ಸಮುದ್ರದ ಆಳದಲ್ಲಿ ಬಂಗಾರದ ಮೊಟ್ಟೆ ಪತ್ತೆ.. ಗಿಡದಲ್ಲಿತ್ತು ಅಂಗೈಗಿಂತಲೂ ದೊಡ್ಡದಾದ ಚಿಟ್ಟೆ -ಪ್ರಕೃತಿಯಲ್ಲಿನ ಅಚ್ಚರಿಗಳಿಗೆ ಜನ ಬೆರಗು

ಸಮುದ್ರದ ಆಳದಲ್ಲಿ ಬಂಗಾರದ ಮೊಟ್ಟೆ ಪತ್ತೆ.. ಗಿಡದಲ್ಲಿತ್ತು ಅಂಗೈಗಿಂತಲೂ ದೊಡ್ಡದಾದ ಚಿಟ್ಟೆ -ಪ್ರಕೃತಿಯಲ್ಲಿನ ಅಚ್ಚರಿಗಳಿಗೆ ಜನ ಬೆರಗು

ಸಮುದ್ರದ ಆಳದಲ್ಲಿ ಒಂದಿಲ್ಲೊಂದು ಅಪರೂಪದ ವಸ್ತುಗಳು ಪತ್ತೆಯಾಗುತ್ತವೆ. ಇದೀಗ ಅಲಸ್ಕನ್​ ಸಮುದ್ರದಾಳದಲ್ಲಿ ಪತ್ತೆಯಾದ ಈ ಬಂಗಾರದ ಮೊಟ್ಟೆಯ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತಿವಾಗುತ್ತಿದೆ. ಈ ಮೊಟ್ಟೆ ಯಾವ ಜೀವಿಯದ್ದು ಎಂದು ಪತ್ತೆ ಹಚ್ಚುವ ಸವಾಲು ಸಂಶೋಧಕರ ಬೆನ್ನಿಗಿದೆ. ಪರಿಣತ ವಿಜ್ಞಾನಿಗಳೊಂದಿಗೆ ಸಂಶೋಧನೆ ನಡೆಸಿ ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲಾಗುವುದು ಎಂದು ಈ ಮೊಟ್ಟೆಯನ್ನು ಪತ್ತೆ ಹಚ್ಚಿದ ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ :ಗಾಯಗೊಂಡ ಆನೆ ಕಾಲಿಗೆ ಪಾದರಕ್ಷೆಗಳನ್ನ ರೆಡಿ ಮಾಡಿದ ವೈದ್ಯ – ನೋವು ಕಡಿಮೆಯಾಗಿ ಚೇತರಿಸಿಕೊಳ್ತಿದೆ ಮದಕರಿ

ಭಾರೀ ಅಚ್ಚರಿಗೆ ಕಾರಣವಾಗಿರುವ ಈ ಗುಮ್ಮಟದ ಆಕಾರದಲ್ಲಿರುವ ಈ ಚಿನ್ನದ ಮೊಟ್ಟೆಯು 4 ಇಂಚು ವ್ಯಾಸವನ್ನು ಹೊಂದಿದೆ. ಈ ನಿಗೂಢ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ NOAA ಸಂಶೋಧಕರು ಗೊಂದಲಕ್ಕೆ ಈಡಾಗಿದ್ದಾರೆ. ಇವರು ಅಲಸ್ಕನ್ ಸಮುದ್ರ ಕೊಲ್ಲಿಯ ಬಳಿ ಡೈವಿಂಗ್ ಮಾಡುತ್ತಿರುವ ಹಳದಿ ವಸ್ತುವೊಂದು ಇವರ ಕಣ್ಣಿಗೆ ಬಿದ್ದಿತು. ಆರಂಭದಲ್ಲಿ ಇದನ್ನು ಹಳದಿ ಟೋಪಿ ಎಂದು ಕರೆದರು. ನಂತರ ಬಂಗಾರದ ಮೊಟ್ಟೆ ಎಂದು ಕರೆದರು. ಸಮುದ್ರದಾಳದಲ್ಲಿ ಸಿಕ್ಕ ಈ ನಿಗೂಢ ವಸ್ತುವಿನ ಬಗ್ಗೆ NOAA ತನ್ನ ಬ್ಲಾಗ್​ನಲ್ಲಿ ಫೋಟೋ ಮತ್ತು ವಿವರವನ್ನು ಹಂಚಿಕೊಂಡಿದೆ.

ಮತ್ತೊಂದೆಡೆ ಭಾರತದಲ್ಲಿಯೇ ಅತೀ ದೊಡ್ಡ ಪತಂಗ ಎಂದು ಗುರುತಿಸಲ್ಪಟ್ಟ ಪತಂಗವೊಂದು ಪತ್ತೆಯಾಗಿದೆ. ಅಂಗೈಗಿಂತಲೂ ದೊಡ್ಡ ಗಾತ್ರದ ಅಪರೂಪದ ಪತಂಗ ಪತ್ತೆಯಾಗಿದೆ. ದೊಡ್ಡ ಗಾತ್ರ ಪತಂಗ ( moth, butterfly) ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲ ನಗರದಲ್ಲಿ (Ankola) ಈ ಅಪರೂಪದ ಪ್ರಸಂಗ ನಡೆದಿದೆ. ಭಾರತದಲ್ಲಿಯೇ ಅತೀ ದೊಡ್ಡ ಪತಂಗ ಎಂದು ಗುರುತಿಸಲ್ಪಟ್ಟ ಪತಂಗ ಇದಾಗಿದ್ದು, ಪತಂಗವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ ಸ್ಥಳೀಯ ಜನ. ದೊಡ್ಡ ಗಾತ್ರದ ಪತಂಗ ನೋಡಿ ಸೆಲ್ಫಿ ಪೋಟೋ ಕ್ಲಿಕ್ಕಿಸಿಯೂ ಜನ್ರು ಖುಷಿ ಪಟ್ಟಿದ್ದಾರೆ.

suddiyaana