ಅಮೆರಿಕಕ್ಕೆ ವೀಸಾ ಇಲ್ಲದೆ ಹೋಗಲು ಅವಕಾಶ! – ಷರತ್ತು ಅನ್ವಯ!

ಅಮೆರಿಕಕ್ಕೆ ವೀಸಾ ಇಲ್ಲದೆ ಹೋಗಲು ಅವಕಾಶ! – ಷರತ್ತು ಅನ್ವಯ!

ಯುಎಸ್​ ಡಿಪಾರ್ಟ್​ಮೆಂಟ್ ಆಫ್ ಹೋಮ್​ಲ್ಯಾಂಡ್ ಸೆಕ್ಯುರಿಟಿ ಹೊಸ ಘೋಷಣೆಯೊಂದನ್ನು ಮಾಡಿದೆ. ಇನ್ನುಮುಂದೆ ಅಮೆರಿಕಕ್ಕೆ ವೀಸಾ ಇಲ್ಲದೆಯೇ ಹೋಗಬಹುದು. ಆದರೆ ಈ ಹೊಸ ರೂಲ್ಸ್‌ ಭಾರತೀಯರಿಗಲ್ಲ. ಬದಲಾಗಿ ಈ ದೇಶದ ಜನರಿಗೆ!

ಅಮೆರಿಕಕ್ಕೆ ವೀಸಾ ಇಲ್ಲದೆಯೇ ಬರಲು ಡಿಎಚ್​​ಎಸ್ ಅವಕಾಶ ನೀಡಿದೆ. ಮೂರು ತಿಂಗಳ ಅವಧಿಗೆ ಅನ್ವಯಿಸುವಂತೆ ಇಂಥದ್ದೊಂದು ಘೋಷಣೆಯನ್ನು ಮಾಡಿದೆ. ಈ ಹೊಸ ನಿಯಮ ಜಾರಿಗೆ ತಂದಿರುವುದು ಹಮಾಸ್ ಉಗ್ರರ ದಾಳಿಯಿಂದ ತತ್ತರಿಸಿರುವ ಇಸ್ರೇಲ್​ನ ಅರ್ಹ ಪ್ರಜೆಗಳಿಗೆ. ತನ್ನ ವೀಸಾ ಮನ್ನಾ ಕಾರ್ಯಕ್ರಮದ ಅಂಗವಾಗಿ ಡಿಎಚ್​ಎಸ್ ಈ ಘೋಷಣೆಯನ್ನು ಮಾಡಿರುವುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: 1 ಸಾವಿರ ರೂಪಾಯಿ ಮುಖಬೆಲೆಯ ನೋಟು ಮತ್ತೆ ಬರುತ್ತಾ? – ಆರ್​ಬಿಐ ಗವರ್ನರ್ ಹೇಳಿದ್ದೇನು?

ನ. 30ರಿಂದ ಆರಂಭವಾಗುವಂತೆ ಈ ಅವಕಾಶವನ್ನು ನೀಡಲಾಗಿದೆ. ಕಳೆದ ತಿಂಗಳು ಯುಎಸ್ ಅಧ್ಯಕ್ಷ ಜೋ ಬೈಡೆನ್​ ವೀಸಾ ಮನ್ನಾ ಕಾರ್ಯಕ್ರಮದಲ್ಲಿ ಇಸ್ರೇಲ್​ ದೇಶವನ್ನೂ ಒಳಗೊಳ್ಳುವಂತೆ ಮಾಡುವುದಾಗಿ ಭರವಸೆ ನೀಡಿದ್ದ ಬೆನ್ನಿಗೇ ಈ ಘೋಷಣೆ ಹೊರಬಿದ್ದಿದೆ.

ಯುಎಸ್​ ಕಸ್ಟಮ್ಸ್ ಆ್ಯಂಡ್ ಬಾರ್ಡರ್​ ಪ್ರೊಟೆಕ್ಷನ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್​ ಫಾರ್ ಟ್ರಾವೆಲ್ ಆಥರೈಸೇಷನ್​ ಮೂಲಕ ಆನ್​ಲೈನ್​ನಲ್ಲಿ ಪರಿಶೀಲನೆಗೆ ಒಳಪಡಿಸಿ ನೋಂದಣಿ ಮಾಡಿಕೊಳ್ಳುವಂತೆಯೂ ಸೂಚಿಸಲಾಗಿದೆ. ಬಯೋಮೆಟ್ರಿಕಲಿ ಎನೇಬ್ಲ್ಡ್ ಪಾಸ್​ಪೋರ್ಟ್ ಮತ್ತು 90 ದಿನಗಳ ತಂಗುವಿಕೆ ಕುರಿತ ಯೋಜನೆಗಳ ವಿವರ ನೀಡಿದವರು ಇದಕ್ಕೆ ಅರ್ಹರಾಗುತ್ತಾರೆ ಎಂದೂ ತಿಳಿಸಲಾಗಿದೆ.

Shwetha M