ಹತ್ಯೆ ಮಾಡಿ 15 ಕಿಲೋಮೀಟರ್ ದೂರದಲ್ಲಿ ಅಡಗಿದ್ದ ಹಂತಕನ ಬೇಟೆಯಾಡಿದ ಶ್ವಾನದಳದ ರಕ್ಷಾ

ಹತ್ಯೆ ಮಾಡಿ 15 ಕಿಲೋಮೀಟರ್ ದೂರದಲ್ಲಿ ಅಡಗಿದ್ದ ಹಂತಕನ ಬೇಟೆಯಾಡಿದ ಶ್ವಾನದಳದ ರಕ್ಷಾ

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನ ಪತ್ತೆ ಹಚ್ಚಲು ಪೊಲೀಸರು ನಾನಾ ತಂತ್ರಗಾರಿಕೆಗಳನ್ನ ಬಳಸುತ್ತಾರೆ. ತಂತ್ರಜ್ಞಾನ, ಪ್ರತ್ಯಕ್ಷಿಗಳ ಮಾಹಿತಿ, ಸ್ಥಳದಲ್ಲಿ ಸಿಕ್ಕ ಕುರುಹು, ವಾಹನ, ಫೋನ್ ಸೇರಿದಂತೆ ಹಲವು ಮಾನದಂಡಗಳನ್ನ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಾರೆ. ಹೀಗೆ ಪೊಲೀಸರ ತನಿಖೆಯ ದಿಕ್ಕಿನಲ್ಲಿ ಶ್ವಾನದಳ ಕೂಡ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದೀಗ ಕೋಲಾರದಲ್ಲಿ ಕೊಲೆ ಪ್ರಕರಣದಲ್ಲಿ ಶ್ವಾನವೊಂದು ಆರೋಪಿಯನ್ನ ಪತ್ತೆ ಹಚ್ಚುವಲ್ಲಿ ಸಹಾಯ ಮಾಡಿದೆ.

ಇದನ್ನೂ ಓದಿ : 11 ವರ್ಷಗಳ ಹಿಂದೆ ಕಳ್ಳತನ – ಸಾಕ್ಷ್ಯಕ್ಕಾಗಿ ನ್ಯಾಯಾಲಯಕ್ಕೆ ಬಂದ ಎಮ್ಮೆ

ಕೋಲಾರ ಜಿಲ್ಲೆ (Kolar) ಬೇವಳ್ಳಿ ಎಂಬಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿಯನ್ನು 24 ಗಂಟೆಯಲ್ಲಿ ಪತ್ತೆ ಹಚ್ಚುವ ಮೂಲಕ ಪೊಲೀಸ್ (Police) ಇಲಾಖೆಯ ಶ್ವಾನವೊಂದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲಾ ಅಫರಾಧ ವಿಭಾಗದ ರಕ್ಷಾ ಎಂಬ ಹೆಸರಿನ ಶ್ವಾನ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿದೆ. ಸುಮಾರು 15 ಕಿ.ಮೀ ದೂರದಲ್ಲಿ ಅಡಗಿ ಕುಳಿತಿದ್ದ ಕೊಲೆ ಆರೋಪಿಯನ್ನ ಶ್ವಾನ ಪತ್ತೆ ಮಾಡಿದೆ. ಶ್ವಾನವೂ ಕಳೆದ ಹಲವು ವರ್ಷಗಳಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.

ಮುಳಬಾಗಿಲಿನ (Mulabagilu) ಬೇವಳ್ಳಿ ಗ್ರಾಮದಲ್ಲಿ ಸುರೇಶ್ (35) ಎಂಬಾತನನ್ನ ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಸ್ಥಳದಲ್ಲಿ ಯಾವುದೇ ಸುಳಿವು ಸಿಗದ ಕಾರಣ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಶ್ವಾನವನ್ನು ಕರೆತಂದಿದ್ದರು. ಬಳಿಕ ಶ್ವಾನವು ಸುಮಾರು 15 ಕಿ.ಮೀ ದೂರಕ್ಕೆ ತೆರಳಿ ರವಿ ಎಂಬಾತನನ್ನು ಗುರುತಿಸಿತ್ತು. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಶ್ವಾನದ ಈ ಕಾರ್ಯಕ್ಕೆ ಕೋಲಾರ ಎಸ್ಪಿ ನಾರಾಯಣ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನ ಅಡುಗೋಡಿಯಲ್ಲಿ ತರಬೇತಿ ಪಡೆದು ದಾವಣಗೆರೆ ಕ್ರೈಂ ವಿಭಾಗಕ್ಕೆ (Davangere Police) ಸೇರ್ಪಡೆಯಾಗಿರುವ ಒಂಬತ್ತು ತಿಂಗಳ ವಯಸ್ಸಿನ ‌ಪೊಲೀಸ್ ಶ್ವಾನ ತಾರಾ (Sniffer dog Tara) ಕೂಡ ದಾವಣಗೆರೆಯಲ್ಲಿ ತನ್ನ ತಾಕತ್ತು ತೋರಿತ್ತು. ಕೊಲೆ ಆರೋಪಿಯನ್ನ ಜೈಲಿಗೆ ಅಟ್ಟಿ ಮಹತ್ವದ ಸಾಧನೆ ಮಾಡಿದೆ ತಾರಾ. ಬಿಲ್ಜಿಯಂ ಮೆಲೋನಿಸ್ (BELGIAN MOLINOIS DOG) ಎಂಬ ವಿಶಿಷ್ಟ ತಳಿಯ ಒಂಬತ್ತು ತಿಂಗಳ ಶ್ವಾನದ ಮಹತ್ವದ ಸಾಧನೆ ಇದಾಗಿದೆ.

suddiyaana