತಿದ್ದಂತೆ ಬೆಂಕಿ ಬಂದ್ಲು ಅಂತಾ ವರ್ತೂರು ಅಭಿಮಾನಿಗಳು ಹೇಳಿದ್ದಾರೆ. ತನಿಷಾ ಬರುತ್ತಿದ್ದಂತೆ ವರ್ತೂರು ಅವರು ವೆಲ್‌ಕಮ್‌ ಮಾಡಿದ್ದಾರೆ. ಈ ವೇಳೆ ತನಿಷಾ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ವರ್ತೂರು ಸಂತೋಷ್ ತಾಯಿ ಜೊತೆ ತನಿಷಾ ಖುಷಿಖುಷಿಯಿಂದ ಮಾತನಾಡಿದ್ದಾರೆ. ಜೊತೆಗೆ ವರ್ತೂರು ಸಂತೋಷ್ ಅವರ ಕುಟುಂಬದ ಜೊತೆ ತನಿಷಾ ಸಂತೋಷದಿಂದ ಬೆರೆತರು. ಇದನ್ನು ನೋಡಿ ವರ್ತೂರು ಸಂತು ಅಭಿಮಾನಿಗಳು ಅಣ್ಣಂಗೆ ಲವ್ವಾಗಿದೆ ಅಂತಾ ಮನಸಲ್ಲೇ ಹಾಡಿಕೊಳ್ಳುತ್ತಿದ್ದಾರೆ.

ಬಿಗ್‌ಬಾಸ್‌ ಸೀಸನ್ ಆರಂಭದಿಂದಲೂ ಸಂತು ಪಂತು ಇಬ್ಬರೂ ಪರಸ್ಪರ ಗೆಳೆಯರಾಗಿಯೇ ಇದ್ದರು. ಸುದೀಪ್ ಸಹ ಇವರಿಬ್ಬರ ಗೆಳೆತನಕ್ಕೆ ಭೇಷ್ ಎಂದರು. ಇದೀಗ ಈ ಇಬ್ಬರ ಗೆಳೆತನವನ್ನು ಇಟ್ಟುಕೊಂಡೇ ‘ಸಂತು-ಪಂತು’ ಹೆಸರಿನ ಸಿನಿಮಾ ಬರುತ್ತಿದೆ. ಈ ಬಗ್ಗೆ ಸ್ವತಃ ತುಕಾಲಿ ಸಂತು ಅವರೇ ಖಾತ್ರಿ ನೀಡಿದ್ದಾರೆ. ವರ್ತೂರು ಸಂತು ಅವರು ಒಪ್ಪಿಗೆ ನೀಡಿದ ಕೂಡಲೇ ಸಿನಿಮಾ ಪ್ರಾರಂಭವಾಗಲಿದೆ ಎಂದಿದ್ದಾರೆ.

Shwetha M