ಟೊಮ್ಯಾಟೊ ಬೆಳೆದವರ ಮನೆಗೆ ಹಣದ ಹೊಳೆ -1 ಎಕರೆಯಲ್ಲಿ ₹20 ಲಕ್ಷ ಆದಾಯ ಎಣಿಸಿದ ಪೇದೆ

ಟೊಮ್ಯಾಟೊ ಬೆಳೆದವರ ಮನೆಗೆ ಹಣದ ಹೊಳೆ -1 ಎಕರೆಯಲ್ಲಿ ₹20 ಲಕ್ಷ ಆದಾಯ ಎಣಿಸಿದ ಪೇದೆ

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನುವಂತಾಗಿದೆ ಟೊಮ್ಯಾಟೊ ಕಥೆ. ಕೆಲವೊಮ್ಮೆ ಕೇಳೋರೂ ದಿಕ್ಕಿಲ್ಲದೆ ಬೀದಿ ಬೀದಿಯಲ್ಲಿ ಬಿದ್ದು ಕೊಳೆತು ಗಬ್ಬೆದ್ದು ನಾರುವ ಅದೇ ಟೊಮ್ಯಾಟೊಗೆ ಈಗ ಚಿನ್ನದ ದರ ಬಂದಿದೆ. ಸೆಂಚುರಿ, ಡಬಲ್ ಸೆಂಚುರಿ ಹೊಡೆದ್ರೂ ರೇಟ್ ಮಾತ್ರ ಕಡಿಮೆಯಾಗುವ ಲಕ್ಷಣ ಕಾಣ್ತಿಲ್ಲ. ಇದೀಗ ಟೊಮ್ಯಾಟೊ ಬೆಳೆದಿರುವ ರೈತರಿಗೆ ಬಂಪರ್ ಲಾಟರಿ ಹೊಡೆದಂತಾಗಿದೆ. ಹಾಸನದಲ್ಲಂತೂ ಪೊಲೀಸ್ ಒಬ್ರು ಟೊಮ್ಯಾಟೊ ಬೆಳೆದು ಬರೋಬ್ಬರಿ 20 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.

ಇದನ್ನೂ ಓದಿ : ಚೆಂಡು ತೆಗೆಯಲು ಹೋಗಿ ಬಾವಿಗೆ ಬಿದ್ದ ತಮ್ಮ – ಜೀವದ ಹಂಗು ತೊರೆದು ರಕ್ಷಿಸಿದಳು 8 ವರ್ಷದ ಅಕ್ಕ

ಹಾಸನದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿರುವ ಬೇಲೂರು ತಾಲೂಕಿನ ಬಸ್ತಿಹಳ್ಳಿ ಗ್ರಾಮದ ಭೈರೇಶ್, ತಮ್ಮ ಒಂದು ಎಕರೆ ಆರು ಗುಂಟೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆ ಬೆಳೆದಿದ್ದಾರೆ. ಟೊಮ್ಯಾಟೊ ಇಳುವರಿಯ ಹೊತ್ತಿಗೆ ಒಳ್ಳೆ ಬೆಲೆ ಬಂದಿದೆ. ಈಗಾಗಲೇ ಸಾವಿರ ಬಾಕ್ಸ್​ ಟೊಮ್ಯಾಟೊ ಮಾರಿರುವ ಭೈರೇಶ್​ 20 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಇನ್ನೂ ಸಾವಿರ ಬಾಕ್ಸ್ ಟೊಮ್ಯಾಟೊ ಮಾರುವ ನಿರೀಕ್ಷೆಯಲ್ಲಿದ್ದಾರೆ.

ಸರ್ಕಾರಿ ಕೆಲಸದ ಒತ್ತಡದ ನಡುವೆಯೂ ಒಳ್ಳೆಯ ಕೃಷಿ ಮಾಡಿ ಲಕ್ಷಾಂತರ ರೂಪಾಯಿಯ ಲಾಭವನ್ನು ಭೈರೇಶ್ ಪಡೆದಿದ್ದಾರೆ. ಆದರೆ, ಪೊಲೀಸ್ ಪೇದೆಯ ಹೊಲಕ್ಕೂ ಕಳ್ಳರ ಕಾಟ ತಪ್ಪಿಲ್ಲ. ಈಗಾಗಲೇ ನೂರಕ್ಕೂ ಹೆಚ್ಚು ಬಾಕ್ಸ್ ಟೊಮ್ಯಾಟೊವನ್ನು ಖದೀಮರು ಕಳವು ಮಾಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಭೈರೇಶ್​, ರಾತ್ರಿಯಿಡಿ ಹೊಲದಲ್ಲಿ ಕಾವಲು ಹಾಕಿ ಟೊಮ್ಯಾಟೊ ಬೆಳೆ ಕಾಪಾಡಿಕೊಂಡಿದ್ದಾರೆ. ಉಡುಪಿ, ಮಂಗಳೂರಿನಿಂದ ಬಂದು ಬಸ್ತಿಯಲ್ಲಿರುವ ಭೈರೇಶ್ ಹೊಲದಲ್ಲಿ ವರ್ತಕರು ಟೊಮ್ಯಾಟೊ ಖರೀದಿ ಮಾಡುತ್ತಿದ್ದಾರೆ. ಹೆಚ್ಚಿನ ಆದಾಯದಿಂದ ಬೈರೇಶ್​ ಕುಟುಂಬವೂ ಕೂಡ ತುಂಬಾ ಖುಷಿಯಾಗಿದೆ.

 

suddiyaana