ಬಾಲಕಿಯ ಹೊಟ್ಟೆಯಲ್ಲಿ ತುಂಬಿಕೊಂಡಿತ್ತು ಮೂರು ಕೆಜಿಯಷ್ಟು ತಲೆ ಕೂದಲು..!

ಬಾಲಕಿಯ ಹೊಟ್ಟೆಯಲ್ಲಿ ತುಂಬಿಕೊಂಡಿತ್ತು ಮೂರು ಕೆಜಿಯಷ್ಟು ತಲೆ ಕೂದಲು..!

ಬೀಜಿಂಗ್: ಕರ್ನಾಟಕದಲ್ಲಿ ಒಬ್ಬ ವ್ಯಕ್ತಿ ನಾಣ್ಯ ತಿನ್ನುತ್ತಾ ತಿನ್ನುತ್ತಾ ಬರೋಬ್ಬರಿ 187 ನಾಣ್ಯಗಳನ್ನ ನುಂಗಿ ಕೊನೆಗೂ ಹೊಟ್ಟೆನೋವು ಅಂತಾ ಆಸ್ಪತ್ರೆ ಪಾಲಾಗಿದ್ದ. ಈಗ ಚೀನಾದಲ್ಲಿ ಬಾಲೆಯೊಬ್ಬಳು ತನ್ನದೇ ಕೂದಲನ್ನು ತಿಂದೂ ತಿಂದೂ ಹೊಟ್ಟೆನೋವು ತರಿಸಿಕೊಂಡಿದ್ದಾಳೆ.

ಚೀನಾ ದೇಶದ ಶಾಂಕ್ಸಿ ಪ್ರಾಂತ್ಯದ 14 ವರ್ಷದ ಹುಡುಗಿ ಪಿಕಾ, ತನ್ನದೇ ಕೂದಲನ್ನು ಬಾಯಲ್ಲಿಟ್ಟು ಜಗಿಯುತ್ತಾ ಇರುತ್ತಿದ್ದಳಂತೆ. ನಂತರ ಅದನ್ನೇ ನುಂಗಿ ಬಿಡುತ್ತಿದ್ದಳು. ಹೀಗೆ ಕೂದಲನ್ನು ತಿನ್ನುವ ಚಟ ಹೊಂದಿದ್ದ ಬಾಲಕಿ, ಕೊನೆಗೂ ತನ್ನದೇ ತಲೆಯಲ್ಲಿದ್ದ ಮೂರು ಕೆ.ಜಿ ಕೂದಲನ್ನು ತಿಂದಿದ್ದಾಳೆ.

ಇದನ್ನೂ ಓದಿ :  187 ನಾಣ್ಯಗಳನ್ನು ನುಂಗಿದ ದ್ಯಾಮಣ್ಣ – ದಿನಕ್ಕೊಂದು ನಾಣ್ಯ ನುಂಗಿದವನು ಹೇಳಿದ್ದೇನು?

14 ವರ್ಷದ ಹುಡುಗಿ ಪಿಕಾಳಿಗೆ ತನ್ನ ಕೂದಲನ್ನು ತಿನ್ನುವ ಅಭ್ಯಾಸ ಎಷ್ಟಿತ್ತು ಅಂದರೆ, ಕೊನೆ ಕೊನೆಗೆ ಆಕೆಯ ತಲೆಯೇ ಬೋಳಾಗಿ ಹೋಗಿದೆ. ಪಿಕಾ ತಂದೆ- ತಾಯಿ ಕೆಲಸದ ನಿಮಿತ್ತ ದೂರದ ಊರಿನಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಆಕೆ ಅಜ್ಜಿಯ ಜೊತೆ ಇದ್ದಳು. ಅಜ್ಜಿಗೆ ವಯಸ್ಸಾಗಿದ್ದರಿಂದ ಪಿಕಾ ಅನಾರೋಗ್ಯಕ್ಕೆ ತುತ್ತಾಗುವವರೆಗೂ ಗಮನಿಸಿರಲಿಲ್ಲ.  ಪಿಕಾಳಿಗೆ ದಿನ ಕಳೆದಂತೆ ಆಹಾರವನ್ನು ಸೇವಿಸಲು ಅಸಾಧ್ಯವಾಗಿತ್ತು. ಇದರಿಂದ ಗಾಬರಿಯಾದ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಸ್ಕ್ಯಾನಿಂಗ್ ಮಾಡಿದಾಗ ರಿಪೋರ್ಟ್‍ನಲ್ಲಿ ರಾಶಿ ರಾಶಿ ಕೂದಲು ಕಂಡುಬಂದಿರುವುದನ್ನು ನೋಡಿ ದಂಗಾಗಿದ್ದಾರೆ. ಹೊಟ್ಟೆಯ ತುಂಬೆಲ್ಲಾ ಕೂದಲು ತುಂಬಿಕೊಂಡಿದ್ದು, ಕರುಳು ಕೂಡ ಬ್ಲಾಕ್ ಆಗಿತ್ತು.

ಈ ಹಿನ್ನೆಲೆಯಲ್ಲಿ ವೈದ್ಯರು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪಿಕಾ ಒಪ್ಪಿಕೊಂಡಳು. ಅದಾದ ಬಳಿಕ ವೈದ್ಯರು ಸತತ 2 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ, ಆಕೆಯ ಹೊಟ್ಟೆಯಲ್ಲಿದ್ದ 3 ಕೆ.ಜಿ ತೂಕದ ಕೂದಲಿನ ಉಂಡೆಯನ್ನು ತೆಗೆದಿದ್ದಾರೆ.

suddiyaana