ಮುಂಬೈ ಇಂಡಿಯನ್ಸ್ಗೆ ಹೀನಾಯ ಸೋಲು – ರಾಜಸ್ಥಾನಕ್ಕೆ ಭರ್ಜರಿ ಜಯ
ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ನಡುವೆ ನಡೆದ ಹೂವೋಲ್ಟೇಜ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 180 ರನ್‌ಗಳ ಗುರಿಯನ್ನು ಪಡೆದ ರಾಜಸ್ಥಾನ ಇನ್ನೂ 8 ಎಸೆತ ಬಾಕಿ ಇರುವಂತೆಯೇ 183 ರನ್ ಹೊಡೆದು ಜಯಗಳಿಸಿತು.
ಇದನ್ನೂ ಓದಿ: ಅಂಪೈರ್ ವಿರುದ್ಧ ಅಸಮಾಧಾನ ಹೊರಹಾಕಿದ್ದೇ ತಪ್ಪಾಯ್ತು – ವಿರಾಟ್ ಕೊಹ್ಲಿ ವಿರುದ್ಧ ಬಿಸಿಸಿಐ ಕ್ರಮ
ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ 74 ರನ್‌ಗಳ ಜೊತೆಯಾಟವಾಡಿ ಆರಂಭಿಕ ಮುನ್ನಡೆ ನೀಡಿದರು. ಬಟ್ಲರ್ 35 ರನ್(25 ಎಸೆತ, 6 ಬೌಂಡರಿ) ಹೊಡೆದು ಔಟಾದರು. ನಂತರ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಮುರಿಯದ ಎರಡನೇ ವಿಕೆಟಿಗೆ 65 ಎಸೆತಗಳಲ್ಲಿ 109 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಪಂದ್ಯದ ಮಧ್ಯೆ ಮಳೆ ಬಂದರೂ ರಾಜಸ್ಥಾನಕ್ಕೆ ಯಾವುದೇ ಸಮಸ್ಯೆ ಆಗಲಿಲ್ಲ. ಅಂತಿಮವಾಗಿ ಜೈಸ್ವಾಲ್ ಔಟಾಗದೇ 104 ರನ್(60 ಎಸೆತ, 9 ಬೌಂಡರಿ, 7 ಸಿಕ್ಸರ್) ಸಿಡಿಸಿ ಈ ಐಪಿಎಲ್‌ನಲ್ಲಿ ಎರಡನೇ ಶತಕ ಸಿಡಿಸಿದರು. ಜೈಸ್ವಾಲ್‌ಗೆ ಉತ್ತಮ ಸಾಥ್ ನೀಡಿದ ಸ್ಯಾಮ್ಸನ್ ಔಟಾಗದೇ 38 ರನ್ (28 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ 52 ರನ್‌ಗಳಿರುಷ್ಟವರಲ್ಲಿ ಪ್ರಮಖ 4 ವಿಕೆಟ್ ಕಳೆದುಕೊಂಡಿತ್ತು. ವಡೇರಾ ಮತ್ತು ತಿಲಕ್ ವರ್ಮಾ 5ನೇ ವಿಕೆಟಿಗೆ 52 ಎಸೆತಗಳಲ್ಲಿ 99 ರನ್ ಜೊತೆಯಾಟವಾಡಿದರು. ಆದರೆ 28 ರನ್ ಗಳಿಸುವಷ್ಟರಲ್ಲಿ ಕೊನೆಯ 5 ವಿಕೆಟ್ ಕಳೆದುಕೊಂಡ ಪರಿಣಾಮ ಮುಂಬೈ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ರಾಜಸ್ಥಾನ ಪರ ಸಂದೀಪ್ ಶರ್ಮಾ 18 ರನ್ ನೀಡಿ 5 ವಿಕೆಟ್ ಕಿತ್ತರೆ ಟ್ರೆಂಟ್ ಬೌಲ್ಟ್ 2 ವಿಕೆಟ್ ಪಡೆದರು.