ಮದುವೆ ದಿನವೇ ನವದಂಪತಿಯ ರಿಸ್ಕ್..! – ‘ಸ್ಕೈಡೈವಿಂಗ್’ ಮೂಲಕ ಡಿಫರೆಂಟ್ ಮ್ಯಾರೇಜ್

ಮದುವೆ ದಿನವೇ ನವದಂಪತಿಯ ರಿಸ್ಕ್..! – ‘ಸ್ಕೈಡೈವಿಂಗ್’ ಮೂಲಕ ಡಿಫರೆಂಟ್ ಮ್ಯಾರೇಜ್

ಮದುವೆ ಎಲ್ಲರ ಜೀವನದಲ್ಲೂ ಅಮೂಲ್ಯವಾದ ದಿನ. ಮದುವೆ ದಿನವನ್ನು ಯಾವಾಗಲೂ ನೆನಪಿನಲ್ಲಿಡುವಂತೆ ಮಾಡಲು ಎಲ್ಲರಿಗೂ ಇಷ್ಟವೇ. ಇದಕ್ಕಾಗಿ ಸ್ಪೆಷಲ್ ಆರೇಂಜ್ಮೆಂಟ್ಸ್ ಸಹ ಮಾಡಿಕೊಳ್ತಾರೆ. ಹಾಗೆಯೇ ಇಲ್ಲೊಂದು ಜೋಡಿ ತಮ್ಮ ಮದುವೆ ದಿನವನ್ನು ಸ್ಮರಣೀಯವಾಗಿಸಿಕೊಳ್ಳಲು ಎಂಥಾ ರಿಸ್ಕ್ ತೆಗೆದುಕೊಂಡಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಇದನ್ನೂ ಓದಿ:  ಮದುವೆ ದಿನ ವಿಶೇಷವಾಗಿರಬೇಕೇ ?- ಬಾಹ್ಯಾಕಾಶದಲ್ಲಿ ತಾಳಿಕಟ್ಟಲು ಸಿಗಲಿದೆ ಅವಕಾಶ..!

ಮದುವೆ ದಿನ ಸ್ಪೆಷಲ್ ಡೆಕೊರೇಶನ್, ವಿಭಿನ್ನ ಫೋಟೋಶೂಟ್, ಡಿಫರೆಂಟ್ ಕಾಸ್ಟ್ಯೂಮ್, ಡೆಸ್ಟಿನೇಶನ್ ವೆಡ್ಡಿಂಗ್ ಈಗ ಕಾಮನ್ ಆಗಿದೆ. ಚೌಟ್ರಿ, ಮದ್ವೆ ಹಾಲ್‌ಗಳನ್ನು ಬಿಟ್ಟು ಡಿಫರೆಂಟ್ ಆಗಿ ಬೀಚ್ ಸೈಡ್, ಸಮುದ್ರದಲ್ಲಿ, ವಿಮಾನದಲ್ಲಿ ಮದುವೆಯಾಗುವವರೂ ಇದ್ದಾರೆ. ಇನ್ನು ಕೆಲವರು ಆಕಾಶದಲ್ಲಿ ಮದುವೆಯಾಗೋಣ ಎಂದು ಇದನ್ನೂ ಟ್ರೈ ಮಾಡಿದ್ದೂ ಆಯ್ತು. ಆದರೆ, ಈ ಜೋಡಿ ಮಾತ್ರ ಮದುವೆ ದಿನವೇ ಮಾಡಿರುವ ಸಾಹಸ ನೋಡಿ ಮೆಚ್ಚಬೇಕು ಇವರ ಗಟ್ಟಿ ಗುಂಡಿಗೆಯನ್ನು ಅಂತಾ ಅನಿಸದೇ ಇರದು ಬಿಡಿ.

ಪ್ರಿಸ್ಸಿಲ್ಲಾ ಆಂಟ್ ಮತ್ತು ಫಿಲಿಪ್ಪೊ ಲೆಕ್ವೆರ್ಸ್ ಎಂಬ ನವವಿವಾಹಿತ ದಂಪತಿ ಬಂಡೆಯಿಂದ ಸ್ಕೈಡೈವಿಂಗ್ ಮಾಡುವ ಮೂಲಕ ತಮ್ಮ ಮದುವೆಯನ್ನು ಅಚ್ಚಳಿಯದ ನೆನಪಾಗಿ ಮಾಡಿಕೊಂಡಿದ್ದಾರೆ. ಈ ದಂಪತಿ ಸಾಹಸವನ್ನು ತಮಗಾಗಿ ಮಾತ್ರವಲ್ಲದೆ ಮದುವೆಗೆ ಬಂದ ಅತಿಥಿಗಳಿಗೂ ಸಾಹಸ ಮಾಡಲು ಅವಕಾಶ ನೀಡಿದ್ದಾರೆ. ಎತ್ತರದ ಪರ್ವತದ ಮೇಲಿಂದ ಸ್ಕೈಡೈವ್ ಮಾಡುವ ಮೂಲಕ ಈ ಜೋಡಿ ಮದುವೆಯಾಗಿದ್ದಾರೆ. ಈ ಮೂಲಕ ತಮ್ಮ ಮದುವೆಯನ್ನು ಯಾವಾಗಲೂ ನೆನಪಿನಲ್ಲಿ ಇರುವಂತೆ ಮಾಡಿಕೊಂಡಿದ್ದಾರೆ. ಪ್ರಿಸ್ಸಿಲ್ಲಾ ಆಂಟ್ ಮತ್ತು ಫಿಲಿಪ್ಪೊ ಲೆಕ್ವೆರ್ಸ್ ಮೇಲಿಂದ ಧುಮುಕುವ ಮೊದಲು ಬಂಡೆಯ ಅಂಚಿನಲ್ಲಿ ಮದುವೆಯಾದರು. ತಮ್ಮ ಹೊಸಜೀವನ ಆರಂಭಿಸುವ ಮೊದಲು ಒಂದು ಸಾಹಸವನ್ನೇ ಮಾಡಿದರು. ಈ ನವದಂಪತಿಯ ಸಾಹಸ ನೋಡಿದರೆ ಮಾತ್ರ ಮೈ ಜುಮ್‌ ಎನ್ನುತ್ತದೆ. ಎತ್ತರದ ಬಂಡೆಯ ಮೇಲೆ ರೋಮಾಂಚನಕಾರಿ ಸ್ಕೈಡೈವಿಂಗ್ ಸಾಹಸವನ್ನು ಪ್ರದರ್ಶಿಸಿರುವ ಹೊಸ ಜೋಡಿಯ ವಿಡಿಯೋ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಕಾಮೆಂಟ್ಸ್ ಬರ್ತಿದೆ. ಇನ್ನು ಇವರು ಸಾಹಸ ಪ್ರದರ್ಶಿಸುವ ಮೊದಲು ಸೂಕ್ತ ಸುರಕ್ಷತಾ ಕವಚಗಳನ್ನು ಧರಿಸಿದ್ದರು. ಅದೇನೇ ಹೇಳಿ.. ಇವರಿಬ್ಬರ ಈ ಸಾಹಸಕ್ಕೆ ಡಬಲ್ ಗುಂಡಿಗೆಯೇ ಇರಬೇಕು ಬಿಡಿ. ಇಲ್ಲ ಅಂದರೆ ಮದುವೆ ದಿನವೇ ಹೀಗೆ ಮಾಡಲು ಸಾಧ್ಯವೇ.

suddiyaana