ಡೇ ಕೇರ್‌ನಲ್ಲಿ ಮಗುವಿನ ಮೇಲೆ ಹಲ್ಲೆ ಪ್ರಕರಣ – ಶಿಕ್ಷಣ ಇಲಾಖೆ ತನಿಖೆ ನಡೆಸುವಂತೆ ಪೊಲೀಸರ ಸೂಚನೆ

ಡೇ ಕೇರ್‌ನಲ್ಲಿ ಮಗುವಿನ ಮೇಲೆ ಹಲ್ಲೆ ಪ್ರಕರಣ – ಶಿಕ್ಷಣ ಇಲಾಖೆ ತನಿಖೆ ನಡೆಸುವಂತೆ ಪೊಲೀಸರ ಸೂಚನೆ

ಬೆಂಗಳೂರು: ಚಿಕ್ಕಲಸಂದ್ರದಲ್ಲಿನ ಡೇ ಕೇರ್ ಸೆಂಟರ್‌ವೊಂದರಲ್ಲಿ 2 ವರ್ಷದ ಹೆಣ್ಣು ಮಗುವಿನ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆ ಎಲ್ಲಾ ಪೋಷಕರನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ  ಶಿಕ್ಷಣ ಇಲಾಖೆಗೆ ಪೊಲೀಸರು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆ ಬಳಿಕ ಮಗುವಿನ ಪೋಷಕರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಲು ಪೋಷಕರು ನಿರಾಕರಿಸಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆಯನ್ನ ಸಂಪರ್ಕಿಸಿ, ತನಿಖೆ ನಡೆಸುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೆಟ್ರೋದೊಳಗೆ ಜೋರಾಗಿ ಸಂಗೀತ ಕೇಳಿದ್ರೆ ಹುಷಾರ್! – ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕಠಿಣ ಕ್ರಮ?  

ಇಬ್ಬಿಬ್ಬರು ಮಕ್ಕಳನ್ನು ಶೌಚಾಲಯಕ್ಕೆ ಕರೆದೊಯ್ಯಬೇಕಾಗಿದ್ದ ಕಾರಣ ಅಟೆಂಡರ್ ಮಕ್ಕಳನ್ನು ಕೆಲವು ನಿಮಿಷಗಳ ಕಾಲ ಒಂಟಿಯಾಗಿ ಬಿಟ್ಟಿದ್ದರು. ಇತರ ಅಟೆಂಡೆಂಟ್‌ಗಳು ಕಾರ್ಯನಿರತರಾಗಿದ್ದರು. ಕೆಲವರು ಅನಾರೋಗ್ಯ ನಿಮಿತ್ತ ರಜೆ ಪಡೆದುಕೊಂಡಿದ್ದರು. ಹೀಗಾಗಿ ಪೋಷಕರು ದೂರು ನೀಡದಿರಲು ನಿರ್ಧರಿಸಿದ್ದರು. ಹೀಗಾಗಿ ಪ್ರಕರಣ ತನಿಖೆಯನ್ನು ಪೊಲೀಸ್ ಇಲಾಖೆ ನಡೆಸುತ್ತಿಲ್ಲ. ಶಾಲಾ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬುದನ್ನು ತಿಳಿಯಲು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಲಾಗಿದೆ. ಘಟನೆಯ ಬಗ್ಗೆ ಶಿಕ್ಷಣ ಇಲಾಖೆಯೇ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.

ಉತ್ತರಹಳ್ಳಿ ಸಮೀಪದ ಚಿಕ್ಕಲ್ಲಸಂದ್ರದಲ್ಲಿ ಇರುವ ಟೆಂಡರ್ ಫೂಟ್ ಎಂಬ ಡೇ ಕೇರ್ ಸೆಂಟರ್ ನಲ್ಲಿ 2 ವರ್ಷದ ಮಗುವಿನ ಮೇಲೆ 3 ವರ್ಷದ ಮಗುವೊಂದು ಹಲ್ಲೆ ನಡೆಸಿ, ಗಾಯಗೊಳಿಸಿತ್ತು. ಮಗು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪೋಷಕರು ಮಗುವಿನ ಕೈಯಲ್ಲಿ ಕಚ್ಚಿದ ಗುರುತುಗಳು ಮತ್ತು ಮೂಗೇಟುಗಳಿರುವುದನ್ನು ಗಮನಿಸಿದ್ದಾರೆ. ಕೂಡಲೇ ಶಾಲೆಯ ಬಳಿ ಬಂದು ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದು, ಕೂಡಲೇ ಡೇ ಕೇರ್ ಸೆಂಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

suddiyaana