ನಾಯಿಗೇಕೆ ಸಿಎಂ ಮೇಲೆ ಸಿಟ್ಟು! – ಪೋಸ್ಟರ್ ಕಿತ್ತು ಹಾಕಿದ್ದ ಶ್ವಾನದ ಮೇಲೆ ಕೇಸ್!

ನಾಯಿಗೇಕೆ ಸಿಎಂ ಮೇಲೆ ಸಿಟ್ಟು! – ಪೋಸ್ಟರ್ ಕಿತ್ತು ಹಾಕಿದ್ದ ಶ್ವಾನದ ಮೇಲೆ ಕೇಸ್!

ಅಮರಾವತಿ: ಒಂದು ಪಕ್ಷದ ಕಾರ್ಯಕರ್ತರು ಇನ್ನೊಂದು ಪಕ್ಷದ ಬ್ಯಾನರ್ ಪೋಸ್ಟರ್‌ಗಳನ್ನು ಹರಿದು ಹಾಕುವುದು, ವಿರೋಧ ಪಕ್ಷದ ನಾಯಕರ ವಿರುದ್ಧ ಅಪಪ್ರಚಾರದ ಪೋಸ್ಟರ್ ಹಾಕಿ ದ್ವೇಷ ಸಾರುವುದು, ಬಳಿಕ ಆ ಪ್ರಕರಣದ ವಿರುದ್ದ ದೂರು ದಾಖಲಾಗುವುದನ್ನು ನಾವು ಕೇಳಿರುತ್ತೇವೆ. ಆದರೆ ತನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲದ ನಾಯಿಯೊಂದು ರಾಜಕೀಯ ಪಕ್ಷವೊಂದರ ಪೋಸ್ಟರ್ ಹರಿದು ಹಾಕಿದೆ. ಇದೀಗ ಆ ನಾಯಿಯ ವಿರುದ್ಧ ಕೇಸ್ ದಾಖಲಾದ ವಿಚಿತ್ರ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಇದನ್ನೂ ಓದಿ: ಬೆಳಗಾವಿ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ – ಮತ್ತಿಬ್ಬರು ಶಾಸಕರು ರೆಬೆಲ್.. ಮುಂದಿನ ನಡೆ ಏನು..?

ವಿಜಯವಾಡದ ಶ್ರೀಕಾಕುಳಂ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಮನೆಯ ಗೋಡೆ ಮೇಲೆ ಅಂಟಿಸಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಅವರ ಸಣ್ಣ ಪೋಸ್ಟರ್ ಅಂಟಿಸಲಾಗಿತ್ತು. ಈ ಪೋಸ್ಟರ್ ಅನ್ನು ರಾತ್ರಿ ಹೊತ್ತಲ್ಲಿ ನಾಯಿ ಕಿತ್ತು ಹಾಕಿದೆ. ಈ ಪೋಸ್ಟರ್ ಮೇಲೆ ‘ಜಗನಣ್ಣ ಮಾ ಭವಿಷ್ಯತು’ (ಜಗನ್ ಅಣ್ಣ ನಮ್ಮ ಭವಿಷ್ಯ) ಎಂದು ಬರೆಯಲಾಗಿತ್ತು. ಇದಕ್ಕೆ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋಡೆಗೆ ಅಂಟಿಸಿದ ಪೋಸ್ಟರ್ ಅನ್ನು ಶ್ವಾನ ಕಿತ್ತು ಹಾಕುತ್ತಿರುವ ದೃಶ್ಯವನ್ನು ಅಲ್ಲೇ ಇದ್ದವರು ವೀಡಿಯೋ ಮಾಡಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅಲ್ಲದೇ ಟ್ರೋಲ್ ಕೂಡಾ ಆಗಿತ್ತು. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿಯ ಮೇಲೆ ಕೇಸ್ ದಾಖಲಾಗಿದೆ.

‘ತೆಲುಗು ದೇಶಂ ಪಕ್ಷ’ದ ಕಾರ್ಯಕರ್ತೆ ದಾಸರಿ ಉದಯಶ್ರೀ ಎಂಬುವವರು ದಾಸರಿ ಪ್ರಕರಣಕ್ಕೆ ಸಂಬಂಧಿಸಿ ನಾಯಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ಅಲ್ಲದೆ ಕೂಡಲೇ ಶ್ವಾನವನ್ನು ಬಂಧಿಸಿ, ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

suddiyaana