ಚಿಪ್ಸ್ ಮಾರಿ ₹4,000 ಕೋಟಿ ಸಂಪಾದಿಸಿದ ಉದ್ಯಮಿ! – ಬಡವನಾಗಿ ಹುಟ್ಟಿ ಬಿಲಿಯನೇರ್ ಆಗಿದ್ದೇಗೆ ಗೊತ್ತಾ?

ಚಿಪ್ಸ್ ಮಾರಿ ₹4,000 ಕೋಟಿ ಸಂಪಾದಿಸಿದ ಉದ್ಯಮಿ! – ಬಡವನಾಗಿ ಹುಟ್ಟಿ ಬಿಲಿಯನೇರ್ ಆಗಿದ್ದೇಗೆ ಗೊತ್ತಾ?

ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ, ಬಡವನಾಗಿ ಸಾಯುವುದು ತಪ್ಪು ಅನ್ನೋ ಮಾತಿದೆ. ಹೀಗೆ ಹಲವರು ಕಡುಬಡತನದಲ್ಲೇ ಹುಟ್ಟಿ ಬಳಿಕ ಸಾವಿರಾರು ಕೋಟಿ ಸಂಪಾದನೆ ಮಾಡಿದ್ದಾರೆ. ಅಂಥವರಲ್ಲಿ ಚಂದುಭಾಯಿ ವಿರಾನಿ ಕೂಡ ಒಬ್ಬರು. ಯಾರು ಈ ಚಂದುಭಾಯಿ ಎಂಬ ಬಗ್ಗೆ ವರದಿ ಇಲ್ಲಿದೆ.

ಇದನ್ನೂ ಓದಿ: ನೀವು ಬಳಸುವ ಅಡುಗೆ ಎಣ್ಣೆ ಬಗ್ಗೆ ಎಚ್ಚರ! – ಜಾಹೀರಾತಿಗೆ ಮಾರು ಹೋದರೆ ಕಾದಿದೆ ಅಪಾಯ – ನಿಮಗಾಗಿ ಇಲ್ಲಿದೆ ವಿಸ್ತ್ರತ ಮಾಹಿತಿ..!

ಮನೆಯಲ್ಲಿ ಬಡತನದ ಕಾರಣ 10ನೇ ಕ್ಲಾಸ್​ಗೆ ಓದುವುದನ್ನು ನಿಲ್ಲಿಸಿದ್ದರು ಚಂದುಭಾಯಿ ವಿರಾನಿ. ಗುಜರಾತ್ ಮೂಲದ ಚಂದುಬಾಯಿ ಆರಂಭದ ದಿನಗಳಲ್ಲಿ ಕೃಷಿ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳ ಮಾರಾಟ ಮಾಡುತ್ತಿದ್ದರು. ಆದರೆ ಯಾಕೋ ವ್ಯಾಪಾರ ಕೈಹಿಡಿಯಲಿಲ್ಲ. ಹಲವು ಕಡೆ ಕೆಲಸ ಮಾಡಿದರೂ ಅದೇ ಕಥೆ. ಪ್ರಯೋಜನ ಅಂತೂ ಆಗಲಿಲ್ಲ. ಕೊನೆಗೆ ಥಿಯೇಟರ್​ಗಳಲ್ಲಿ ಸೀಟ್ ಫಿಕ್ಸ್ ಮಾಡೋದು, ಪೋಸ್ಟರ್ ಹಾಕುವುದು ಮತ್ತು ಸಿನಿಮಾಗಳಿಗೆ ಕ್ಯಾಂಟೀನ್ ನಡೆಸುವ ಕೆಲಸಕ್ಕೂ ಕೈ ಹಾಕಿದರು. ಈ ವೇಳೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಸ್ನ್ಯಾಕ್ಸ್​ಗಾಗಿ ಹೆಚ್ಚು ಹಣ ಖರ್ಚು ಮಾಡಲು ಹಿಂದೇಟು ಹಾಕುವುದನ್ನ ಗಮನಿಸಿದ್ದರು. ಹೀಗಾಗಿ ಜಸ್ಟ್ 10 ಸಾವಿರ ಇನ್ವೆಸ್ಟ್ ಮಾಡಿ ತಮ್ಮ ಮನೆಯ ಶೆಡ್​ನಲ್ಲೇ ಆಲೂಗಡ್ಡೆ ಚಿಪ್ಸ್ ಮಾಡಲು ಶುರು ಮಾಡಿದರು. ಟೇಸ್ಟ್ ಮತ್ತು ಕ್ವಾಲಿಟಿ ಚೆನ್ನಾಗಿತ್ತು. ಇದೇ ಚಂದೂಬಾಯಿ ವಿರಾನಿಯವರ ಜೀವನವನ್ನೇ ಬದಲಾಯಿಸಿತು. ಈ ಉದ್ಯಮ ಇವರ ಕೈ ಹಿಡಿಯಿತು. ಈಗ ಚಂದೂಹಾಯಿ ವಿರಾನಿಯವರ ಕಂಪನಿ ಆದಾಯ ಇದೀಗ 4,000 ಕೋಟಿ ರೂಪಾಯಿಗಳನ್ನು ತಲುಪಿದೆ.

 

Sulekha