ಅದು ನಾಯಿ ಮರಿ ಅಲ್ಲ ಕಣೋ.. ಕಾಳಿಂಗ ಸರ್ಪ.. – ವಿಷ ಸರ್ಪಕ್ಕೆ ಸ್ನಾನ ಮಾಡಿಸಿದ ಭೂಪ!

ಅದು ನಾಯಿ ಮರಿ ಅಲ್ಲ ಕಣೋ.. ಕಾಳಿಂಗ ಸರ್ಪ.. – ವಿಷ ಸರ್ಪಕ್ಕೆ ಸ್ನಾನ ಮಾಡಿಸಿದ ಭೂಪ!

ಹಾವು ಅಪಾಯಕಾರಿ ಜೀವಿ. ಹಾವು.. ಅಂತಾ ಯಾರಾದರೂ ಸುಮ್ಮನೆ ಹೇಳಿದ್ರೂ ಸಾಕು ಮೈ ನಡುಕ ಬರುತ್ತದೆ. ಇನ್ನು ಕೆಲವರಂತೂ ಹಾವನ್ನು ಕಂಡರೆ ಕುಸಿದು ಬೀಳ್ತಾರೆ. ಹಾವುಗಳು ಕಚ್ಚಿ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಕೆಲವರು ವಿಷಕಾರಿ ಹಾವಿನೊಂದಿಗೆ ಹುಚ್ಚುತನ ಮೆರೆದು ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಇಲ್ಲೊಬ್ಬ ವ್ಯಕ್ತಿ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಲು ಹೊರಟಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಕಾಳಿಂಗ ಸರ್ಪ ಅತ್ಯಂತ ಅಪಾಯಕಾರಿಯಾಗಿದೆ. ಈ ಹಾವು ಇದೆ ಅಂತಾ ಗೊತ್ತಾದರೆ ಯಾರು ಹಾವಿರುವ ಪ್ರದೇಶಕ್ಕೆ ಹೋಗುವುದಿಲ್ಲ. ಆದರೂ ಕೆಲವರು ಹಾವುಗಳನ್ನು ಮನೆಯಲ್ಲಿ ಸಾಕುವುದುಂಟು. ಇಂತಹ ಅನೇಕ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅಲ್ಲದೆ ಉರಗ ತಜ್ಞರು ದೈತ್ಯ ಹಾವುಗಳನ್ನು ಹಿಡಿಯುವಂತಹ ಭಯಾನಕ ವೀಡಿಯೋಗಳು ಕೂಡಾ ಆಗಾಗ ವೈರಲ್ ಆಗುತ್ತಿರುತ್ತವೆ. ಹಾವನ್ನು ಕಂಡು ಎಲ್ಲರೂ ಭಯಬೀತರಾಗಿ ಓಡಿ ಹೋದರೆ, ಇಲ್ಲೊಬ್ಬ ವ್ಯಕ್ತಿ ಯಾವುದೇ ಭಯವಿಲ್ಲದೆ ನಾಯಿ ಬೆಕ್ಕುಗಳಿಗೆ ಸ್ನಾನ ಮಾಡಿಸುವ ಹಾಗೆ ಭಾರಿ ಗಾತ್ರದ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸಿದ್ದಾನೆ. ಈತನ ಭಂಡ ಧೈರ್ಯಕ್ಕೆ ಏನು ಹೇಳಬೇಕೋ ಗೊತ್ತಿಲ್ಲ. ಸದ್ಯ ಆ ವ್ಯಕ್ತಿ ಹಾವಿಗೆ ಸ್ನಾನ ಮಾಡಿಸುತ್ತಿರುವ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿದೀಪಾವಳಿಗೆ ಕೇಂದ್ರ ಸರ್ಕಾರದಿಂದ ಬಂಪರ್‌ – ಸರ್ಕಾರಿ ನೌಕರರಿಗೆ ಸಿಗಲಿದೆ 7,000 ರೂಪಾಯಿ ಬೋನಸ್‌!

ಈ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಸಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 19 ಸೆಕೆಂಡುಗಳ ಈ ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ದೈತ್ಯ ಗಾತ್ರದ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸುವುದನ್ನು ಕಾಣಬಹುದು. ಸ್ನಾನಗೃಹದಲ್ಲಿ  ಹಾವನ್ನು ಬಿಟ್ಟು ಮಗ್ನಲ್ಲಿ ಹಾವಿನ ತಲೆ ಮೇಲೆ ನೀರು ಸುರಿಯುತ್ತಾ ಸ್ನಾನ ಮಾಡಿಸುತ್ತಾನೆ.  ಹೀಗೆ ಸ್ನಾನ ಮಾಡಿಸುತ್ತಿರುವಾಗ ನನಗೆ ಸ್ನಾನ ಸಾಕು ಎಂದು ಕಾಳಿಂಗ ಸರ್ಪ ಆ ವ್ಯಕ್ತಿಯ ಕೈಯಲ್ಲಿದ್ದ ಮಗ್ ಅನ್ನು ಕಚ್ಚಿ ಹಿಡಿದುಕೊಳ್ಳುತ್ತದೆ. ಆದರೂ ಸುಮ್ಮನಿರದ ಆತ ಮತ್ತೆ ನೀರು ಸುರಿಯುತ್ತಾನೆ. ಈ ವೇಳೆ ಹಾವು ತಪ್ಪಿಸಿಕೊಳ್ಳಲು ಮುಂದಾಗುತ್ತದೆ. ಏ ಸುಮ್ಮನೆ ಸ್ನಾನ ಮಾಡು ಅಂತಾ ಮಕ್ಕಳನ್ನು ಎಳೆದು ತಂದು ಕೂರಿಸಿ ಸ್ನಾನ ಮಾಡಿಸಿದಂತೆ ಹಾವಿಗೂ ಆತ ಸ್ನಾನ ಮಾಡಿಸಿದ್ದಾನೆ. ಈ ವಿಡಿಯೋವನ್ನು ಕಂಡ ಜನರು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ. ಈತನ ಭಂಡ ಧೈರ್ಯವನ್ನು ಮೆಚ್ಚಲೇಬೇಕು ಅಂತಾ ನೋಡುಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Shwetha M