ಶೂ ಧರಿಸುವ ಮುನ್ನ ಎಚ್ಚರ.. – ಶೂ ಒಳಗೆ ಬೆಚ್ಚಗೆ ಕುಳಿತಿದ್ದ ನಾಗಪ್ಪ!
ನಮ್ಮ ದೈನಂದಿನ ಕಾರ್ಯಚಟುವಟಿಕೆಯಲ್ಲಿ ನಾವು ಸಾಕಷ್ಟು ವಿಷಯಗಳ ಬಗ್ಗೆ ಅಷ್ಟಾಗಿ ಗಮನ ಹರಿಸೋದಿಲ್ಲ. ಎಲ್ಲಿಗಾದರೂ ಹೋಗಿ ಬಂದಾಗ ಶೂ, ಹೆಲ್ಮೆಟ್ ಅನ್ನು ಮನೆ ಹೊರಗೆ ಬಿಟ್ಟು ಹೋಗುತ್ತೇವೆ. ಆಚೆ ಹೋಗುವಾಗ ಕೂಡ ಇವುಗಳ ಒಳಭಾಗವನ್ನು ಒಂದು ಕ್ಷಣವೂ ಕಣ್ಣಾಯಿಸುವುದಿಲ್ಲ. ಹೀಗೆ ಮಾಡುವುದು ಎಷ್ಟು ಅಪಾಯಕಾರಿ ಗೊತ್ತಾ? ಇಲ್ಲೊಂದು ನಾಗರ ಹಾವು ಶೂನಲ್ಲಿ ಪ್ರತ್ಯಕ್ಷವಾಗಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಇದನ್ನೂ ಓದಿ: ಬೋಟ್‌ನಲ್ಲಿ ಹೋಗುವಾಗ ಎಚ್ಚರ – ಸ್ವಲ್ಪ ಯಾಮಾರಿದ್ರೂ ಶಾರ್ಕ್‌ಗೆ ಆಹಾರವಾಗುತ್ತೀರ!
ಮಳೆಗಾಲ ಬಂತೆಂದರೆ ಸಾಕು ಹಾವುಗಳು ಬೆಚ್ಚಗಿನ ಸ್ಥಳಗಳನ್ನೇ ಆಯ್ಕೆ ಮಾಡುತ್ತವೆ. ಹೆಚ್ಚಾಗಿ ಸಂದುಗೊಂದುಗಳಲ್ಲಿ ಸೇರಿಕೊಳ್ಳುತ್ತವೆ. ಹೀಗಾಗಿ ನಾವು ಎಷ್ಟು ಎಚ್ಚರ ವಹಿಸಿದ್ರೂ ಸಾಕಾಗುವುದಿಲ್ಲ. ಧಾರಾವಾಡ ನಗರದ ಹೊಸಯಲ್ಲಾಪುರದ ಮೇದಾರ ಓಣಿಯಲ್ಲಿ ಹಾವಿನ ಮರಿಯೊಂದು ಶೂ ಒಳಗಡೆ ಬೆಚ್ಚಗೆ ಅವಿತು ಕುಳಿತಿತ್ತು. ಇದೀಗ ಈ ಹಾವಿನ ರಕ್ಷಣೆ ಮಾಡಲಾಗಿದೆ.
ನಂದಿತಾ ಶಿವನಗೌಡರ ಎಂಬವರ ಮನೆಯಲ್ಲಿ ನಾಗರ ಹಾವು ಪತ್ತೆಯಾಗಿದೆ. ಕಸ ಗುಡಿಸುವ ವೇಳೆ ಹಾವು ನೋಡಿದ ನಂದಿತಾ ಬೆಚ್ಚಿಬಿದ್ದಿದ್ದಾರೆ. ನಂತರ ಉರಗ ತಜ್ಞ ಎಲ್ಲಪ್ಪ ಜೋಡಳ್ಳಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಎಲ್ಲಪ್ಪ ಜೋಡಳ್ಳಿ ನಾಗರಹಾವಿನ ಮರಿಯನ್ನ ರಕ್ಷಣೆ ಮಾಡಿದ್ದಾರೆ.
ಶೂ ಹಾಕಿಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ಉರಗ ತಜ್ಞ ಎಲ್ಲಪ್ಪ ಮನವಿ ಮಾಡಿಕೊಂಡಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಹೀಗಾಗಿ ಶೂ ಧರಿಸುವಾಗ ಸ್ವಲ್ಪ ಜಾಗ್ರತೆ ವಹಿಸಿ ಎಂದು ಸಲಹೆ ನೀಡಿದ್ದಾರೆ.