ಹಸು ಸಾಕಾಣಿಕೆಯಿಂದಲೇ ಅದೆಷ್ಟೋ ಯುವಕರಿಗೆ ಸ್ಪೂರ್ತಿ – ಕೋಟಿ ಬೆಲೆಯ ಬಂಗಲೆ ಕಟ್ಟಿದ ರೈತನಿಗೆ ಶಹಬ್ಬಾಸ್ ಗಿರಿ..!

ಹಸು ಸಾಕಾಣಿಕೆಯಿಂದಲೇ ಅದೆಷ್ಟೋ ಯುವಕರಿಗೆ ಸ್ಪೂರ್ತಿ – ಕೋಟಿ ಬೆಲೆಯ ಬಂಗಲೆ ಕಟ್ಟಿದ ರೈತನಿಗೆ ಶಹಬ್ಬಾಸ್ ಗಿರಿ..!

ಮಹಾರಾಷ್ಟ್ರದ ಸೋಲಾಪುರದ ರೈತರೊಬ್ಬರು ಕೇವಲ ಹಸುವಿನ ಹಾಲು ಮಾರಾಟ ಮಾಡಿ ಗಳಿಸಿದ ಹಣದಿಂದ ಒಂದು ಕೋಟಿ ರೂಪಾಯಿ ಮೌಲ್ಯದ ಬಂಗಲೆ ಹೊಂದಿದ್ದಾರೆ. ಅಂದ ಹಾಗೆ ಅವರ ಈ ಯಶಸ್ಸಿನ ಕಥೆ ಶುರುವಾಗಿದ್ದು ಕೂಡಾ ಕೇವಲ ಒಂದು ಹಸುವಿನ ಮೂಲಕವೇ. ಇವತ್ತು ಅವರು ಸುಮಾರು 150 ಕ್ಕೂ ಹಸುಗಳೊಂದಿಗೆ ಡೈರಿ ಫಾರ್ಮ್ ಅನ್ನು ನಡೆಸುತ್ತಿದ್ದಾರೆ. ಇವರ ಈ ಯಶಸ್ಸಿನ ಯಶೋಗಾಥೆಯು ಅದೆಷ್ಟೋ ಸ್ವಾವಲಂಬನೆಯ ಬದುಕಿನ ಕನಸಿನಲ್ಲಿರುವವರಿಗೆ ಸ್ಪೂರ್ತಿಯ  ಬೂಸ್ಟ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಎಡಪಂಥೀಯ ಮಹಿಳೆಯರಿಂತ ಬಲಪಂಥೀಯರೇ ಹೆಚ್ಚು ಸಂತೋಷದಿಂದ ಇರುತ್ತಾರೆ! – ಇದು ಭಾವನೆಗಳ ವಿಮರ್ಶೆ!

ಮಹಾರಾಷ್ಟ್ರದ ಸೋಲಾಪುರದ ರೈತ ಪ್ರಕಾಶ್ ಇಮ್ಡೆ ಈಗ ಒಂದು ಕೋಟಿ ರೂಪಾಯಿ ಮೌಲ್ಯದ ಬಂಗಲೆಯ ಒಡೆಯರಾಗಿದ್ದಾರೆ. ಕೇವಲ ಹಸುವಿನ ಹಾಲನ್ನ ಮಾರಾಟ ಮಾಡಿಯೇ ಕೋಟ್ಯಧಿಪತಿಯಾದ ಇಮ್ಡೆ ಅವರಿಗೆ ಗೋವುಗಳ ಮೇಲೆ ಅದೆಷ್ಟು ಪ್ರೀತಿ ಮತ್ತು ಗೌರವ ಅಂದರೆ ತಾವು ನಿರ್ಮಿಸಿದ ಬಂಗಲೆಗೆ ಗೋಧನ್ ನಿವಾಸ ಎಂದು ಹೆಸರಿಟ್ಟಿದ್ದಾರೆ. ಪ್ರಕಾಶ್ ಇಮ್ಡೆ ಅವರು ಯಶೋಗಾಥೆಯು ಪೂರ್ವಜರ ನಾಲ್ಕು ಎಕರೆ ಜಮೀನಿನಿಂದ ಆರಂಭವಾಗುತ್ತದೆ. ಪಿತ್ರಾರ್ಜಿತವಾಗಿ ಬಂದ ಭೂಮಿ ಶುಷ್ಕ ಮತ್ತು ಕೃಷಿ ಮಾಡಲು ಅಸಾಧ್ಯವೆಂದು ತಿಳಿದಾಗ ಕೃಷಿ ಬಿಟ್ಟು 1998ರಲ್ಲಿ ಹಸುವಿನ ಹಾಲು ಮತ್ತು ಸಗಣಿ ಮಾರಾಟ ಮಾಡುವ ಉದ್ಯಮವನ್ನ ಆರಂಭಿಸುತ್ತಾರೆ. ಪ್ರಾರಂಭದಲ್ಲಿ ಇವರು ತಮ್ಮ ಗ್ರಾಮದ ನಿವಾಸಿಗಳಿಗೆ ಮಾತ್ರ ಹಾಲು ಮಾರುತ್ತಿದ್ದರು. ಕೇವಲ ಒಂದು ಹಸುವಿನ ಮೂಲಕ ಪ್ರಾರಂಭವಾದ ಈ ವ್ಯಾಪಾರವು ಈಗ 150 ಕ್ಕೂ ಹೆಚ್ಚು ಹಸುಗಳೊಂದಿಗೆ ಡೈರಿ ಫಾರ್ಮ್ ಅನ್ನು ವಿಸ್ತರಿಸಿದ್ದಾರೆ. ಪ್ರಸ್ತುತ ಫಾರ್ಮ್ ದಿನಕ್ಕೆ 1,000 ಲೀಟರ್ ಹಾಲು ಉತ್ಪಾದಿಸುತ್ತದೆ. ಇಮ್ಡೆ ಅವರ ಇಡೀ ಕುಟುಂಬವು ಪ್ರತಿ ಹಂತದಲ್ಲೂ ವ್ಯಾಪಾರಕ್ಕೆ ಸಹಾಯ ಮಾಡುತ್ತದೆ.

ಹಸುಗಳಿಗೆ ಹಾಲುಣಿಸುವುದು, ಅವುಗಳಿಗೆ ಆಹಾರ ನೀಡುವುದರಿಂದ ಹಿಡಿದು ಅವುಗಳ ಪೋಷಣೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನ ಪ್ರಕಾಶ್ ಅವರ  ಕುಟುಂಬವು ನೋಡಿಕೊಳ್ಳುತ್ತದೆ.

ಪ್ರಕಾಶ್ ಇಮ್ಡೆ ಅವರು ಇದುವರೆಗೂ ತಮ್ಮ ಒಂದು ಕರುವನ್ನೂ ಮಾರಾಟ ಮಾಡಿಲ್ಲ. ಹಾಗಾಗಿಯೇ ಇಂದಿಗೂ ಅವರ ಬಳಿ 150ಕ್ಕೂ ಹೆಚ್ಚು ಹಸುಗಳಿವೆ. 2006 ರಲ್ಲಿ ಅವರ ಮೊದಲ ಹಸು ಲಕ್ಷ್ಮಿ ಮರಣದ ನಂತರ, ಅವರು ಅದರ ವಂಶಾವಳಿಯನ್ನು ಮುಂದುವರೆಸಿದರು ಮತ್ತು ಅದೇ ಹಸುಗಳ ವಂಶದಿಂದ ಫಾರ್ಮ್ ಅನ್ನು ನಡೆಸುತ್ತಿದ್ದಾರೆ. ಹಸುಗಳಿಗೆ ದಿನಕ್ಕೆ ನಾಲ್ಕೈದು ಟನ್‌ಗಳಷ್ಟು ಹಸಿರು ಮೇವು ಬೇಕಾಗುತ್ತದೆ. ಅವರು ಸಾಧ್ಯವಾದಷ್ಟು ಜಮೀನಿನಲ್ಲಿ ಬೆಳೆದು ಉಳಿದದ್ದನ್ನು ಹೊರಗಿನ ಮೂಲಗಳಿಂದ ಖರೀದಿಸಿಕೊಳ್ಳುತ್ತಾರೆ.

ಪ್ರಕಾಶ್ ಅವರ ಡೈರಿ ಫಾರ್ಮ್ ಇವತ್ತು ನಿರುದ್ಯೋಗಿಗಳಿಗೆ ಉದ್ಯೋಗವನ್ನ ಕಲ್ಪಿಸಿದೆ. ಅದೆಷ್ಟೋ ಸ್ವಾವಲಂಬನೆಯ ಕನಸ್ಸಿನಲ್ಲಿರುವ ಯುವಕರು ಇವರ ಬಳಿ ಬಂದು ಕಲಿಯುತ್ತಾರೆ. ಪ್ರಕಾಶ್ ಅವರ ಹಲವು ವರ್ಷಗಳ ನಿರಂತರ ಪ್ರಯತ್ನವು ಇದೀಗ 1 ಕೋಟಿ ರೂಪಾಯಿ ಮೌಲ್ಯದ ಬಂಗಲೆಯಾಗಿ ರೂಪುಗೊಂಡಿದೆ. ಬಂಗಲೆಯ ಮೇಲೆ ಹಸುವಿನ ಪ್ರತಿಮೆ ಮತ್ತು ಹಾಲಿನ ಮಂಥನವು ಎತ್ತರವಾಗಿ ನಿಂತಿದೆ. ಇದು ಅವರ ಪ್ರತಿದಿನದ ಕೆಲಸಕ್ಕೆ ಸೂರ್ತಿಯನ್ನ ನೀಡುತ್ತದೆ.

suddiyaana