ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು – ರೋಹಿತ್ ಶರ್ಮಾ ಲೆಕ್ಕಾಚಾರ ಫೇಲ್?
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದೆ. ಮೊದಲ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಗೆದ್ದ ಆಫ್ರಿಕಾ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹಾಗಾದರೆ,ರೋಹಿತ್ ಶರ್ಮಾ ಸ್ಟ್ರ್ಯಾಟಜಿಗಳು ಆಫ್ರಿಕಾದಲ್ಲಿ ವರ್ಕೌಟ್ ಆಗ್ತಿಲ್ವಾ? ಹಾಗೆಯೇ ವಿಕೆಟ್ ಬೀಳದೆ ಇದ್ದಾಗ ವಿರಾಟ್ ಕೊಹ್ಲಿ ಬ್ಲ್ಯಾಕ್ ಮ್ಯಾಜಿಕ್ ಮಾಡ್ತಿದ್ದಾರಾ..? ಈ ಬಗ್ಗೆ ವಿವರ ಇಲ್ಲಿದೆ.
ಇದನ್ನೂ ಓದಿ: ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಬೌಲರ್ಸ್ ಎಡವುತ್ತಿದ್ದಾರಾ?
ವರ್ಲ್ಡ್ಕಪ್ನಲ್ಲಿ ರೋಹಿತ್ ಯಾವ ರೀತಿ ಅಗ್ರೆಸ್ಸಿವ್ ಆಗಿ ಕ್ಯಾಪ್ಟನ್ಸಿ ಮಾಡಿದ್ದರು. ಬೌಲಿಂಗ್ ನಲ್ಲಿ ಬದಲಾವಣೆ, ಫೀಲ್ಡಿಂಗ್ ಸೆಟ್ ಎಲ್ಲದ್ರಲ್ಲೂ ಮಿಂಚಿನಂತಾ ಡಿಸೀಶನ್ಗಳನ್ನ ತೆಗೆದುಕೊಳ್ತಿದ್ರು. ಒಂದು ಚೇಂಜೆಸ್ ಮಾಡಿದ್ರೆ ಸಾಕು, ವಿಕೆಟ್ ಬಿತ್ತು ಅಂತಾನೆ ಅರ್ಥ. ಆದ್ರೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ಗೆ ಯಾವುದೇ ಪ್ಲ್ಯಾನಿಂಗ್ ಇಲ್ಲದೆ ಅಖಾಡಕ್ಕಿಳಿದಂತೆ ಕಾಣ್ತಿದೆ. ಫಸ್ಟ್ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ್ಫಾಮೆನ್ಸ್ ನೋಡಿದ್ರೆ. ಬೌಲಿಂಗ್ ಚೇಂಜೆಸ್ ಮತ್ತು ಫಿಲ್ಡಿಂಗ್ ಚೇಂಜೆಸ್ನಲ್ಲಿ ರೋಹಿತ್ ಶರ್ಮಾ ಎಡವುತ್ತಿದ್ದಾರೆ ಅನ್ನೋದರಲ್ಲಿ ಡೌಟೇ ಇಲ್ಲ. ಯಾವಾಗಲೂ ರೋಹಿತ್ ಶರ್ಮಾ ಯಾರೇ ಬ್ಯಾಟ್ಸ್ಮನ್ಗಳು ಕ್ರೀಸ್ಗಿಳಿದ್ರೂ ಕೂಡ ಅವರನ್ನ ಸೆಟ್ ಆಗೋದಕ್ಕೆ ಬಿಡ್ತಾ ಇರಲಿಲ್ಲ. ಕೂಡಲೇ ಬೌಲಿಂಗ್, ಫೀಲ್ಡಿಂಗ್ನಲ್ಲಿ ಮಿಂಚಿನಂಥಾ ಚೇಂಜೆಸ್ಗಳನ್ನ ಮಾಡಿ ಬ್ಯಾಟ್ಸ್ಮನ್ಗಳನ್ನ ಪೆವಿಲಿಯನ್ಗೆ ಕಳಿಸುತ್ತಿದ್ದರು. ಭಾರತದಲ್ಲಿ ಟೆಸ್ಟ್ ಸೀರಿಸ್ ನಡೆದಾಗಲೆಲ್ಲಾ ರೋಹಿತ್ ಕ್ಯಾಪ್ಟನ್ಸಿ ಲೆವೆಲ್ ಬೇರೆಯೇ ಇತ್ತು. ಆದ್ರೆ ಅಂಥಾ ಡಿಶೀಶನ್ಗಳು ಸೌತ್ ಆಫ್ರಿಕಾ ವಿರುದ್ಧದ ಫಸ್ಟ್ ಟೆಸ್ಟ್‌ನಲ್ಲಿ ಕಂಡುಬಂದಿಲ್ಲ.
ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ರೋಹಿತ್ ಕ್ಯಾಪ್ಟನ್ಸಿಯನ್ನ ಕ್ರಿಟಿಸೈಸ್ ಮಾಡಿದ್ದಾರೆ. ಯಾಕಂದ್ರೆ ಲಂಚ್ ಬಳಿಕ ಪ್ರಸಿಧ್ ಕೃಷ್ಣ ಮತ್ತು ಶಾರ್ದುಲ್ ಠಾಕೂರ್ ಕೈಯಲ್ಲಿ ಬೌಲಿಂಗ್ ಮಾಡಿಸಿದ್ರು. ಮೇನ್ ಬೌಲರ್ಸ್ಗಳಾದ ಜಸ್ತ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ರನ್ನ ಬಿಟ್ಟು ಪ್ರಸಿಧ್ ಕೃಷ್ಣ ಮತ್ತು ಶಾರ್ದುಲ್ಗೆ ಬಾಲ್ ನೀಡಿರೋದು ರಾಂಗ್ ಡಿಸೀಶನ್ ಅಂತಾ ರವಿಶಾಸ್ತ್ರಿ ಹೇಳಿದ್ದಾರೆ. ಪ್ರತಿ ಸೆಷನ್ ಸ್ಟಾರ್ಟಿಂಗ್ ವೇಳೆ ಮೇನ್ ಬೌಲರ್ಸ್ಗಳ ಕೈಯಲ್ಲೇ ಬೌಲಿಂಗ್ ಮಾಡಿಸಬೇಕು. ಸೆಷನ್ ಸ್ಟಾರ್ಟಿಂಗ್ ವೇಳೆ ವಿಕೆಟ್ ಪಡೆಯೋ ಅಪಾರ್ಚ್ಯುನಿಟಿ ಹೆಚ್ಚಾಗಿರುತ್ತೆ. ಯಾಕಂದ್ರೆ ಬ್ಯಾಟ್ಸ್ಮನ್ಗಳು ಮತ್ತೊಮ್ಮೆ ಕ್ರೀಸ್ಗೆ ಸೆಟ್ ಆಗಬೇಕು. ಅದಕ್ಕೆ ಟೈಮ್ ಬೇಕಾಗುತ್ತೆ. ಹೀಗಾಗಿ ಒಂದು ಬ್ರೇಕ್ ಬಳಿಕ ಮತ್ತೆ ಅಖಾಡಕ್ಕಿಳಿದಾಗ ಮೇನ್ ಬೌಲರ್ಸ್ಗಳ ಮೂಲಕ ಅಟ್ಯಾಕ್ ಮಾಡಿಸೋದು ಬೆಸ್ಟ್ ಆಪ್ಷನ್. ಎಲ್ಲಾ ಟೀಂಗಳು ಕೂಡ ಅದೇ ಮಾಡೋದು. ಆದ್ರೆ, ರೋಹಿತ್ ಶರ್ಮಾ ಮಾತ್ರ ಲಂಚ್ ಸೆಷನ್ ಬಳಿಕ ಪ್ರಸಿಧ್ ಕೃಷ್ಣ ಮತ್ತು ಶಾರ್ದುಲ್ ಕೈಯಲ್ಲಿ ಬೌಲಿಂಗ್ ಮಾಡಿಸಿರೋ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. 2ನೇ ದಿನದಾಟದ ವೇಳೆ ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲೂ ರೋಹಿತ್ ಶರ್ಮಾರ ಟ್ಯಾಕ್ಟಿಕ್ಸ್ಗಳು ಫೇಲ್ ಆಗಿದೆ. ಹೀಗಾಗಿ ಸರಿಯಾದ ಪ್ಲ್ಯಾನಿಂಗ್ ಮತ್ತು ಎಕ್ಸಿಕ್ಯೂಶನ್ ಇಲ್ಲದೆ ಈ ಮ್ಯಾಚ್ನ್ನ ಗೆಲ್ಲೋಕೆ ಟೀಂ ಇಂಡಿಯಾಗೆ ಸಾಧ್ಯವೇ ಇಲ್ಲ.
ಇವೆಲ್ಲದ್ರ ಮಧ್ಯೆ, 2ನೇ ದಿನದಾಟದ ವೇಳೆ ವಿರಾಟ್ ಕೊಹ್ಲಿ ಗ್ರೌಂಡ್ನಲ್ಲಿ ಒಂದು ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ರು. ಸೌತ್ ಆಫ್ರಿಕಾ ಬ್ಯಾಟಿಂಗ್ ಮಾಡ್ತಾ ಇದ್ದಾಗ, ವಿಕೆಟ್ ಕೂಡ ಬೀಳದೆ ಇದ್ದಾಗ ಮ್ಯಾಚ್ನ 29ನೇ ಓವರ್ಗೂ ಮುನ್ನ ವಿರಾಟ್ ಕೊಹ್ಲಿ ಒಂದು ಟ್ರಿಕ್ ಮಾಡಿದ್ರು. ಸ್ಟಂಪ್ ಬಳಿಗೆ ತೆರಳಿದ ವಿರಾಟ್ ಕೊಹ್ಲಿ ಬೇಲ್ಸ್ನ್ನ ಅದಲು ಬದಲು ಮಾಡಿದ್ರು. ಲೆಗ್ಸ್ಟಂಪ್ ಮೇಲೆ ಇದ್ದ ಬೇಲ್ಸ್ನ್ನ ಆಫ್ ಸ್ಟಂಪ್ ಮೇಲೆ ಇಂಟ್ರು. ಆಫ್ ಸ್ಟಂಪ್ ಮೇಲಿದ್ದ ಬೇಲ್ಸ್ನ್ನ ಲೆಗ್ಸ್ಟಂಪ್ ಮೇಲೆ ಇಟ್ರು. ಬಳಿಕ ಬೌಲಿಂಗ್ಗೆ ಇಳಿದ ಜಸ್ಪ್ರಿತ್ ಬುಮ್ರಾ 29ನೇ ಓವರ್ನ ಕೊನೆಯ ಬಾಲ್ನಲ್ಲಿ ಟೋನಿ ಡೇ ವಿಕೆಟ್ ಪಡೆದ್ರು. ಕೊಹ್ಲಿಯ ಬ್ಲ್ಯಾಕ್ ಮ್ಯಾಜಿಕ್ ವರ್ಕೌಟ್ ಆಯ್ತು. ನಿಮಗೆ ನೆನಪಿರಬಹುದು, ಈ ಹಿಂದೆ ಇಂಗ್ಲೆಂಡ್ನ ಪೇಸ್ ಬೌಲರ್ ಸ್ಟುವರ್ಟ್ ಬ್ರಾಡ್ ಕೂಡ ಆ್ಯಶಸ್ ಟೆಸ್ಟ್ ಮ್ಯಾಚ್ ಇದೇ ರೀತಿ ಮಾಡಿದ್ರು. ಆಸ್ಟ್ರೇಲಿಯಾ ಮಾರ್ನಸ್ ಕ್ರೀಸ್ನಲ್ಲಿದ್ದ ವೇಳೆ ಸ್ಟುವರ್ಟ್ ಬ್ರಾಡ್ ಸ್ಲಿಪ್ನಿಂದ ಬಂದು ಮಾರ್ನಸ್ ಎದುರೇ ವಿರಾಟ್ ಕೊಹ್ಲಿ ಮಾಡಿದಂತೆಯೇ ಬೇಲ್ಸ್ನ್ನ ಅದಲು-ಬದಲು ಮಾಡಿದ್ರು. ಮಾರ್ನಸ್ ಕೂಡ ಆಶ್ಚರ್ಯದಿಂದ ನೊಡ್ತಾನೆ ಸ್ಮೈಲ್ ಮಾಡಿದ್ರು. ಅದ್ರ ನೆಕ್ಸ್ಟ್ ಬಾಲ್ ಮಾರ್ನಸ್ ಔಟಾಗ್ತಾರೆ. ಅಲ್ಲಿ ಆಗಿರೋದಿಷ್ಟೇ, ಸ್ಟುವರ್ಟ್ ಬ್ರಾಡ್ ಬೇಲ್ಸ್ ಅದಲು-ಬದಲು ಮಾಡ್ತಾನೆ ಮಾರ್ನಸ್ರ ಕಾನ್ಸಂಟ್ರೇಶನ್ ಡೈವರ್ಟ್ ಆಗಿತ್ತು. ಇದೀಗ ವಿರಾಟ್ ಕೊಹ್ಲಿ ಕೂಡ ಅದನ್ನೇ ಮಾಡಿದ್ದಾರೆ. ಬಟ್ ಇಲ್ಲಿ ಕೊಹ್ಲಿ ಬೇಲ್ಸ್ ಚೇಂಜ್ ಮಾಡೋ ವೇಳೆ ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳು ಅದನ್ನ ಅಬ್ಸರ್ವ್ ಮಾಡ್ತಾ ಇರಲಿಲ್ಲ. ಬಟ್ ಪ್ಲೇಯರ್ಸ್ಗಳಿಗೆ ಕೆಲ ನಂಬಿಕೆಗಳಿರ್ತಾವೆ. ಹೀಗಾಗಿ ಕೊಹ್ಲಿಯ ಮೈಂಡ್ನಲ್ಲಿ ಅದೇನಿತ್ತೋ ಗೊತ್ತಿಲ್ಲ, ಟೋಟಲಿ ಬ್ಲ್ಯಾಕ್ ಮ್ಯಾಜಿಕ್ ಅಂತಾ ವರ್ಕೌಟ್ ಆಗಿದೆ.