ಸಿಕ್ಕ ಸಿಕ್ಕಲ್ಲಿ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡೋ ಮುನ್ನ ಎಚ್ಚರ – ದೇವರ ಹೆಸರಲ್ಲೇ ಮೋಸ ಮಾಡ್ತಿದ್ದ ಈ ಖತರ್ನಾಕ್‌!

ಸಿಕ್ಕ ಸಿಕ್ಕಲ್ಲಿ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡೋ ಮುನ್ನ ಎಚ್ಚರ – ದೇವರ ಹೆಸರಲ್ಲೇ ಮೋಸ ಮಾಡ್ತಿದ್ದ ಈ ಖತರ್ನಾಕ್‌!

ಇದು ಡಿಜಿಟಲ್‌ ಯುಗ.. ಕೈಯಲ್ಲಿ ಒಂದು ಫೋನ್‌ ಇದ್ರೆ ಸಾಕು.. ಜಗತ್ತನ್ನೇ ಸುತ್ತಿ ಬರಬಹುದು.. ಸಿಕ್ಕಲೆಲ್ಲಾ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪೇಮೆಂಟ್‌ ಮಾಡಿ ಬಿಡುತ್ತೇವೆ.. ದೇವಸ್ಥಾನಗಳಲ್ಲೂ ಕೂಡ ಕ್ಯೂ ಆರ್‌ ಕೋಡ್‌ ಸ್ಕ್ಯಾನರ್‌ ಬಂದು ಬಿಟ್ಟಿದೆ. ಭಕ್ತರು ಕೂಡ ಚಿಲ್ಲರೆ ಇಲ್ಲ ಅಂತಾ ಸ್ಕ್ಯಾನ್‌ ಮಾಡಿ ಬಿಡುತ್ತಾರೆ. ಆದ್ರೀಗ ಇಲ್ಲೊಬ್ಬ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾನೆ. ಹಲವಾರು ಬೌದ್ಧ ದೇವಾಲಯಗಳ ಹೆಸರಿನಲ್ಲಿ ದೇಣಿಗೆ ಹಣ ಪಡೆದು ವಂಚಿಸಿದ್ದಾನೆ. ಇದೀಗ ಈತ  ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ: ರಕ್ಷಾ ಬಂಧನದ ಇತಿಹಾಸ ಏನು ಗೊತ್ತಾ? – ರಾಖಿ ಕಟ್ಟೋ ಮುನ್ನ ಈ ವಿಚಾರ ತಿಳಿದುಕೊಳ್ಳಿ!

ಈ ಘಟನೆ ಚೀನಾದಲ್ಲಿ ನಡೆದಿದೆ. ವರದಿಗಳ ಪ್ರಕಾರ, ಈತ ದೇವಸ್ಥಾನದ ಹುಂಡಿಯ ಕ್ಯೂಆರ್ ಕೋಡ್ ಅನ್ನು ಮೇಲೆ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್‌ ಅಂಟಿಸಿದ್ದ. ಇದಲ್ಲದೇ ಮನೆಮನೆ ಭೇಟಿ ನೀಡಿ ದೇವಾಲಯಗಳ ದೇಣಿಗೆಯ ಹೆಸರಿನಲ್ಲಿ ತನ್ನ ಖಾತೆಗೆ ಹಣ ವರ್ಗಾಯಿಸುತ್ತಿದ್ದ. ಇದೀಗ ಈತನ ಕಳ್ಳಾಟ ಬಯಲಾಗಿದೆ.

ಈ ಖದೀಮ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾನೆ ಎಂದು ವರದಿಗಳು ಸೂಚಿಸಿವೆ. ಈ ವರ್ಷ ಶಾಂಕ್ಸಿ, ಸಿಚುವಾನ್ ಮತ್ತು ಚಾಂಗ್‌ಕಿಂಗ್ ಪ್ರಾಂತ್ಯಗಳಲ್ಲಿನ ದೇವಾಲಯಗಳಿಂದ 30,000 ಯುವಾನ್ (ಅಂದಾಜು ₹ 3.5 ಲಕ್ಷ) ಕದ್ದಿರುವುದಾಗಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ. ತನಿಖಾಧಿಕಾರಿಗಳ ಪ್ರಕಾರ, ಈತ ಕದ್ದ ಎಲ್ಲಾ ಹಣವನ್ನು ಹಿಂದಿರುಗಿಸಿರುವುದಾಗಿ ತಿಳಿದುಬಂದಿದೆ.

ಕೆಲವು ದಿನಗಳ ನಂತರ ದೇವಸ್ಥಾನದ ಆಡಳಿತ ಮಂಡಳಿಯವರು ಇದನ್ನು ಅರಿತು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಶಾಂಕ್ಸಿ ಪೊಲೀಸರು ತನಿಖೆ ನಡೆಸಿ ದೇವಸ್ಥಾನದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಇದಾದ ಬಳಿಕ ಈ ವ್ಯಕ್ತಿ ಕೆಲ ದಿನಗಳ ಹಿಂದೆ ಬಂದಿದ್ದು, ವಿಗ್ರಹದ ಮುಂದೆ ನಮಸ್ಕರಿಸಿ ಬಳಿಕ ಕಾಣಿಕೆ ಡಬ್ಬದ ಮೇಲೆ ಕ್ಯೂಆರ್ ಹಾಕಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದಲ್ಲಿ ದೇಣಿಗೆ ನೀಡಲು ಭಕ್ತ ಮೊಬೈಲ್‌ನಿಂದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ, ದೇಣಿಗೆ ಮೊತ್ತವನ್ನು ನೇರವಾಗಿ ಆ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿರುವುದು ಗೊತ್ತಾಗಿದೆ.

ಬಳಿಕ ಪೊಲೀಸರು ತನಿಖೆ ನಡೆಸಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಲ್ಲಿ ಹಲವು ದೇವಸ್ಥಾನಗಳಿಗೆ ಈ ರೀತಿ ವಂಚನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಪ್ರಕರಣದ ತನಿಖೆ ನಡೆಸುತ್ತಿರುವವರು ಆರೋಪಿಯು ಇಲ್ಲಿಯವರೆಗೆ ಎಲ್ಲಾ ಕದ್ದ ಹಣವನ್ನು ಹಿಂದಿರುಗಿಸಿದ್ದಾನೆ. ಈ ಪ್ರಕರಣವು ಪ್ರಪಂಚದಾದ್ಯಂತ ಇದೀಗ ಭಾರೀ ಚರ್ಚೆಯಲ್ಲಿದೆ.

Shwetha M

Leave a Reply

Your email address will not be published. Required fields are marked *