ಒಂದು ಊಟಕ್ಕೆ ₹90 ಲಕ್ಷ! – ರೆಸಿಪಿಗಳು ಲಕ್ಷ ಲಕ್ಷ.. ರೆಸ್ಟೋರೆಂಟ್ ನಲ್ಲಿ ಅಂಥಾದ್ದೇನಿದೆ?
ಈಗಂತೂ ಹೋಟೆಲ್ಗೆ ಹೋಗೋದು, ಇಲ್ಲ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡೋದು ಸರ್ವೇ ಸಾಮಾನ್ಯ ಆಗಿದೆ. ಕೆಲವು ಸಲ ಊಟ ಇಷ್ಟ ಆಗುತ್ತೆ, ಇನ್ನೂ ಕೆಲವು ಸಲ ಇಷ್ಟ ಆಗಲ್ಲ. ಅದ್ರಲ್ಲೂ ತಾವು ತಿಂದ ಫುಡ್ ಕಾಸ್ಟ್ಲಿ ಆಯ್ತು ಅನ್ನಿಸಿದ್ರೆ ಅವತ್ತೆಲ್ಲಾ ನಿದ್ದೆನೇ ಬರಲ್ಲ. ಅಂಥಾದ್ರಲ್ಲಿ ಇಲ್ಲೊಬ್ಬ ಒಂದು ಊಟಕ್ಕೆ ಕೊಟ್ಟಿರೋ ಬಿಲ್ ನೋಡಿದ್ರೆ ನಿಮ್ಮ ತಲೆ ಬಿರ್ ಅನ್ನುತ್ತೆ.
ಇದನ್ನೂ ಓದಿ: ವಿಪಕ್ಷಗಳ ಜಾತಿ ಗಣತಿ ಅಸ್ತ್ರಕ್ಕೆ ಬಜೆಟ್ ಮೂಲಕ ಕೌಂಟರ್ – ಲೋಕಸಭೆ ಎಲೆಕ್ಷನ್‌ಗೆ ಸಿಕ್ಕಿತಾ ಬಿಗ್ ಟ್ವಿಸ್ಟ್?
ಅಪರೂಪಕ್ಕೆ ಹೋಟೆಲ್ಗಳಿಗೆ ಹೋದಾಗ ಬಿಲ್ 1 ಸಾವಿರ ಮೀರಿತು ಅಂದ್ರೆ ಎಷ್ಟೋ ಜನ ದಿನವಿಡೀ ಕೊರಗ್ತಾರೆ. ಅಂಥಾದ್ರಲ್ಲಿ ಒನ್ ಟೈಂ ಊಟಕ್ಕೆ 90 ಲಕ್ಷ ರೂಪಾಯಿ ಬಿಲ್ ಅಂದ್ರೆ ಹೇಗಾಗ್ಬೇಡ ಹೇಳಿ. ಹೌದು ನೀವು ಕೇಳಿಸಿಕೊಂಡಿದ್ದು ಹಂಡ್ರೆಡ್ ಪರ್ಸೆಂಟ್ ಕರೆಕ್ಟಾಗೇ ಇದೆ. 90 ಲಕ್ಷ ರೂಪಾಯಿ. ಅರೆ ಅಷ್ಟೊಂದು ಬಿಲ್ ಆಗುವಂಥದ್ದು ಏನಿತ್ತು ಅಂತಾ ನಿಮಗೆ ಅನ್ನಿಸಬಹುದು.
ಟರ್ಕಿಶ್ ಮೂಲದ ಫೇಮಸ್ ಶೆಫ್ ಸ್ಟಾಲ್ ಬೇ ಅವರು ದುಬೈನಲ್ಲಿ ನುಸ್ರೆಟ್ ಗೊಕ್ಸೆ ಹೆಸರಲ್ಲಿ ರೆಸ್ಟೋರೆಂಟ್ ನಡೆಸ್ತಿದ್ದಾರೆ. ದುಬೈಗೆ ಹಾರುವ ಕೋಟ್ಯಧೀಶರಿಗೆ ಈ ರೆಸ್ಟೋರೆಂಟ್ ಅಂದ್ರೆ ಅಚ್ಚುಮೆಚ್ಚು. ರೇಟ್ ಜಾಸ್ತಿ ಅಂತಾನೋ ಅಥವಾ ನಿಜವಾಗ್ಲೂ ಫುಡ್ ಟೇಸ್ಟ್ ಇರುತ್ತೋ ಗೊತ್ತಿಲ್ಲ. ಅದ್ರಲ್ಲೂ ಇತ್ತೀಚೆಗೆ ಈ ರೆಸ್ಟೋರೆಂಟ್ನಲ್ಲಿ ಒಂದು ಊಟಕ್ಕೆ 90 ಲಕ್ಷ ರೂಪಾಯಿ ವಿಧಿಸಿದ್ದು ರಶೀದಿ ಬಾರಿ ವೈರಲ್ ಆಗಿದೆ.
ಊಟದಲ್ಲಿ ಬೀಫ್ ಕಾರ್ಪಾಸಿಯೊ, ಗೋಲ್ಡನ್ ಸ್ಟೀಕ್, ಫ್ರೆಂಚ್ ಫ್ರೈಸ್, ಗೋಲ್ಡನ್ ಬಕ್ಲಾವಾ, ಟರ್ಕಿಶ್ ಕಾಫಿಯಂತಹ ವಿವಿಧ ರೆಸಿಪಿಗಳಿದ್ವು. ಒಂದೊಂದು ಐಟಮ್ಗೂ ಲಕ್ಷ ಲಕ್ಷ ರೂಪಾಯಿ ಚಾರ್ಜ್ ಮಾಡ್ಲಾಗಿದೆ. ಇಷ್ಟೆಲ್ಲಾ ಕಾಸ್ಟ್ಲಿ ಊಟ ಮಾಡಿದ ವ್ಯಕ್ತಿ ಕೊನೆಗೆ 24 ಸಾವಿರದ 500 ರೂಪಾಯಿ ಟಿಪ್ಸ್ ಸೇರಿ 90 ಲಕ್ಷ ರೂಪಾಯಿ ಪೇ ಮಾಡಿದ್ದಾರೆ. ರಶೀದಿಯ ಚಿತ್ರ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಲ್ ವೈರಲ್ ಆಗ್ತಿದ್ದಂತೆ ಕೆಲವ್ರು ಸಾಲ್ಟ್ ಬೇ ಮತ್ತು ಅವರ ರೆಸ್ಟೋರೆಂಟ್ ಅನ್ನು ಟೀಕಿಸಿದ್ದಾರೆ. ಶ್ರೀಮಂತರ ಶೋಕಿಗೆ ಮಿತಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಒಂದು ಊಟಕ್ಕೆ 90 ಲಕ್ಷ ಕೊಡೋ ಬದಲು ಅದೇ ದುಡ್ಡನ್ನ ಬಹುಶಃ ಯಾವುದಾದ್ರೂ ಸೇವಾಶ್ರಮಕ್ಕೋ ಅಥವಾ ಅಗತ್ಯ ಇರುವ ಮಕ್ಕಳಿಗೋ ನೀಡಿದ್ರೆ ತಿಂಗಳುಗಟ್ಟಲೆ ಊಟ ಮಾಡ್ತಿದ್ರು ಅಂದಿದ್ದಾರೆ.