ಕೊಲ್ಲೂರು ಮೂಕಾಂಬಿಕೆ ದೇಗುಲದ ಹೆಸರಿನಲ್ಲಿ ನಕಲಿ ಟ್ರಸ್ಟ್! – ಸೋಶಿಯಲ್‌ ಮೀಡಿಯಾ ಮೂಲಕ ಹಣಕ್ಕೆ ಬೇಡಿಕೆ!

ಕೊಲ್ಲೂರು ಮೂಕಾಂಬಿಕೆ ದೇಗುಲದ ಹೆಸರಿನಲ್ಲಿ ನಕಲಿ ಟ್ರಸ್ಟ್! – ಸೋಶಿಯಲ್‌ ಮೀಡಿಯಾ ಮೂಲಕ ಹಣಕ್ಕೆ ಬೇಡಿಕೆ!

ಇತ್ತೀಚಿನ ದಿನಗಳಲ್ಲಿ ಅಡ್ಡದಾರಿ ಹಿಡಿದು ಹಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಜನರ ಹೆಸರು, ಸಂಸ್ಥೆ ಹೆಸರು ಹೇಳಿಕೊಂಡು ದುಡ್ಡು ಮಾಡುತ್ತಾರೆ. ಇದೀಗ ದೇವರ ಹೆಸರು ಹೇಳಿಕೊಂಡು ಹಣ ಮಾಡಲು ಕಿಡಿಗೇಡಿಗಳು ಹೊರಟಿದ್ದಾರೆ. ಕೊಲ್ಲೂರು ಮೂಕಾಂಬಿಕೆಯ ಹೆಸರಿನಲ್ಲಿ ನಕಲಿ ಟ್ರಸ್ಟ್  ಶುರುವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕೊಲ್ಲೂರು ಡಿವೋಟಿಸ್ ಟ್ರಸ್ಟ್ ಅನ್ನುವ ನಕಲಿ ಲಿಂಕ್ ಹರಿದಾಡುತ್ತಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ದೋಷ – ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯ, ಪ್ರಯಾಣಿಕರ ಪರದಾಟ

ಹೌದು, 2022ರಿಂದ ಕೊಲ್ಲೂರು ಮೂಕಾಂಬಿಕೆ ಹೆಸರಿನಲ್ಲಿ ನಕಲಿ ಟ್ರಸ್ಟ್‌ ಶುರುವಾಗಿದೆ. ಈ ಟ್ರಸ್ಟ್ ಹೆಸರಿನಲ್ಲಿ ಭಕ್ತರಿಗೆ ಮಕ್ಮಲ್ ಟೋಪಿ ಹಾಕುತ್ತಿರೋದು ಗಮನಕ್ಕೆ ಬಂದಿದೆ. ಸೋಶಿಯಲ್‌ ಮೀಡಿಯಾ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ದೇಗುಲಕ್ಕೆ ದೇಣಿಗೆ ಹರಕೆ ಸಲ್ಲಿಸುವ ಭಕ್ತರು ಇದರಲ್ಲಿ ದುಡ್ಡನ್ನು ಕಳಿಸಿದ್ದಾರೆ. ಭಕ್ತರೊಬ್ಬರು ಹಣ ಕಳಿಸಿರುವ ಬಗ್ಗೆ ದೇಗುಲಕ್ಕೆ ಇ-ಮೇಲ್ ಮಾಡಿದಾಗ ಈ ಅಕೌಂಟ್‍ಗೂ ದೇವಸ್ಥಾನಕ್ಕೂ ಸಂಬಂಧ ಇಲ್ಲ ಅಂತಾ ಗೊತ್ತಾಗಿದೆ. ಹೀಗಾಗಿ ಭಕ್ತರಾಗಿರುವ ರಾಘವೇಂದ್ರ ಹಾಗೂ ಧನಂಜಯ್ ಈ ಟ್ರಸ್ಟ್ ವಿರುದ್ಧ ಈಗ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎಂದು ವರದಿಯಾಗಿದೆ.

ಈ ನಕಲಿ ಟ್ರಸ್ಟ್‌ ಕೇರಳ ಮೂಲದಲ್ಲಿ ನೋಂದಣಿಯಾಗಿರೋದು ಗೊತ್ತಾಗಿದೆ. ದೇಗುಲದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರನ್ನು ವಂಚಿಸಲಾಗುತ್ತಿದೆ. ಕೋಟಿ ಕೋಟಿ ದುಡ್ಡನ್ನು ಈ ಟ್ರಸ್ಟ್ ಲಪಟಾಯಿಸಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ದೇಗುಲದ ಆಡಳಿತ ಮಂಡಳಿಯ ಗಮನಕ್ಕೆ ಬಾರದೇ ಇದ್ದಿದ್ದು ಅಚ್ಚರಿ ಅನ್ನೋದು ಭಕ್ತರ ಅಸಮಾಧಾನ. ಹೀಗಾಗಿ ಈ ಬಗ್ಗೆ ಮುಜರಾಯಿ ಇಲಾಖೆ ಸೂಕ್ತ ತನಿಖೆ ಮಾಡಬೇಕಾಗಿದೆ.

Shwetha M