ಅಬ್ಬಬ್ಬಾ.. ಮಗುವಿನ ಕೈಯಲ್ಲೇ ಸ್ಪೋಟವಾಯ್ತು ಮೊಬೈಲ್!‌ – ಪುಟ್ಟ ಕಂದನಿಗೆ ಏನಾಯ್ತು?

ಅಬ್ಬಬ್ಬಾ.. ಮಗುವಿನ ಕೈಯಲ್ಲೇ ಸ್ಪೋಟವಾಯ್ತು ಮೊಬೈಲ್!‌ – ಪುಟ್ಟ ಕಂದನಿಗೆ ಏನಾಯ್ತು?

ಇತ್ತೀಚೆಗೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರೂ ಮೊಬೈಲ್‌ಗೆ ಅಡಿಕ್ಟ್‌ ಆಗಿದ್ದಾರೆ. ದಿನದ ಹೆಚ್ಚು ಸಮಯ ಮೊಬೈಲ್‌ ಬಳಕೆ ಮಾಡೋದ್ರಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇನ್ನೂ ಕೆಲವರಂತೂ ಚಾರ್ಜ್‌ ಇಟ್ಟುಕೊಂಡೇ ಫೋನ್‌ ಬಳಸುತ್ತಾರೆ. ಇದೀಗ ಇಲ್ಲೊಂದು ಕಡೆ ಪುಟ್ಟ ಬಾಲಕಿಯೊಬ್ಬಳು ಮೊಬೈಲ್‌ ಚಾರ್ಜ್‌ಗೆ ಇಟ್ಟು ಫೋನ್‌ ಯೂಸ್‌ ಮಾಡಿದ್ದು, ಆಕೆಯ ಕೈಯಲ್ಲೇ ಮೊಬೈಲ್‌ ಸ್ಟೋಟಗೊಂಡಿದೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಆಟವಾಡುತ್ತಿದ್ದ ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದ ಪಾಪಿ! – ಐದು ಮಕ್ಕಳ ಸ್ಥಿತಿ ಗಂಭೀರ!

ಬಾಲಕಿಯೊಬ್ಬಳು ಮನೆಯಲ್ಲಿ ಮೊಬೈಲ್ ವೀಕ್ಷಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ. ಈ ಸ್ಪೋಟದ ತೀವ್ರತೆಗೆ ಬಾಲಕಿ ಸೋಫಾದ ಕೆಳಗೆ ಬಿದ್ದಿದ್ದಾಳೆ. ಇದರ ಭಯಾನಕ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್  ಆಗಿದೆ. ಮಾರ್ಚ್ 9ರಂದು ಈ ಘಟನೆಯು ನಡೆದಿದ್ದು ಆಕೆಯ ಮನೆಯೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಬಾಲಕಿ ಸೋಫಾದ ಮೇಲೆ ಕುಳಿತುಕೊಂಡು ತನ್ನ ಫೋನ್ ಅನ್ನು ಸ್ಕ್ರೋಲ್ ಮಾಡುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ವೈರಲ್‌ ಆದ ವಿಡಿಯೋದಲ್ಲಿ ಏನಿದೆ?

ಬಾಲಕಿಯು ಮನೆಯ ಸೋಫಾದ ಮೇಲೆ ಕುಳಿತುಕೊಂಡು ಚಾರ್ಜಿಂಗ್‌ಗೆ ಹಾಕಿದ್ದ ಫೋನ್ ಬಳಕೆ ಮಾಡಿದ್ದಳು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಫೋನ್ ಸ್ಫೋಟವಾಗಿದೆ. ಇದರಿಂದಾಗಿ ಅವಳು ಸಮತೋಲನ ಕಳೆದುಕೊಂಡು ಸೋಫಾದಿಂದ ಬಿದ್ದಿದ್ದಾಳೆ. ಅದೃಷ್ಟವಶಾತ್, ಭಯಾನಕ ಘಟನೆಯ ಹೊರತಾಗಿಯೂ, ಸ್ಫೋಟದಿಂದ ಬಾಲಕಿಗೆ ಯಾವುದೇ ಗಾಯವಾಗಿಲ್ಲ.

ಸ್ಫೋಟದ ಬಳಿಕ ಫೋನ್‌ನಿಂದ ಬೆಂಕಿ ಮತ್ತು ಹೊಗೆ ಬರಲಾರಂಭಿಸಿದೆ. ಗಾಬರಿಗೊಂಡ ಬಾಲಕಿಯೂ ಜೋರಾಗಿ ಅಳುತ್ತಾ ಅಲ್ಲಿಂದ ಓಡಿ ಹೋಗಿದ್ದಾಳೆ. ಅಷ್ಟರಲ್ಲಿ, ಹಾನಿಗೊಳಗಾದ ಮೊಬೈಲ್ ಫೋನ್ ಉರಿಯುತ್ತಲೇ ಇತ್ತು. ಈ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದಂತೆ ಅನೇಕ ವೀಕ್ಷಕರು ಮೊಬೈಲ್ ಫೋನ್‌ಗಳ ಸುರಕ್ಷತೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಫೋನ್‌ಗಳು ಚಾರ್ಜ್ ಮಾಡುವಾಗ ಬಳಸಿದರೆ ಅಪಾಯಕಾರಿಯಾಗಬಹುದು ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ. ಚೀನನಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಮಧ್ಯೆ ಕೆಲವು ಇದು ಎಐ ನಿರ್ಮಿತ ವಿಡಿಯೊ ಇರಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.

Shwetha M