ಟೊಮ್ಯಾಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ – ಚಾಲಾಕಿ ಕಳ್ಳರು ಸಿಕ್ಕಿ ಬಿದ್ದಿದ್ದು ಹೇಗೆ?
ಬೆಂಗಳೂರು: ದೇಶದಾದ್ಯಂತ ಟೊಮ್ಯಾಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಡುಗೆ ಮನೆಯ ಕೆಂಪು ಸುಂದರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ದಿನನಿತ್ಯ ಚಿನ್ನದ ಬೆಲೆ ಏರಿದಂತೆ ಟೊಮ್ಯಾಟೊ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಟೊಮ್ಯಾಟೊ ಬೆಲೆ ಶತಕ, ದ್ವಿಶತಕ ದಾಟಿದೆ. ದರ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಅದೆಷ್ಟೋ ಕಡೆಗಳಲ್ಲಿ ಹಾಡಹಗಲೇ ಟೊಮ್ಯಾಟೊ ಕಳ್ಳತನವಾಗುತ್ತಿದೆ. ಅಡುಗೆ ಮನೆಯ ಕೆಂಪು ಸುಂದರಿಯನ್ನು ಕಾಪಾಡಲು ವ್ಯಾಪಾರಸ್ಥರು ಸಿಸಿಟಿವಿ, ಬೌನ್ಸರ್‌ಗಳ ಮೊರೆ ಹೋಗಿದ್ದಾರೆ. ಬೆಂಗಳೂರಿನಲ್ಲೊಂದು ಟೊಮ್ಯಾಟೊ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಈ ಖತರ್ನಾಕ್ ಖದೀಮರು ಟೊಮ್ಯಾಟೊ ತುಂಬಿದ್ದ ಬೊಲೆರೋ ವಾಹನವನ್ನು ಬೆಂಗಳೂರಿನಲ್ಲಿ ಕದ್ದು ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದಾರೆ!
ಇದನ್ನೂ ಓದಿ: ಮಣಿಪುರ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ – ಮಹಿಳೆಯರ ಅರೆಬೆತ್ತಲೆ ಮೆರವಣಿಗೆ
ಟೊಮ್ಯಾಟೊ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆರೋಪಿಗಳ ಪತ್ತೆಗೆ ಸುಮಾರು 11 ದಿನಗಳ ಕಾಲ ಬಲೆಬೀಸಿದ್ದರು. ಕೊನೆಗೂ ಪೊಲೀಸರು ಟೊಮ್ಯಾಟೊ ತುಂಬಿದ್ದ ಬೊಲೆರೋ ವಾಹನ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಆರ್‍ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರಲ್ಲಿ ವಾಹನವನ್ನು ಕದ್ದು ಬಳಿಕ ಟೊಮ್ಯಾಟೊವನ್ನು ಚೆನ್ನೈಗೆ ಸಾಗಿಸಿ ಮಾರಾಟ ಮಾಡಿದ್ದಾರೆ. ಬಳಿಕ ಖಾಲಿ ವಾಹನವನ್ನು ಪೀಣ್ಯ ಬಳಿ ನಿಲ್ಲಿಸಿ ಪರಾರಿಯಾಗಿದ್ದರು. ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೇ ತಿಂಗಳ 10 ರಂದು ರೈತರು ಚಿತ್ರದುರ್ಗದಿಂದ ಆರ್‍ಎಂಸಿ ಯಾರ್ಡ್‍ಗೆ ಟೊಮ್ಯಾಟೊ ಲೋಡ್ ಅನ್ನು ತಂದಿದ್ದರು. ರೈತರು ಯಾವಾಗ ವಾಹನವನ್ನು ನಿಲ್ಲಿಸಿ, ಟೀ ಕುಡಿಯಲು ಹೋಗಿದ್ದಾರೋ ಆಗ ಬಂದ ಕಳ್ಳರು ವಾಹನ ಸಮೇತವಾಗಿ 2 ಟನ್ ಟೊಮ್ಯಾಟೊ ಹೊತ್ತೊಯ್ದಿದ್ದರು.
ಕಾರಿನಲ್ಲಿ ಬಂದಿದ್ದ ಮೂವರು ವಾಹನವನ್ನು ಹೈಜಾಕ್ ಮಾಡಿದ್ದರು. ಟೊಮ್ಯಾಟೊ ತುಂಬಿದ್ದ ಗಾಡಿ ಫಾಲೋ ಮಾಡಿ ಬಂದ ಆರೋಪಿಗಳು, ಆರ್‍ಎಂಸಿ ಯಾರ್ಡ್ ಬಳಿ ಅಡ್ಡ ಹಾಕಿ ರೈತನಿಗೆ ಅವಾಜ್ ಹಾಕಿದ್ದರು. ಗಾಡಿ ಟಚ್ ಆಗಿದೆ ಎಂದು ನಾಟಕ ಮಾಡಿ ಡ್ರೈವರ್‍ಗೆ ಥಳಿಸಿದ್ದು, ನಂತರ ರೈತನ ಮೇಲೂ ಹಲ್ಲೆ ಮಾಡಿ ಹಣ ಕೊಡು ಬೆದರಿಸಿದ್ದರು. ಬಳಿಕ ಆನ್‍ಲೈನ್ ಮೂಲಕ ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಾಹನವನ್ನು ಕದ್ದೊಯ್ದಿದ್ದರು.