ಕರಾವಳಿ ಗಡಿಯಲ್ಲಿ ಚೀನಾದ ಬೋಟ್‌ ಪತ್ತೆ! – ಗೂಢಚಾರಿಕೆ ನಡೆಸುತ್ತಿದ್ಯಾ ಡ್ರ್ಯಾಗನ್‌ ರಾಷ್ಟ್ರ?

ಕರಾವಳಿ ಗಡಿಯಲ್ಲಿ ಚೀನಾದ ಬೋಟ್‌ ಪತ್ತೆ! – ಗೂಢಚಾರಿಕೆ ನಡೆಸುತ್ತಿದ್ಯಾ ಡ್ರ್ಯಾಗನ್‌ ರಾಷ್ಟ್ರ?

ಕರ್ನಾಟಕದ ಕರಾವಳಿ ಗಡಿಯಲ್ಲಿ ಚೀನಾದ ಬೋಟ್‌ ಒಂದು ಪತ್ತೆಯಾಗಿದೆ. ಇದೀಗ ಕಾರವಾರ ಸೀಬರ್ಡ್ ನೌಕಾನೆಲೆಯ ಬಗ್ಗೆ ಗೂಢಚಾರಿಕೆ ನಡೆಸುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪಡೆಯ ಪೊಲೀಸರು ಹೈಅಲರ್ಟ್‌ ಆಗಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮಧ್ಯೆ ಸೆಂಚೂರಿ ರೇಸ್ – ಕ್ರಿಕೆಟ್ ದಿಗ್ಗಜರಲ್ಲಿ ಗೆಲ್ಲೋದು ಯಾರು?

ಕುಮಟಾ ಬಳಿಯ ಆಳ ಸಮುದ್ರದಲ್ಲಿ ಗುರುವಾರ ಚೀನಾ ಬೋಟ್ ಪತ್ತೆಯಾಗಿದೆ. ಕುಮಟಾದಿಂದ ತೆರಳಿದ್ದ ಮೀನುಗಾರರು ಚೀನಾದ ಬೋಟ್‌ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಕುಮಟಾದಿಂದ ಹೊರಟ ಮೀನುಗಾರಿಕಾ ಬೋಟ್ ಸಿಬಂದಿಯೋರ್ವರು ವಿಡಿಯೋ ರೆಕಾರ್ಡ್ ಮಾಡಿ ಪೊಲೀಸರಿಗೆ ಕಳುಹಿಸಿದ್ದಾರೆ. ಇದೀಗ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಪೊಲೀಸ್ ಪಡೆಯಿಂದ ತನಿಖೆ ನಡೆಯುತ್ತಿದ್ದು, ಕಾರವಾರ ಸೀಬರ್ಡ್ ನೌಕಾನೆಲೆಯ ಬಗ್ಗೆ ಗೂಢಚಾರಿಕೆ ನಡೆಸುತ್ತಿರುವ ಅನುಮಾನ ವ್ಯಕ್ತವಾಗಿದೆ.

ಚೀನಾದ ಫುಝುವಾ ಬಂದರಿನಲ್ಲಿ ನೋಂದಣಿಯಾಗಿರುವ ಬೋಟ್ ಇದಾಗಿದ್ದು, ಕರಾವಳಿ ಪೊಲೀಸ್ ಪಡೆಯ ಕುಮಟಾ ಠಾಣೆ ಇನ್ಸ್ ಪೆಕ್ಟರ್ ವಿಕ್ಟರ್ ನೈಮನ್ ತನಿಖೆ ಕೈಗೊಂಡಿದ್ದಾರೆ.

Shwetha M