ತಾಯಿಯ ಪ್ರೀತಿಗೆ ಸರಿಸಾಟಿ ಉಂಟೆ..? – ಬೆಕ್ಕಿನ ಅಪ್ಪುಗೆಯಲ್ಲಿ ಅಮ್ಮನ ಮಡಿಲು ಕಂಡ ಕೋತಿ ಮರಿ
ಜಗತ್ತಿನ ಪ್ರತಿಯೊಂದು ಜೀವಿಯೂ ಹೆಚ್ಚಾಗಿ ಪರಾವಲಂಬಿಗಳು. ಮನುಷ್ಯರಲ್ಲಿ ತಾಯಿ ಮಗುವಿನ ಸಂಬಂಧ ಹೇಗೋ ಪ್ರಾಣಿ ಪಕ್ಷಿ ಕೀಟ ಗಳಲ್ಲಿಯೂ ವಿಶೇಷವಾದ ರೀತಿಯಲ್ಲಿರುತ್ತದೆ. ಈಗ ನಾನು ನನ್ನ ಮಗುನ ಚೆನ್ನಾಗಿ ನೋಡಿಕೊಂಡರೆ, ಮುಂದೆ ಅವನು ನನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಎಷ್ಟೋ ತಾಯಂದಿರು ಅಂದುಕೊಳ್ಳುತ್ತಾರೆ. ಆದರೆ ಯಾವ ಪ್ರಾಣಿಯೂ, ತನ್ನ ಮರಿ ತನ್ನನ್ನು ನೋಡಿಕೊಳ್ಳಲಿ ಎಂದು ಬಯಸುವುದೇ ಇಲ್ಲ. ತಾಯಿಯ ಪ್ರೀತಿಯಂತೆ ಶುದ್ಧವಾದದ್ದು ಏನಾದರೂ ಜಗತ್ತಿನಲ್ಲಿ ಇದೆಯೇ? ಖಂಡಿತಾ ಇಲ್ಲ..! ಪ್ರಾಣಿ ಸಾಮ್ರಾಜ್ಯದ ತಾಯಂದಿರು ಇದಕ್ಕೆ ಹೊರತಾಗಿಲ್ಲ. ‘ತಾಯಿ’ ಎನ್ನುವ ಪದಕ್ಕೆ ಮನುಷ್ಯರಿಗಿಂತ ಜಾಸ್ತಿ ಪ್ರಾಣಿಗಳೆ ಅರ್ಥ ತುಂಬುತ್ತವೆ ಎಂದು ಹೇಳುವುದಕ್ಕೆ ವೈರಲ್ ಆದ ವಿಡಿಯೋ.
ಇದನ್ನೂ ಓದಿ: ಸಹೋದ್ಯೋಗಿಯ ಮೇಲಿನ ಅತಿ ವ್ಯಾಮೋಹವೇ ನಾಲ್ಕು ಕೊಲೆಗೆ ಕಾರಣ – ಮನೆಯಲ್ಲಿ ಹೆಂಡತಿಯಿದ್ದರೂ ಬೇರೆ ಹೆಣ್ಣಿನ ಮೇಲೆ ಕಟುಕನಿಗೆ ಮೋಹ..!
ಪ್ರಾಣಿಗಳು ವಿಭಿನ್ನ ಜಾತಿಯ ಪ್ರಾಣಿಗಳೊಂದಿಗೆ ಹೊಂದಿಕೊಳ್ಳುವುದು ತೀರಾ ವಿರಳ. ಬೇರೆ ಪ್ರಾಣಿಗಳನ್ನು ಕಂಡಾಗ ಅವುಗಳ ಮೇಲೆ ದಾಳಿ ಮಾಡುವುದೇ ಹೆಚ್ಚು. ಅವುಗಳು ತಮ್ಮ ಹತ್ತಿರಕ್ಕೆ ಬರಲು ಕೂಡ ಬಿಡುವುದಿಲ್ಲ. ಒಂದೇ ಮನೆಯಲ್ಲಿ ಸಾಕಿದ ನಾಯಿ ಬೆಕ್ಕುಗಳು ಶತ್ರುಗಳಂತೆ ಕಿತ್ತಾಡುವುದನ್ನು ನಾವು ನೋಡಿರುತ್ತೇವೆ. ಕೋತಿಗಳು ಕೂಡಾ ನಾಯಿ, ಬೆಕ್ಕು ಸೇರಿದಂತೆ ಇತರ ಪ್ರಾಣಿಗಳಿಗೆ ತರ್ಲೆ ಮಾಡುತ್ತಿರುತ್ತವೆ. ಹೀಗೆ ಎಲ್ಲಾ ಪ್ರಾಣಿಗಳು ಒಂದಕ್ಕೊಂದು ಹೊಂದಿಕೊಳ್ಳುವುದಕ್ಕಿಂತ ಜಗಳವಾಡುವಂತಹದ್ದು ಅಥವಾ ಪರಸ್ಪರ ದಾಳಿ ಮಾಡುವಂತಹದ್ದೇ ಹೆಚ್ಚು. ಹೀಗಿದ್ದರೂ ಕೆಲವೊಮ್ಮೆ ಈ ಪ್ರಾಣಿಗಳ ನಡುವೆ ಒಂದೊಳ್ಳೆ ಸ್ನೇಹ ಭಾಂದವ್ಯ ಅನ್ನೊದು ಇರುತ್ತೆ. ಅವುಗಳು ಕೆಲವೊಂದು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋ ಭಾರಿ ವೈರಲ್ ಆಗುತ್ತಿದೆ. ತಾಯಿಯಿಂದ ಬೇರ್ಪಟ್ಟ ಕೋತಿ ಮರಿಯನ್ನು ಬೆಕ್ಕೊಂದು ತನ್ನದೇ ಮರಿ ಎಂದು ಭಾವಿಸಿ ಪ್ರೀತಿಯಿಂದ ಸಾಕುತ್ತಿದೆ. ಆ ಪುಟ್ಟ ಕೋತಿ ಮರಿಯನ್ನು ಆ ಬೆಕ್ಕು ತನ್ನ ಮಡಿಲಿನಲ್ಲಿ ಹೊತ್ತಿಕೊಂಡು ತಿರುಗಿದೆ. ಮುಗ್ಧ ಪ್ರಾಣಿಗಳ ಈ ನಿಷ್ಕಲ್ಮಷ ಪ್ರೀತಿಗೆ ಭಾರಿ ಮೆಚ್ಚುಗೆ ದೊರಕಿದೆ.
ಈ ವಿಡಿಯೋವನ್ನು Nature is Amazing ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬಿಳಿ ಮತ್ತು ಕಪ್ಪು ಮಿಶ್ರಿತ ಬಣ್ಣದ ಬೆಕ್ಕೊಂದು, ಮಾನವೀಯ ದೃಷ್ಟಿಯಿಂದ ತಾಯಿಯಿಂದ ಬೇರ್ಪಟ್ಟಿರುವ ಪುಟ್ಟ ಕೋತಿಮರಿಯನ್ನು ತನ್ನ ಸ್ವಂತ ಮಗುವಿನಂತೆಯೇ ಮಡಿಲಿನಲ್ಲಿ ಹೊತ್ತುಕೊಂಡು ತಿರುಗಿದೆ. ಆ ಕೋತಿ ಮರಿ ಬೆಕ್ಕನ್ನೇ ತನ್ನ ತಾಯಿಯೆಂದು ಭಾವಿಸಿ ಬೆಕ್ಕನ್ನು ಗಟ್ಟಿಯಗಿ ತಬ್ಬಿಕೊಂಡಿರುವುದನ್ನು ಕಾಣಬಹುದು. ಈ ಎರಡು ಪ್ರಾಣಿಗಳ ಸುಂದರ ಬಾಂಧವ್ಯದ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ದೊರಕಿದೆ.
This lost baby monkey was adopted by this cat. ❤️ pic.twitter.com/V7b3TbFEU5
— Nature is Amazing ☘️ (@AMAZlNGNATURE) November 22, 2023