52 ವರ್ಷಗಳ ನಂತರ ನನಸಾದ ಚಂದ್ರಯಾನದ ಕನಸು – ಡಿಸೆಂಬರ್ 11 ಕ್ಕೆ ಮರಳಿಬರಲಿದೆ ಒರಾಯನ್ ನೌಕೆ
ಆರ್ಟಿಮಿಸ್-1 ಮಿಷನ್ ನ ಹೊತ್ತು ಸಾಗಿದ ಒರಾಯನ್ ನೌಕೆ ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಕಾಲಿಟ್ಟಿದೆ. ಫ್ಲೋರಿಡಾ ದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ನವೆಂಬರ್ 16 ರಂದು ಉಡಾವಣೆಯಾದ ಒರಾಯನ್ ಬಾಹ್ಯಾಕಾಶ ನೌಕೆ ಒಂದು ವಾರದ ನಂತರ ಅಂದರೇ ನವೆಂಬರ್ 25 ರಂದು 4,32,192 ಕಿಲೋಮೀಟರ್ ಗಳನ್ನ ದಾಟಿ ಚಂದ್ರನ ಕಕ್ಷೆಗೆ ಪ್ರವೇಶ ಮಾಡುವ ಮೂಲಕ 52 ವರುಷಗಳ ಹಿಂದೆ ಅಪೋಲೊ-13 ನಿರ್ಮಿಸಲು ವಿಫಲವಾದ ದಾಖಲೆಯನ್ನ ಮುರಿದಿದೆ.
ಇದನ್ನೂ ಓದಿ : ಬಾಲಕಿಯ ಹೊಟ್ಟೆಯಲ್ಲಿ ತುಂಬಿಕೊಂಡಿತ್ತು ಮೂರು ಕೆಜಿಯಷ್ಟು ತಲೆ ಕೂದಲು..!
1970 ರಲ್ಲಿ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಅಪೋಲೊ-13 ಚಂದ್ರನ ಮೇಲೆ ಇಳಿಯುವ ಉದ್ದೇಶ ಹೊಂದಿತ್ತು. ಆದರೆ 4,00,171 ಕಿಲೋಮೀಟರ್ಸ್ ದಾಟಿದ್ದ ಅಪೋಲೊ-13 ನೌಕೆ ಗೆ ಸರ್ವಿಸ್ ಮೊಡ್ಯೂಲ್ ನಲ್ಲಿ ಇದ್ದ ಆಮ್ಲಜನಕ ಟ್ಯಾಂಕ್ ಸ್ಫೋಟದ ಸಮಸ್ಯೆ ಎದುರಾಗಿತ್ತು. ಆದರೂ ಕೂಡಾ ಆಪತ್ತಿನಲ್ಲಿದ್ದ ಬಾಹ್ಯಾಕಾಶ ನೌಕೆಯಿಂದ ಗಗನಯಾತ್ರಿಗಳನ್ನ ಸುರಕ್ಷಿತವಾಗಿ ಭೂಮಿಗೆ ಇಳಿಸುವ ಮೂಲಕ ಯಶಸ್ವಿಯಾಗಿದ್ದರು.
ಒರಾಯನ್ ನೌಕೆ ತನ್ನ ಕಾರ್ಯಚರಣೆಯ 13 ನೇ ದಿನದಲ್ಲಿ ಇದ್ದು ಗಂಟೆಗೆ 4,200 ಕಿಲೋಮೀಟರ್ಸ್ ವೇಗದಲ್ಲಿ ಚಲಿಸಿ ಚಂದ್ರನ ಕಕ್ಷೆಗೆ ಇಳಿದಿದೆ. ಆರ್ಟಿಮಿಸ್ -1 ಮಿಷನ್ ಇದೂ 25 ದಿನಗಳ ಕಾರ್ಯಚರಣೆಯಾಗಿದ್ದು ಮನುಷ್ಯರನ್ನ ಚಂದ್ರನಲ್ಲಿ ಇಳಿಸುವ ಕಾರ್ಯಸಾಧ್ಯತೆಯನ್ನ ಪ್ರದರ್ಶಿಸುವ ಗುರಿ ಹೊಂದಿದೆ. ಚಂದ್ರನ ಮೇಲ್ಮೈಯಿಂದ ಸರಿಸುಮಾರು 80,467 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವುದರಿಂದ ಕಕ್ಷೆಯು ತುಂಬಾ ದೂರದಲ್ಲಿದೆ. ‘ಕಕ್ಷೆಯು ತುಂಬಾ ದೊಡ್ಡದಾಗಿದೆ, ಭೂಮಿಗೆ ಹಿಂದಿರುಗುವ ಪ್ರಯಾಣಕ್ಕಾಗಿ ಕಕ್ಷೆಯಿಂದ ನಿರ್ಗಮಿಸುವ ಮೊದಲು ಚಂದ್ರನ ಸುತ್ತಲಿನ ಅರ್ಧದಷ್ಟು ತಿರುಗುವಿಕೆಯನ್ನ ಪೂರ್ಣಗೊಳಿಸಲು ಬಾಹ್ಯಾಕಾಶ ನೌಕೆ ಆರು ದಿನಗಳನ್ನು ತೆಗೆದುಕೊಳ್ಳುತ್ತದೆ’ ಎಂದು ನಾಸಾ ತನ್ನ ವೆಬ್ ಸ್ಟೈನ್‌ಲ್ಲಿ ಹೇಳಿಕೊಂಡಿದೆ.
ಒರಾಯನ್ ನೌಕೆ ಡಿಸೆಂಬರ್ 11 ರಂದು ಪೆಸಿಫಿಕ್ ಸಾಗರಕ್ಕೆ ಬಂದು ಇಳಿಯುವ ಮೂಲಕ ಭೂಮಿಗೆ ಹಿಂತಿರುಗಲಿದೆ. ಈ ಆರ್ಟಿಮಿಸ್ -1 ಯಶಸ್ವಿಯಾದರೆ ಇದೂ ಆರ್ಟಿಮಿಸ್ -2 ಮತ್ತೂ ಆರ್ಟಿಮಿಸ್ -3 ರ ಭವಿಷ್ಯವನ್ನ ನಿರ್ಧರಿಸುತ್ತದೆ. ಆರ್ಟಿಮಿಸ್ -2 ರಲ್ಲಿ ಬಾಹ್ಯಾಕಾಶ ನೌಕೆ ಗಗನಯಾತ್ರಿಗಳ ಜೊತೆ ಪ್ರಯಾಣ ಮಾಡಿದರೂ ಚಂದ್ರನ ಮೇಲೆ ಇಳಿಸುವ ಉದ್ದೇಶವಿರುವುದಿಲ್ಲ. ಚಂದ್ರನ ಕಕ್ಷೆಯಲ್ಲಿ ಸುತ್ತಾಡಿ ಭೂಮಿಗೆ ಹಿಂದಿರುಗಲಿದ್ದಾರೆ. ಆರ್ಟಿಮಿಸ್-3 ರಲ್ಲಿ ಒಬ್ಬರು ಮಹಿಳೆ ಮತ್ತೂ ಕಪ್ಪು ಜನಾಂಗದ ಒಬ್ಬ ವ್ಯಕ್ತಿಯನ್ನ ಚಂದ್ರನ ಮೇಲೆ ಇಳಿಸುವ ಮೂಲಕ ದಾಖಲೆಯನ್ನ ಬರೆಯಲಿದೆ. ಈ ಕಾರ್ಯಚರಣೆಯು 2024 ಮತ್ತೂ 2025 ರಲ್ಲಿ ಕ್ರಮವಾಗಿ ನಡೆಯಲಿದೆ.