ಯುವಬ್ರಿಗೇಡ್ ಕಾರ್ಯಕರ್ತನ ಕೊಲೆಯೇ ಬಿಜೆಪಿಗೆ ಅಸ್ತ್ರ – ಮೃತನ ಮನೆಗೆ ಬಿಜೆಪಿ ನಾಯಕರ ನಿಯೋಗ ಭೇಟಿ

ಯುವಬ್ರಿಗೇಡ್ ಕಾರ್ಯಕರ್ತನ ಕೊಲೆಯೇ ಬಿಜೆಪಿಗೆ ಅಸ್ತ್ರ – ಮೃತನ ಮನೆಗೆ ಬಿಜೆಪಿ ನಾಯಕರ ನಿಯೋಗ ಭೇಟಿ

ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ನಡೆದಿದ್ದ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್‌ ಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದಿದೆ. ವೇಣುಗೋಪಾಲ್ ಕೊಲೆಯನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಪಾಳಯ ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ. ಆತನ ಹತ್ಯೆ ಖಂಡಿಸಿ ಸರ್ಕಾರದ ವಿರುದ್ಧ ಸಮರಸಾರಲು ಬಿಜೆಪಿ(BJP) ಮುಂದಾಗಿದೆ.

ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್‌ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಲಿದ್ದಾರೆ. ಜುಲೈ 8 ರಂದು ಹನುಮ ಜಯಂತಿ(Hanuma Jayanthi) ವೇಳೆ ಗಲಾಟೆಯಾಗುತ್ತದೆ. ಬೈಕ್‌ ನಿಲ್ಲಿಸುವ ಹಾಗೂ ಪುನೀತ್‌ ಫೋಟೋ(Punith photo) ಇಡುವ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗ್ತಿದೆ. ನಂತರ ರಾಜೀ ಪಂಚಾಯಿತಿ ಮಾಡಲು ಕರೆಸಿ, ಬಾಟಲಿಯಿಂದ ಹೊಡೆದು, ಇರಿದು ಕೊಲೆ ಮಾಡಲಾಗಿದೆ. ಇಂದು ಸಿ.ಟಿ.ರವಿ(CT Ravi) ನೇತೃತ್ವದ ಬಿಜೆಪಿ ನಿಯೋಗ ಭೇಟಿ ನೀಡಿ, ಸಾಂತ್ವನ ಹೇಳಲಿದೆ.

ಇದನ್ನೂ ಓದಿ : KSRTC ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ – ಜೆಡಿಎಸ್ ಮಾಜಿ ಶಾಸಕ ಆಂಬುಲೆನ್ಸ್ ತಡೆದ ದೃಶ್ಯ ವೈರಲ್

ಜುಲೈ 8ರಂದು ನಡೆದ ಹನುಮ ಜಯಂತಿ ಮೆರವಣಿಗೆ ವೇಳೆ ಪುನೀತ್ ರಾಜ್ ಕುಮಾರ್ ಫೋಟೊ ತೆಗೆಸಿದ್ದೇ ವೇಣುಗೋಪಾಲ್ ಹತ್ಯೆಗೆ  ಕಾರಣವಾಯಿತಾ ಎಂಬ ಅನುಮಾನ ವ್ಯಕ್ತವಾಗಿದೆ. ವ್ಯಾನ್ ನಲ್ಲಿ ಭಾರತ ಮಾತೇ ಫೋಟೋ ಮುಂದೆ‌ ನಟ ದಿ. ಪುನೀತ್ ರಾಜ್ ಕುಮಾರ್ ಫೋಟೋ ಹಾಕಲಾಗಿತ್ತು. ಈ ವೇಳೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಇಲ್ಲಿ ಯಾವ ವ್ಯಕ್ತಿಯ ಫೋಟೋ ಹಾಕೋದು ಬೇಡ ಎಂದು ಕೊಲೆಯಾದ ವೇಣುಗೋಪಾಲ್‌ ತೆಗೆಸಿದ್ದರು. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಅವರ ಗುಂಪಿನಲ್ಲೆ ಗಲಾಟೆಯಾಗಿತ್ತು. ನಂತರ ಭಾನುವಾರ ಮಧ್ಯಾಹ್ನ ಕೂಡ ಜಗಳವಾಗಿತ್ತು. ಬಳಿಕ ರಾತ್ರಿ ರಾಜೀ ಪಂಚಾಯಿತಿ ನೆಪದಲ್ಲಿ ಕರೆಸಿಕೊಂಡು ಕೊಲೆ‌ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

suddiyaana