ಪಾಪಿ ಪಾಕಿಸ್ತಾನದಲ್ಲಿ ಬೆಲೆ ಏರಿಕೆ ಬಿಸಿ – ಒಂದು ಡಜನ್‌ ಮೊಟ್ಟೆ ಬೆಲೆ 400 ರೂ.!

ಪಾಪಿ ಪಾಕಿಸ್ತಾನದಲ್ಲಿ ಬೆಲೆ ಏರಿಕೆ ಬಿಸಿ – ಒಂದು ಡಜನ್‌ ಮೊಟ್ಟೆ ಬೆಲೆ 400 ರೂ.!

ಭಯೋತ್ಪಾದನೆ ಮಾಡೋದ್ರಲ್ಲಿ, ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನ ಸದಾ ಸುದ್ದಿಯಲ್ಲಿರುತ್ತೆ. ಇತರ ರಾಷ್ಟ್ರಗಳ ಮೇಲೆ ಸದಾ ದ್ವೇಷ ಸಾಧಿಸುತ್ತಿರುವ ಪಾಕ್‌ನಲ್ಲಿ ಮಾತ್ರ ಜನರ ಪರಿಸ್ಥಿತಿ ತುಂಬಾನೆ ಕೆಟ್ಟದಾಗಿದೆ. ಒಂದ್ಕಡೆ ಸಾರ್ವತ್ರಿಕ ಚುನಾವಣೆಗಳು ಹತ್ತಿರವಾಗುತ್ತಿದೆ. ಇನ್ನೊಂದು ಕಡೆ ಪಾಕ್ ನಲ್ಲಿ ಆಹಾರ ಪದಾರ್ಥಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಜನರ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿದೆ. ಪಾಕಿ ಪಾಕಿಸ್ತಾನದಲ್ಲಿ ಮೊಟ್ಟೆ ಬೆಲೆ ಭಾರಿ ಏರಿಕೆಯಾಗಿದೆ. ಒಂದು ಡಜನ್‌ ಮೊಟ್ಟೆ ಖರೀದಿಸುವ ಹಣದಲ್ಲಿ ಭಾರತದಲ್ಲಿ 2 ಕೆಜಿ ಕೋಳಿ ಮಾಂಸ ಖರೀದಿಸಬಹುದು. ಅಷ್ಟರ ಮಟ್ಟಿಗೆ ಬೆಲೆ ಏರಿಕೆಯಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಶುರುವಾಯ್ತು ಗಿಫ್ಟ್‌ ಪಾಲಿಟಿಕ್ಸ್‌! – ಬಿಜೆಪಿ ನಾಯಕನಿಂದ ಹೆಲ್ಮೆಟ್​ ವಿತರಣೆ!

ಹೌದು, ಆರ್ಥಿಕ ಬಿಕ್ಕಟ್ಟಿನಿಂದ ಒದ್ದಾಡುತ್ತಿರುವ ನೆರೆಯ ರಾಷ್ಟ್ರ ಪಾಕಿಸ್ತಾನ ತನ್ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಹೆಣಗಾಡುತ್ತಿದೆ. ನಡುವೆ ಮಾರುಕಟ್ಟೆಯಲ್ಲಿ ಅಗತ್ಯವಸ್ತುಗಳ ಬೆಲೆ ದುಪ್ಪಟ್ಟಾಗಿದ್ದು, ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿವೆ. ಸರ್ಕಾರ ದರ ನಿಗದಿಮಾಡಿದ್ದರೂ ಕ್ಯಾರೆ ಎನ್ನದ ವ್ಯಾಪಾರಿಗಳು ತಮ್ಮಿಷ್ಟದ ದರಗಳಿಗೆ ವಸ್ತುಗಳನ್ನ ಮಾರಾಟ ಮಾಡುತ್ತಿದ್ದಾರೆ. ಪಾಕ್‌ನ ಪಂಜಾಬ್‌ ಪ್ರಾಂತೀಯ ರಾಜಧಾನಿ ಲಾಹೋರ್‌ನ ಮಾರುಕಟ್ಟೆಗಳಲ್ಲಿ ಒಂದು ಮೊಟ್ಟೆಯ ಬೆಲೆ 33 ರೂ.ಗಳಿಗೆ ಏರಿಕೆಯಾಗಿದೆ. ಒಂದು ಡಜನ್‌ ಮೊಟ್ಟೆಗೆ 400 ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಆರ್ಥಿಕ ಸಮನ್ವಯ ಸಮಿತಿ ಹಾಗೂ ರಾಷ್ಟ್ರೀಯ ಬೆಲೆ ಮೇಲ್ವಿಚಾರಣಾ ಸಮಿತಿ ಬೆಲೆ ಸ್ಥಿರತೆ ಖಚಿತಪಡಿಸಿಕೊಳ್ಳಲು ಹಾಗೂ ಲಾಭ ಕಂಡುಕೊಳ್ಳಲು ಪ್ರಾಂತೀಯ ಸರ್ಕಾರಗಳೊಂದಿಗೆ ಚರ್ಚಿಸಿ ಸಮನ್ವಯ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದ್ದವು. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಆರ್ಥಿಕ ಹೊರೆ ಹೆಚ್ಚಾಗುತ್ತಿದ್ದು, 63,399 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಪಾಕಿಸ್ತಾನ ಮೂಲಗಳು ತಿಳಿಸಿವೆ.

ಉದಾಹರಣೆಗೆ ಪ್ರತಿ ಕೆ.ಜಿ ಈರುಳ್ಳಿಗೆ ಸರ್ಕಾರ 175 ರೂ. ನಿಗದಿಪಡಿಸಿದ್ದರೆ, ವ್ಯಾಪಾರಿಗಳು 200 ರಿಂದ 250 ರೂ. ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಡಜನ್‌ ಮೊಟ್ಟೆಯ ಬೆಲೆ 400 ರೂ. ತಲುಪಿದ್ದರೆ, ಒಂದು ಕೆಜಿ ಚಿಕನ್‌ ಬೆಲೆ 615 ರೂ.ಗಳಿಗೆ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನರು ಕುಟುಂಬ ನಿರ್ವಹಣೆಗೂ ಕಷ್ಟಪಡುವಂತ ಸ್ಥಿತಿ ಬಂದೊದಗಿದೆ.

Shwetha M