ಸರ್ಫರಾಜ್ ಖಾನ್ ಅವರ ತಂದೆಗೆ ಆನಂದ್ ಮಹೀಂದ್ರ ಅವರಿಂದ ಗಿಫ್ಟ್ – ಕಾರು ನೋಡಿ ನೌಶಾದ್ ಖಾನ್ ಭಾವುಕ

ಸರ್ಫರಾಜ್ ಖಾನ್ ಅವರ ತಂದೆಗೆ ಆನಂದ್ ಮಹೀಂದ್ರ ಅವರಿಂದ ಗಿಫ್ಟ್ – ಕಾರು ನೋಡಿ ನೌಶಾದ್ ಖಾನ್ ಭಾವುಕ

ಟೀಮ್ ಇಂಡಿಯಾಕ್ಕೆ ಕಾಲಿಟ್ಟ ಮೊದಲ ಪಂದ್ಯದಲ್ಲೇ ಸರ್ಫರಾಜ್ ಖಾನ್ 62 ರನ್‌ಗಳ ಗಿಫ್ಟ್ ನೀಡಿದ್ದರು. ಇಂಗ್ಲೆಂಡ್ ವಿರುದ್ಧದ ರಾಜ್ಕೋಟ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿದರು. ಇದೀಗ ಬಡ ಕುಟುಂಬದ ಸರ್ಫರಾಜ್ ಖಾನ್ ಅವರ ತಂದೆಗೆ ಆನಂದ್ ಮಹೀಂದ್ರ ಅವರು ಉಡುಗೊರೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ:ಟೀಮ್ ಇಂಡಿಯಾ ಬೋನಸ್ ರನ್ ಆಂಗ್ಲರಿಗೆ ಬಿಟ್ಟು ಕೊಟ್ಟಿದ್ದು ಹೇಗೆ? – ನಿಯಮದ ಪಾಠ ಮಾಡುವವರೇ ನಿಯಮ ಮರೆತರಾ?

ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಯಂಗ್ ಸ್ಟಾರ್ ಸರ್ಫರಾಜ್ ಖಾನ್ ಮಿಂಚಿದ್ದಾರೆ. ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ್ದಾರೆ. ಚೊಚ್ಚಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಸರ್ಫರಾಜ್ ಖಾನ್ ತಂದೆಗೆ ಆನಂದ್ ಮಹೀಂದ್ರ ಅವರು ಉಡುಗೊರೆ ನೀಡಿದ್ದಾರೆ.

ಸರ್ಫರಾಜ್ ಖಾನ್ ತಂದೆ ನೌಶಾದ್ ಖಾನ್‌ಗೆ ಆನಂದ್ ಮಹೀಂದ್ರ ಅವರು ಥಾರ್ ಎಸ್‌ಯುವಿ  ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಬಡ ಕುಟುಂಬಕ್ಕೆ ಆಸರೆಯಾಗುವ ಮೂಲಕ ಆನಂದ್ ಮಹೀಂದ್ರಾ ಮತ್ತೊಮ್ಮೆ ಕೋಟ್ಯಂತರ ಜನರ ಮನ ಗೆದ್ದಿದ್ದಾರೆ. ಮಹೀಂದ್ರಾ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಥಾರ್‌ ಉಡುಗೊರೆಯ ಬಗ್ಗೆ ಘೋಷಿಸಿದರು. ಕಠಿಣ ಪರಿಶ್ರಮ, ಶೌರ್ಯ, ತಾಳ್ಮೆ ಮಗುವಿನಲ್ಲಿ ಸ್ಫೂರ್ತಿ ತುಂಬಲು ತಂದೆಗೆ ಇದಕ್ಕಿಂತ ಉತ್ತಮವಾದ ಗುಣ ಯಾವುದು?. ಸ್ಪೂರ್ತಿದಾಯಕ ಪೋಷಕರಾಗಿರುವುದರಿಂದ, ನೌಶಾದ್ ಖಾನ್ ಅವರು ಥಾರ್ ಉಡುಗೊರೆಯನ್ನು ಸ್ವೀಕರಿಸಿದರೆ ಅದು ನನ್ನ ಸಂತೋಷ ಮತ್ತು ಗೌರವ, ಎಂದು ಬರೆದುಕೊಂಡಿದ್ದಾರೆ.

ಇನ್ನು ಸರ್ಫರಾಜ್ ಖಾನ್ ಅವರ ಚೊಚ್ಚಲ ಪಂದ್ಯವನ್ನು ವೀಕ್ಷಿಸಲು ರಾಜ್ಕೋಟ್‌ಗೆ ಬರುವುದಿಲ್ಲ, ಬಂದರೆ ಆತ ಒತ್ತಡಕ್ಕೆ ಒಳಗಾಗುತ್ತಾನೆ ಎಂದು ಅವರ ತಂದೆ ನೌಶಾದ್ ಖಾನ್ ಹೇಳಿದ್ದರಂತೆ. ಆದರೆ, ಇವರ ಈ ನಿರ್ಧಾರವನ್ನು ಬದಲಾಯಿಸಿದ್ದು ಸೂರ್ಯಕುಮಾರ್ ಯಾದವ್. ಸೂರ್ಯನ ಒಂದು ಸಂದೇಶದಿಂದಾಗಿ ಅವರು ರಾಜ್‌ಕೋಟ್‌ಗೆ ಬರುವಂತಾಯಿತು. ಸೂರ್ಯಕುಮಾರ್ ಯಾದವ್ ತಮ್ಮ ಸಂದೇಶದಲ್ಲಿ, ನಾನು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲೆ, ಆದರೆ ನಾನು ಕಳೆದ ವರ್ಷ ಮಾರ್ಚ್‌ನಲ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದಾಗ, ನನ್ನ ಟೆಸ್ಟ್ ಕ್ಯಾಪ್ ಪಡೆಯುವಾಗ ನನ್ನ ಪೋಷಕರು ನನ್ನೊಂದಿಗೆ ಇದ್ದರು. ಈ ಕ್ಷಣ ಬಹಳ ವಿಶೇಷವಾಗಿತ್ತು. ಈ ಕ್ಷಣಗಳು ಪುನಃ ಬರುವುದಿಲ್ಲ. ಅದಕ್ಕಾಗಿಯೇ ನೀವು ಖಂಡಿತವಾಗಿಯೂ ಹೋಗಬೇಕು, ಎಂದು ನೌಶಾದ್ ಖಾನ್‌ಗೆ ಮೆಸೇಜ್ ಮಾಡಿದ್ದರಂತೆ. ಹೀಗಾಗಿ ಸರ್ಫರಾಜ್ ಖಾನ್ ಪಂದ್ಯ ನೋಡಲು ತಂದೆ ಬಂದಿದ್ದರು. ಮಗನ ಸಾಧನೆಯ ಸುಂದರ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದರು.

Sulekha