ಹೋಟೆಲ್‌ನಲ್ಲಿ ತಿಂಡಿ ತಿಂದ ಗ್ರಾಹಕನಿಗೆ ಶಾಕ್! – ಬಿಲ್‌ನಲ್ಲಿ 30 ರೂ. ಗ್ಯಾಸ್‌ ಸಪ್ಲೈ ಚಾರ್ಜ್‌!‌

ಹೋಟೆಲ್‌ನಲ್ಲಿ ತಿಂಡಿ ತಿಂದ ಗ್ರಾಹಕನಿಗೆ ಶಾಕ್! – ಬಿಲ್‌ನಲ್ಲಿ 30 ರೂ. ಗ್ಯಾಸ್‌ ಸಪ್ಲೈ ಚಾರ್ಜ್‌!‌

ಇರಾನ್ ಹಾಗೂ ಅಮೆರಿಕ ನಡುವೆ ಶುರುವಾದ ಭೀಕರ ಯುದ್ಧದ ಪರಿಣಾಮ ಇದೀಗ ಎಲ್‌ಪಿಜಿ ಪೂರೈಕೆಗೆ ಬ್ರೇಕ್ ಬಿದ್ದಿದೆ. ಇದ್ರಿಂದಾಗಿ ದೊಡ್ಡ ಮಟ್ಟದ ಸಮಸ್ಯೆ ಎದುರಾಗಿ, ಜನ ಸಾಮಾನ್ಯರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಗ್ಯಾಸ್‌ ಸರಿಯಾಗಿ ಪೂರೈಕೆಯಾಗದೇ ಹೋಟೆಲ್‌ಗಳೂ ಕೂಡ ಮುಚ್ಚುವ ಭೀತಿಯಲ್ಲಿವೆ. ಆದ್ರೆ ಕೆಲವು ಹೋಟೆಲ್‌ಗಳು ಇದನ್ನೇ ಬಂಡವಾಳ ಮಾಡಿಕೊಂಡಿವೆ. ಇದೀಗ ಇಲ್ಲೊಂದು ಕಡೆ ಹೋಟೆಲ್‌ ಒಂದರಲ್ಲಿ ಬ್ರೇಕ್‌ಫಾಸ್ಟ್‌ ಮಾಡಿದವರಿಗೆ ಗ್ಯಾಸ್‌ ಸಪ್ಲೈ ಚಾರ್ಜ್‌ ಕೂಡ ಸೇರಿಸಿ ಬಿಲ್‌ ನೀಡಲಾಗಿದೆ. ಇದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತಾಂಡವ್‌ ಮಿಸ್ಸಿಂಗ್ ಕೇಸ್‌ಗೆ ಬಿಗ್‌ ಟ್ವಿಸ್ಟ್‌! – ಶ್ರೇಷ್ಠಾ ಕುತಂತ್ರಕ್ಕೆ ಭಾಗ್ಯ ಬಲಿ?‌

ಬೆಂಗಳೂರಿನ ಪಿಜಿಯಲ್ಲಿ ತಿಂಡಿ ಸಿಗದ ಕಾರಣ ಗ್ರಾಹಕರೊಬ್ಬರು Mr. ಆಂಧ್ರ ಮೀಲ್ಸ್ ಹೋಟೆಲ್‌ಗೆ ತೆರಳಿದ್ದರು. ಅಲ್ಲಿ ಬ್ರೇಕ್‌ಫಾಸ್ಟ್‌ ತೆಗೆದುಕೊಂಡ ಬಳಿಕ ಅದರಲ್ಲಿ ಗ್ಯಾಸ್‌ ಸಪ್ಲೈ ಚಾರ್ಜ್‌ ಹೆಚ್ಚುವರಿಯಾಗಿ ಸೇರಿದ್ದನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಬಿಲ್‌ನ್ನು ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.‌

ವೈರಲ್‌ ಆಗುತ್ತಿರುವ ಬಿಲ್‌ಗೆ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದು, ಇದೊಂದು ದೊಡ್ಡ ಸ್ಕ್ಯಾಮ್, ಸಾರ್ವಜನಿಕರನ್ನು ಲೂಟಿ ಮಾಡುವ ಕೆಲಸ. ಆದಷ್ಟು ಬೇಗ ಬೇಕಾಬಿಟ್ಟಿ ದರ ವಿಧಿಸುವ ಎಲ್ಲಾ ಹೋಟೆಲ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ

Shwetha M

Leave a Reply

Your email address will not be published. Required fields are marked *