ನಾಯಿ ಕಚ್ಚಿದ್ದಕ್ಕೆ ಮಾಲೀಕನ ವಿರುದ್ಧ ದೂರು – ಕೋಪಗೊಂಡ ಶ್ವಾನ ಮಾಲೀಕ ಮಾಡಿದ್ದೇನು ಗೊತ್ತಾ?
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶ್ವಾನ ದಾಳಿ ಪ್ರಕರಣ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಮಹಿಳೆಯೊಬ್ಬರ ಮೇಲೆ ನಾಯಿ ದಾಳಿ ಮಾಡಿದೆ. ಈ ಸಂಬಂಧ ಆಕೆ ನಾಯಿ ಮಾಲೀಕರ ವಿರುದ್ಧ ದೂರು ನೀಡಿದ್ದಾರೆ. ಇದರಿಂದ ಕುಪಿತನಾದ ಆತ ಮಹಿಳೆ ಮನೆಗೆ ತೆರಳಿ ತನ್ನ ಪ್ರತಾಪ ತೋರಿಸಿದ್ದಾನೆ.
ಈ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೂನ್ 13 ರಂದು ಪುಷ್ಪಾ ಅವರು ಕೆಲಸಕ್ಕೊಂದು ದಾರಿಯಲ್ಲಿ ಹೋಗಬೇಕಾದರೆ ಎಚ್‌ಎಂಟಿ ರಾಜಣ್ಣ ಅವರ ಸಾಕು ನಾಯಿ ಪುಷ್ಪಾ ಅವರ ಮೇಲೆ ಹಲವು ಬಾರಿ ದಾಳಿ ಮಾಡಿದೆ. ಈ ಹಿನ್ನೆಲೆ ಮಾಲೀಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದ ಕೋಪಗೊಂಡ ಮಾಲೀಕ ಆತನ ಮಕ್ಕಳು ದೂರು ನೀಡಿದ ಮಹಿಳೆ ಮತ್ತು ಆಕೆಯ ಮಗನ ಎರಡು ವಾಹನಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ.
ಇದನ್ನೂ ಓದಿ: ಮೆಟಾ ವಿರುದ್ದ ಮೊಕದ್ದಮೆ ಹೂಡಿದ 30ಕ್ಕೂ ಹೆಚ್ಚು ಯುಎಸ್ ರಾಜ್ಯಗಳು! – ಕಂಪನಿ ಎದುರಿಸುತ್ತಿರುವ ಆರೋಪವೇನು?
ಘಟನೆಯ ಹಿನ್ನೆಲೆ..
ಜೂನ್ 13 ರಂದು ಪುಷ್ಪಾ ಅವರು ಕೆಲಸಕ್ಕೊಂದು ದಾರಿಯಲ್ಲಿ ಹೋಗಬೇಕಾದರೆ ಎಚ್‌ಎಂಟಿ ರಾಜಣ್ಣ ಅವರ ಸಾಕು ನಾಯಿ ಪುಷ್ಪಾ ಅವರ ಮೇಲೆ ಹಲವು ಬಾರಿ ದಾಳಿ ಮಾಡಿದೆ. ಇದನ್ನು ಕಣ್ಣಾರೆ ಕಂಡ ಬಾಬು ಮತ್ತು ಗಾಯತ್ರಿ, ಪುಷ್ಪಾ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಪುಷ್ಪಾ ಮತ್ತು ಅವರ ಮಗನನ್ನು ಬಾಬು ಮತ್ತು ಗಾಯತ್ರಿ ಒತ್ತಾಯಿಸಿದ್ದಾರೆ. ಇನ್ನು ಎಚ್‌ಎಂಟಿ ರಾಜಣ್ಣ ಮತ್ತು ಅವರ ಪತ್ನಿ ಗೌರಮ್ಮ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುವುದಾಗಿ ಹೇಳಿದ್ದಾರೆ. ಇದರ ಜತೆಗೆ ಪುಷ್ಪ ಅವರು ಗುಣಮುಖವಾಗಿ ಕೆಲಸಕ್ಕೆ ಹೋಗುವವರೆಗೆ ಅವರಿಗೆ ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ಯಾವ ಭರವಸೆಯನ್ನು ಅವರು ಈಡೇರಿಸಲಿಲ್ಲ ಎಂದು ಪುಷ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಒಂದು ತಿಂಗಳಾದರೂ ಚಿಕಿತ್ಸೆ ವೆಚ್ಚವನ್ನು ಕೂಡ ಭರಿಸಿಲ್ಲ. ಇನ್ನು ಚಿಕಿತ್ಸೆ ನೀಡಲು ನನ್ನಲ್ಲಿ ಹಣವಿಲ್ಲ. ಚಿಟ್ ಫಂಡ್‌ನಿಂದ ಹಣದಿಂದ ಚಿಕಿತ್ಸೆ ಮತ್ತು ಆಸ್ಪತ್ರೆಯ ಬಿಲ್ ಪಾವತಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ ನಾನು ಪೊಲೀಸರಿಗೆ ಜುಲೈನಲ್ಲಿ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಈ ಚಿಟ್ ಫಂಡ್ನ್ನು ಎಚ್‌ಎಂಟಿ ರಾಜಣ್ಣ ಕುಟುಂಬದ ಸದಸ್ಯರು ನಡೆಸುತ್ತಿದ್ದರು ಎಂದು ಹೇಳಿದ್ದಾರೆ.
ಈ ಘಟನೆಯ ನಂತರ ಎಚ್‌ಎಂಟಿ ರಾಜಣ್ಣ ಅವರ ಮಗ ಬಾಬು ನನ್ನ ಮನೆ ಬಳಿ ಬಂದು ಚಿಟ್ ಫಂಡ್ ಹಣ ವಾಪಸ್ಸು ಮಾಡುವಂತೆ ಕಿರುಕುಳ ನೀಡಿದ್ದಾನೆ. ಹಣ ಮರುಪಾವತಿ ಮಾಡಲು ಸ್ವಲ್ಪ ಸಮಯಬೇಕು ಎಂದು ಕೇಳಿದ್ದೇನೆ. ಆದರೆ ಆತನ ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಹಾಕಿ, ಕೆಟ್ಟ ಮಾತಿನಿಂದ ನಿಂದಿಸಿದ್ದಾನೆ. ನಂತರ ಅಂದರೆ ಮರುದಿನ ಮಂಗಳವಾರ ಮುಂಜಾನೆ 3 ಗಂಟೆಗೆ ನಮ್ಮ ವಾಹನದ ಸೈರನ್ ಸದ್ದು ಕೇಳಿ ಎದ್ದೆವು. ಹೊರಗೆ ಬಂದು ನೋಡಿದಾಗ ನಮ್ಮ ಎರಡು ವಾಹನಕ್ಕೆ ಬೆಂಕಿ ಹಾಕಿದ್ದಾರೆ. ತಕ್ಷಣ ಬೆಂಕಿ ಹಾರಿಸಲು ನಮ್ಮ ಜತೆಗೆ ಅಕ್ಕ-ಪಕ್ಕದವರು ಕೂಡ ಸಹಾಯಕ್ಕೆ ಧಾವಿಸಿದ್ದಾರೆ. ಅದರೂ ಯಾವುದೇ ಪ್ರಯೋಜನವಾಗಿಲ್ಲ, ವಾಹನ ನೋಡು ನೋಡುತ್ತಿದಂತೆ ಸುಟ್ಟು ಹೋಯಿತು ಎಂದು ಪುಷ್ಪ ಅವರು ಹೇಳಿದ್ದಾರೆ. ಇದೀಗ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಕೊತ್ತನೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.