ಕಣ್ಣಾ ಮುಚ್ಚೆ ಕಾಡೆ ಗೂಡೆ.. – ಯುವಕನ ಜೊತೆ ಆನೆ ಮರಿ ಕಣ್ಣಾ ಮುಚ್ಚಾಲೆ ಆಟ!

ಪ್ರಾಣಿಗಳ ಮರಿಗಳ ವಿಡಿಯೋ ನೋಡುವುದಕ್ಕೇ ಚೆಂದ.. ಜಗತ್ತನ್ನು ಈಗಷ್ಟೇ ಕಾಣುವ ಸಂಭ್ರಮದಲ್ಲಿರುವ ಈ ಪುಟಾಣಿ ಮರಿಗಳು ತಮ್ಮದೇ ಸ್ವಚ್ಛಂದ ಲೋಕದಲ್ಲಿ ತೇಲಾಡುತ್ತಿರುತ್ತವೆ. ಅದರಲ್ಲೂ ಆನೆ ಮರಿಗಳು ಆಟವಾಡುತ್ತಿರುವ ದೃಶ್ಯಗಳು ಖಂಡಿತಾ ಮನಸ್ಸಿಗೆ ಮುದ ನೀಡುತ್ತವೆ. ಇದೀಗ ಇಲ್ಲೊಂದು ಆನೆ ಮರಿ ಯುವಕನ ಜೊತೆ ಕಣ್ಣಾಮುಚ್ಚಾಲೆ ಆಟ ಆಡಿದೆ. ಇದ್ರ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಆರೋಗ್ಯ ವೃದ್ಧಿಗೆ ಈ ಹಣ್ಣು ಬೆಸ್ಟ್! – ಕಿವಿ ಹಣ್ಣಿನಿಂದ ಎಷ್ಟೊಂದು ಆರೋಗ್ಯ ಲಾಭ!
ಮರಿಯಾನೆಗಳ ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ. ಇದೀಗ ಪುಟಾಣಿ ಆನೆಯ ಜತೆಗೆ ಯುವಕನೊಬ್ಬನ ತರಲೆಯ ವಿಡಿಯೋ ವೈರಲ್ ಆಗಿದೆ. ಈ ಯುವಕನ ತುಂಟಾಟಕ್ಕೆ ಮರಿಯಾನೆ ಭಯಗೊಂಡಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಸರ್ ಬಾ (Hsar Ba) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಕೇರ್ ಟೇಕರ್ ಮರಿಯಾನೆ ಜತೆಗೆ ತುಂಟಾಟ ಆಡಿದ್ದಾನೆ. ಹುಲ್ಲಿನ ಪೊದೆಯೊಳಗೆ ಅಡಗಿ ಕುಳಿತು ಈ ಪುಟಾಣಿ ಆನೆಯನ್ನು ಹೆದರಿಸಿದ್ದಾನೆ. ಈ ಯುವಕನ ತುಂಟಾಟಕ್ಕೆ ಬೆಚ್ಚಿ ಬಿದ್ದಿದ್ದು, ಹೆದರಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ಎಂದರೆ, ಮತ್ತೊಬ್ಬರು, ಪಾಪ ಹೆದರಿ ಬಿಟ್ಟಿತು ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಮತ್ತೆ ಮತ್ತೆ ನೋಡಬೇಕೇನಿಸುವ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ನೋಡಿರಿ

