ಮಾಲೀಕನನ್ನು ಕಳೆದುಕೊಂಡು ಅಳುತ್ತಿರುವ ಶ್ವಾನ – ಮನಕಲುಕುವ ವಿಡಿಯೋ ವೈರಲ್!

ಈಗಿನ ಕಾಲದಲ್ಲಿ ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡಲ್ಲ.. ಮನುಷ್ಯತ್ವವನ್ನು ಮರೆತಿದ್ದಾನೆ.. ಮನುಷ್ಯರಿಗಿಂತ ಪ್ರಾಣಿಗಳೇ ಎಷ್ಟೋ ಮೇಲೂ ಅಂತಾ ಅನೇಕರು ಹೇಳ್ತಾರೆ.. ಯಾಕಂದ್ರೆ ಮನುಷ್ಯನಿಗೆ ಇಲ್ಲದ ಮಾನವೀಯತೆ, ಸ್ನೇಹ ಮನೋಭಾವ ಪ್ರಾಣಿಗಳಲ್ಲಿ ಕಾಣಬಹುದು. ಅದರಲ್ಲೂ ಶ್ವಾನಗಳಿಗೆ ತುಸು ಹೆಚ್ಚೇ ನಿಯತ್ತು ಇರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಮಾಲೀಕ ಮೃತಪಟ್ಟಿರುವುದನ್ನ ನೋಡಿದ ಶ್ವಾನ ಜೋರಾಗಿ ಅತ್ತಿದೆ.
ಇದನ್ನೂ ಓದಿ: ಜಡ್ಜಸ್‌ಗೆ ಬಾಳು ಬೆಳಗುಂದಿ ಸ್ಪೆಷಲ್ಲಾ? – ಜವಾರಿ ಹೈದನ ವಿರುದ್ಧ ಕೆಟ್ಟ ಕಾಮೆಂಟ್ಸ್
ಹೌದು ಅವುಗಳಿಗೆ ಒಂದು ತುತ್ತು ಅನ್ನ ನೀಡಿದರೆ ಸಾಕು ಅದರ ಕೊನೆಯುಸಿರು ಇರುವವವರೆಗೂ ಅನ್ನ ಹಾಕಿದವರಿಗೆ ನಿಯತ್ತಿನಿಂದ ಇರುತ್ತದೆ. ಮೃತ ಪಟ್ಟ ಮಾಲೀಕನ ಬರುವಿಕೆಗಾಗಿ ಕಾದ ಶ್ವಾನದ ಉದಾಹರಣೆಗಳು ಸಾಕಷ್ಟು ಇವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮನೆ ಮಾಲೀಕನು ಮೃತ ಪಟ್ಟಿದ್ದು, ಕುಟುಂಬದ ಸದಸ್ಯರು ದುಃಖದಲ್ಲಿ ಮುಳುಗಿದ್ದಾರೆ, ಇತ್ತ ಶ್ವಾನ ಕೂಡ ಮೃತ ದೇಹದ ಮುಂದೆ ಕುಳಿತುಕೊಂಡು ಜೋರಾಗಿ ಅಳುತ್ತಿದೆ. ಅಲ್ಲೇ ಇದ್ದ ವ್ಯಕ್ತಿಯೂ ಶ್ವಾನದ ತಲೆ ಸವರುವ ಮೂಲಕ ಸಮಾಧಾನ ಪಡಿಸುತ್ತಿದ್ದಾರೆ.
ಈ ವಿಡಿಯೋ ಎಪ್ಪತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಪವಿತ್ರವಾದ ಪ್ರೀತಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಈ ವಿಡಿಯೋ ಮನಕಲುಕುವಂತಿದೆ, ಮನುಷ್ಯರಿಗಿಂತ ಶ್ವಾನವೇ ಮೇಲು’ ಎಂದಿದ್ದಾರೆ. ಮತ್ತೊಬ್ಬರು, ‘ ಈ ವಿಡಿಯೋ ಹೃದಯಕ್ಕೆ ಹತ್ತಿರವಾದಂತಿದೆ’ ಎಂದು ಬರೆದುಕೊಂಡಿದ್ದಾರೆ.