ರಾಷ್ಟ್ರ ಧ್ವಜಕ್ಕೆ ಅವಮಾನ – ಪಾಂಡ್ಯ ವಿರುದ್ಧ ಕೇಸ್ ! ,3 ವರ್ಷ ಜೈಲು?

ರಾಷ್ಟ್ರ ಧ್ವಜಕ್ಕೆ ಅವಮಾನ – ಪಾಂಡ್ಯ ವಿರುದ್ಧ ಕೇಸ್ ! ,3 ವರ್ಷ ಜೈಲು?

ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಸಂಭ್ರಮಾಚರಣೆಯೊಂದಿಗೆ ಮೈಮರೆತಿದ್ದರು. ಇದೀಗ ಈ ಮೈಮರೆಯುವಿಕೆಯಿಂದಾಗಿ ಟೀಮ್ ಇಂಡಿಯಾ ಆಟಗಾರ ಇಕ್ಕಟ್ಟಿಗೆ ಸಿಲುಕಿದ್ದಾರೆ.  ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಹಿನ್ನಲೆ ಪಾಂಡ್ಯ ವಿರುದ್ಧ ದೂರು ದಾಖಲಾಗಿದೆ.

ಹಾರ್ದಿಕ್ ಪಾಂಡ್ಯ  ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ವಕೀಲರೊಬ್ಬರು ಪುಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ವಿಜಯೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ದೂರು ನೀಡಲಾಗಿದೆ. ಶಿವಾಜಿ ನಗರ ಪೊಲೀಸ್ ಠಾಣಾಧಿಕಾರಿಗೆ ವಕೀಲ ವಾಜಿದ್ ಖಾನ್  ದೂರು ಸಲ್ಲಿಸಿದ್ದಾರೆ. ಈ ಆರೋಪ ಸಾಬೀತಾದರೆ,   3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಅವಕಾಶವಿದೆ.

ಇದನ್ನೂ ಓದಿ: ಆಕ್ಟೀವಾ ಬೈಕ್​​ಗೆ ಟಿಪ್ಪರ್​ ಲಾರಿ ಡಿಕ್ಕಿ – ಎಂಬಿಬಿಎಸ್‌ ವಿದ್ಯಾರ್ಥಿನಿ ಸ್ಥಳದಲ್ಲೇ ಸಾ*ವು!

ಭಾನುವಾರ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಭಾರತದ ಗೆಲುವನ್ನು ಆಚರಿಸುವಾಗ ಪಾಂಡ್ಯ ತಮ್ಮ ದೇಹದ ಸುತ್ತಲೂ ತ್ರಿವರ್ಣ ಧ್ವಜವನ್ನು ಸುತ್ತಿಕೊಂಡು ನೆಲದ ಮೇಲೆ ಅಶ್ಲೀಲ ವರ್ತನೆ ತೋರಿದ್ದಾರೆ ಎಂದು ಖಾನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. “ಈ ಕೃತ್ಯವು ಸಂಬಂಧಿತ ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು. ರಾಷ್ಟ್ರ ಧ್ವಜದ ಘನತೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ” ಎಂದು ದೂರಿನ ಅರ್ಜಿಯಲ್ಲಿ ತಿಳಿಸಲಾಗಿದೆ.

ವಿಶ್ವಕಪ್‌ ಗೆಲುವಿನ ಬಳಿಕ ಹಾರ್ದಿಕ್‌ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮ ಜತೆ ಕಿಸ್ಸಿಂಗ್‌ ಮಾಡುವುದು ಕಂಡುಬಂದಿತ್ತು. ಈ ವೇಳೆ ಅವರು ತ್ರಿವರ್ಣ ಧ್ವಜವನ್ನು ಸುತ್ತಿಕೊಂಡಿದ್ದರು. ಪಾಂಡ್ಯ ವರ್ತನೆಗೆ ಅದಾಗಲೇ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಇದೀಗ ಪಾಂಡ್ಯಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

Kishor KV

Leave a Reply

Your email address will not be published. Required fields are marked *