ಅಪೌಷ್ಠಿಕತೆಯಿಂದ ನರಳಿ ನರಳಿ ಪ್ರಾಣಬಿಟ್ಟ ಮಗು..!- ಈ ಶಾಪದಿಂದ ಬಡವರಿಗೆ ಮುಕ್ತಿ ಯಾವಾಗ?
ನಮ್ಮ ದೇಶ ಅಭಿವೃದ್ಧಿಯಲ್ಲಿ ಮುಂದಿದೆ. ಶಿಕ್ಷಣದಲ್ಲೂ ಮುಂದಿದೆ. ಆದರೂ ಅಪೌಷ್ಠಿಕತೆಯಿಂದ ಇನ್ನೂ ಮುಕ್ತವಾಗಿಲ್ಲ ಅಂದರೆ ನಂಬಲೇಬೇಕು. ಈಗಲೂ ಅಪೌಷ್ಠಿಕತೆಯಿಂದ ಬಡ ಮಕ್ಕಳು ನರಳುತ್ತಿದ್ದಾರೆ. ಅಪೌಷ್ಠಿಕತೆಯಿಂದ ಬಡ ಮಕ್ಕಳು ಸಾವಿಗೀಡಾಗುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಮಗು ಸಾವಿಗೀಡಾಗಿರುವ ಪ್ರಕರಣ ಒಡಿಶಾದ ಜಾಜ್ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಾಜ್ಪುರ ಜಿಲ್ಲೆಯ ದನಗಡಿ ಬ್ಲಾಕ್‌ನ ರಣಗುಂಡಿ ಪಂಚಾಯತ್‌ನ ಘಾಟಿಶಾಹಿ ಗ್ರಾಮದ ಮನೆಯೊಂದರಲ್ಲಿ ಅಪೌಷ್ಟಿಕತೆಯಿಂದ ಮಗುವೊಂದು ಮೃತಪಟ್ಟಿದೆ. ದುರಂತವೆಂದರೆ, ಇನ್ನೊಂದು ಮಗುವಿನ ಆರೋಗ್ಯ ಸ್ಥಿತಿಯೂ ಹದಗೆಟ್ಟಿದೆ.
ಇದನ್ನೂ ಓದಿ: ಚುನಾವಣಾ ಹೊಸ್ತಿಲಲ್ಲೇ ಮೀಸಲಾತಿ ಗಿಫ್ಟ್ ಕೊಟ್ಟ ಸರ್ಕಾರ – ವರ್ಕೌಟ್ ಆಗುತ್ತಾ ಜಾತಿ ಲೆಕ್ಕಾಚಾರ..?
ಘಾಟಿಶಾಹಿ ಗ್ರಾಮದ ನಿವಾಸಿ ಬಂಕು ಹೆಂಬ್ರಾಮ್ ತನ್ನ ಪತ್ನಿ ತುಳಸಿ ಹೆಂಬ್ರಾಮ್ ಮತ್ತು ಒಂಬತ್ತು ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇವರ ಇಬ್ಬರು ಪುತ್ರರಲ್ಲಿ ಒಬ್ಬ ಅಪೌಷ್ಟಿಕತೆಯಿಂದ ಕೆಲವು ದಿನಗಳ ಹಿಂದೆ ಸಾವಿಗೀಡಾಗಿದ್ದ. ಇದೀಗ ಅವರ ಮಗಳ ಸ್ಥಿತಿ ಗಂಭೀರವಾಗಿದೆ. ಇದಲ್ಲದೇ ಬಂಕುವಿನ ಇತರ ಮಕ್ಕಳಲ್ಲಿಯೂ ಅಪೌಷ್ಟಿಕತೆ ಕಾಡುತ್ತಿದೆ. ಅಸಹಾಯಕ ಕುಟುಂಬ ನೆರವಿಗಾಗಿ ಮನೆ ಮನೆಗೆ ಅಲೆದಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ದಿನಗೂಲಿ ಕಾರ್ಮಿಕ ಬಂಕು ಪಡಿತರ ಚೀಟಿ ಹೊಂದಿದ್ದರೂ ಪಡಿತರದಿಂದ ವಂಚಿತರಾಗಿದ್ದಾರೆ. ನೀರು, ಅನ್ನ, ಉಪ್ಪನ್ನು ತಿಂದು ಕುಟುಂಬ ಬದುಕುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮಾಧ್ಯಮಗಳಿಂದ ಈ ಸುದ್ದಿಯ ಬಗ್ಗೆ ಮಾಹಿತಿ ಪಡೆದ ನಂತರ, ಡಿಸಿಪಿಒ ತಮ್ಮ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿರುವರನ್ನು ಸುಕಿಂದಾಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರವಿದೆ. ಜಾಜ್ಪುರದ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ, ಶಿವಶಿಶ್ ಮಹಾರಾಣಾ ಸೇರಿದಂತೆ ವೈದ್ಯರು ಇವರನ್ನು ಪರೀಕ್ಷಿಸಿದ್ದು, ಸೂಕ್ತ ವ್ಯವಸ್ಥೆಗಳನ್ನು ನೀಡುತ್ತಿದ್ದಾರೆ.