ರೈಲು ಪ್ರಯಾಣಿಕರೇ ನಿಮ್ಮ ಸರ ಜೋಪಾನ – ಚಲಿಸುತ್ತಿದ್ದ ರೈಲಿನಲ್ಲಿ ಕೊರಳಲ್ಲಿದ್ದ ಸರ ಕಿತ್ತು ಪರಾರಿ!

ರೈಲು ಪ್ರಯಾಣಿಕರೇ ನಿಮ್ಮ ಸರ ಜೋಪಾನ – ಚಲಿಸುತ್ತಿದ್ದ ರೈಲಿನಲ್ಲಿ ಕೊರಳಲ್ಲಿದ್ದ ಸರ ಕಿತ್ತು ಪರಾರಿ!

ರೈಲು ಪ್ರಯಾಣಿಕರೇ ನಿಮ್ಮ ವಸ್ತುಗಳು ಜೋಪಾನ. ಇಲ್ಲದಿದ್ದರೆ ನಮ್ಮ ವಸ್ತುಗಳ ಕಳ್ಳರ ಪಾಲಾಗುತ್ತದೆ.  ಚೆನ್ನೈನಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಇಲ್ಲೊಬ್ಬ ಖತರ್ನಾಕ್‌ ಕಳ್ಳ ರೈಲಿನಲ್ಲಿ ತನ್ನ ಕೈಚಳಕ ತೋರಿಸಿದ್ದಾನೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಹಲವು ರಾಜ್ಯಗಳಲ್ಲಿ ಮುಂದುವರಿದ ಪ್ರವಾಹ ಸ್ಥಿತಿ – ರಾಂಬಾನ್ ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ರಜೆ ಘೋಷಣೆ

ಚೆನ್ನೈನ ತಿರುಮುಳ್ಳೆವಾಯಲ್ ಪ್ರದೇಶದ ವಲರ್ಮತಿ (43) ಎಂಬ ಮಹಿಳೆ ಲೋಕಲ್‌ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿದ್ದಾನೆ. ಮಹಿಳೆಯ ಕೊರಳಿನಲ್ಲಿದ್ದ ಸರವನ್ನು ಕದ್ದಿದ್ದಾನೆ. ಬಳಿಕ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಕ್ಷಣಾರ್ಧದಲ್ಲಿ ಎಸ್ಕೇಪ್‌ ಆಗಿದ್ದಾನೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಚೆನ್ನೈನ ತಿರುಮುಲೇವಾಯಲ್ ಪ್ರದೇಶದ ವಲರ್ಮತಿ ಅವರು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ತವ್ಯವನ್ನು ಮುಗಿಸಿ.. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ, ರೈಲಿನಲ್ಲಿ ತಿರುವಳ್ಳೂರ್‌ಗೆ ಮರಳಿದರು. ಬೆಸಿನಾ ಸೇತುವೆ ನಿಲ್ದಾಣದಲ್ಲಿ ರೈಲು ನಿಂತಿತ್ತು. ರೈಲು ನಿಲ್ದಾಣದಿಂದ ನಿಧಾನವಾಗಿ ಚಲಿಸುತ್ತಿದ್ದಾಗ ವಲರ್ಮತಿ ಅವರ ಹಿಂದೆ ನಿಂತಿದ್ದ ಯುವಕ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ಚಲಿಸುತ್ತಿದ್ದ ರೈಲಿನಿಂದ ಹಾರಿ ಓಡಿ ಹೋಗಿದ್ದಾನೆ.

ವಲರ್ಮತಿ ಅವರು ಕೂಡಲೇ ಹತ್ತಿರ ಪೊಲೀಸ್‌ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ, ಕಳ್ಳತನದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲು ಪೊಲೀಸರು ಯತ್ನಿಸುತ್ತಿದ್ದಾರೆ.

suddiyaana