ಮಿಚಾಂಗ್‌ ಅಬ್ಬರಕ್ಕೆ ನದಿಯಂತಾದ ರಸ್ತೆಗಳು! – ಚೆನ್ನೈನಲ್ಲಿ ರಾಜಾರೋಷವಾಗಿ ಅಡ್ಡಾಡಿದ ಮೊಸಳೆ

ಮಿಚಾಂಗ್‌ ಅಬ್ಬರಕ್ಕೆ ನದಿಯಂತಾದ ರಸ್ತೆಗಳು! – ಚೆನ್ನೈನಲ್ಲಿ ರಾಜಾರೋಷವಾಗಿ ಅಡ್ಡಾಡಿದ ಮೊಸಳೆ

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮಿಚಾಂಗ್‌ ಚಂಡಮಾರುತವು ತಮಿಳುನಾಡಿನಲ್ಲಿ ರೌದ್ರಾವತಾರ ತಾಳಿದೆ. ಕ್ಷಣ ಕ್ಷಣಕ್ಕೂ ತೀವ್ರ ಸ್ವರೂಪವನ್ನು ತಾಳುತ್ತಿದೆ. ಚೆನ್ನೈನಲ್ಲಿ ಮಳೆ ಸಂಬಂಧಿ ಅನಾಹುತಗಳಿಂದ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಮಿಚಾಂಗ್‌ ಚಂಡಮಾರುತದಿಂದಾಗಿ ಚೆನ್ನೈ, ಆಂಧ್ರಪ್ರದೇಶದಲ್ಲಿ ನಿರಂತವಾಗಿ ಮಳೆಯಾಗುತ್ತಿದೆ. ಹಲವು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಕೆಲ ನಗರಗಳಂತೂ ಸಂಪೂರ್ಣ ಜಲಾವೃತವಾಗಿವೆ. ರಸ್ತೆಗಳು ನದಿಯಂತಾಗಿದೆ. ವಾಹನಗಳು ಆಟಿಕೆಗಳಂತೆ ಕೊಚ್ಚಿಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ನಡುವೆ ಇನ್ನೊಂದು ಕುತೂಹಲಕಾರಿ ವಿಡಿಯೋ ಹರಿದಾಡುತ್ತಿದೆ. ಚೆನ್ನೈನ ಪೆರುಂಗಲತ್ತೂರಿನಲ್ಲಿ ಮೊಸಳೆಯೊಂದು ರಾಜಾರೋಷವಾಗಿ ರಸ್ತೆ ದಾಟುತ್ತಿರುವ ದೃಶ್ಯ ಭಾರಿ ವೈರಲ್‌ ಆಗಿವೆ.

ಇದನ್ನೂ ಓದಿ: ನನ್ನನ್ನೇ ಭಯಪಡಿಸುವೆಯಾ.. ನಿನ್ನ ಸೊಕ್ಕನ್ನಡಗಿಸುವೆ! – ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿ ಬೆಚ್ಚಿಬಿದ್ದ ಕರಡಿ!

ಮನೋಬಲ ವಿಜಯಬಾಲನ್ (@ManobalaV) ಎಂಬವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಒಂದೆಡೆ ನಿರಂತರವಾಗಿ ಮಳೆ ಸುರಿಯುತ್ತಿದ್ದರೆ, ಮೊಸಳೆಯೊಂದು ರಾಜಾರೋಷವಾಗಿ ರಸ್ತೆ ದಾಟುತ್ತಿದೆ. ಚೆನ್ನೈನ ಪೆರುಂಗಲತ್ತೂರಿನ ಬೀದಿಯಲ್ಲಿ ಈ ದೃಶ್ಯ ಕಂಡುಬಂದಿದೆ. ವೈರಲ್‌ ಆದ ವಿಡಿಯೋದಲ್ಲಿ ಮಳೆಯ ನಡುವೆಯೂ  ಭಾರೀ ಗಾತ್ರದ ಮೊಸಳೆಯೊಂದು ನಿಧಾನಕ್ಕೆ ರಸ್ತೆ ದಾಟುತ್ತಾ, ಪೊದೆಯೊಳಗೆ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು.

Shwetha M