ಐರ್ಲೆಂಡ್ ದೇಶದಲ್ಲಿ ನೆಲೆಸುವ ಆಸೆ ಇದ್ದವರಿಗೆ ಬಂಪರ್ ಆಫರ್ – ಐರಿಶ್ ಸರ್ಕಾರದಿಂದ ಸಿಗುತ್ತೆ ಕೈ ತುಂಬಾ ದುಡ್ಡು..!

ಐರ್ಲೆಂಡ್ ದೇಶದಲ್ಲಿ ನೆಲೆಸುವ ಆಸೆ ಇದ್ದವರಿಗೆ ಬಂಪರ್ ಆಫರ್ – ಐರಿಶ್ ಸರ್ಕಾರದಿಂದ ಸಿಗುತ್ತೆ ಕೈ ತುಂಬಾ ದುಡ್ಡು..!

ಜಗತ್ತು ಸುತ್ತಬೇಕು ಎನ್ನುವ ಕನಸು ಯಾರಿಗೇ ಇಲ್ಲ ಹೇಳಿ. ಆದರೂ ಅದೆಷ್ಟೋ ಜನರಿಗೆ ಆ ಕನಸು ಕನಸಾಗಿಯೇ ಉಳಿಯುತ್ತದೆ. ಆದರೆ ಇಲ್ಲೊಂದು ದೇಶ ವಿಶಿಷ್ಟವಾದ ಆಫರ್ ವೊಂದನ್ನ ನೀಡುತ್ತಿದೆ. ದೇಶ ಸುತ್ತೋದು ಮಾತ್ರ ಅಲ್ಲ, ನೀವೇ ಬಂದು ಇಲ್ಲಿ ನೆಲೆಸಿ ಬಿಡಿ ಎಂದು ಆಫರ್ ಕೂಡಾ ಕೊಡ್ತಾ ಇದೆ. ಹಾಗಂತ ಬಂದು ನೆಲೆಸೋದಿಕ್ಕೆ ಇರುವ ಖರ್ಚಿನ ಬಗ್ಗೆಯೂ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ಯಾಕಂದರೆ, ಅದೇ ದೇಶವೇ ಅಂದಾಜು 72 ಲಕ್ಷದ ಧನಸಹಾಯವನ್ನ ಕೂಡಾ ಕೊಡೋದಿಕ್ಕೆ ಮುಂದಾಗಿದೆ. ಆದರೆ ಈ ವಿಶಿಷ್ಟ ಆಫರ್ ನಲ್ಲೂ ಒಂದು ವಿಶೇಷತೆಯಿದೆ.

ಇದನ್ನೂ ಓದಿ: ಈ ದೇಶದ ಜನರ ವಯಸ್ಸು ದಿಢೀರ್‌ ಇಳಿಕೆ! – 1 ರಿಂದ 2 ವರ್ಷ ಚಿಕ್ಕವರಾದ ನಿವಾಸಿಗಳು!

ಹೌದು. ತಮ್ಮ ದೇಶಕ್ಕೆ ಬಂದು ಕಡಲಾಚೆಯ ಸಮುದಾಯಗಳಲ್ಲಿ ನೆಲೆಗೊಳ್ಳಲು ಬಯಸುವವರಿಗೆ ಐರ್ ಲ್ಯಾಂಡ್ ದೇಶವೂ ಅನನ್ಯವಾದ ಅವಕಾಶವೊಂದನ್ನ ನೀಡುತ್ತಿದೆ. ದೇಶದ ಜನಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಐರಿಶ್ ಸರ್ಕಾರ ಈ ಅವಕಾಶ ನೀಡುತ್ತಿದೆ. ಇದು ‘ಲಿವಿಂಗ್ ಐಲ್ಯಾಂಡ್’ ನೀತಿಯ ಒಂದು ಭಾಗವಾಗಿದೆ. ನಿರ್ಜನವಾದ ಕಡಲಾಚೆಯ ದ್ವೀಪಗಳಲ್ಲಿ ವಾಸಿಸುವ ಸಮುದಾಯಗಳನ್ನು ಬೆಂಬಲಿಸುವುದು ಮತ್ತು ಪುನರುಜ್ಜೀವನಗೊಳಿಸುವುದು ಇದರ ಉದ್ದೇಶವಾಗಿದೆ, ಅವುಗಳು ಸಾಮಾನ್ಯವಾಗಿ ದೇಶದ ಮುಖ್ಯ ಭೂಭಾಗದಿಂದ ಪ್ರತ್ಯೇಕವಾಗಿರುತ್ತವೆ. ಐರ್ಲೆಂಡ್‌ನ ಈ ಕಡಲಾಚೆಯ ದ್ವೀಪಗಳಲ್ಲಿ ನೆಲೆಸುವ ಹೊಸ ನಿವಾಸಿಗಳಿಗೆ ಸರ್ಕಾರವು 80,000 ಯುರೋಗಳಷ್ಟು (ಅಂದಾಜು 72 ಲಕ್ಷ ರೂಪಾಯಿಗಳು) ಮೊತ್ತವನ್ನು ನೀಡುತ್ತದೆ.

ಆದರೆ, ಈ ಅವಕಾಶವನ್ನು ಬಳಸಿಕೊಳ್ಳುವ ಮೊದಲು ಕೆಲವೊಂದು ನಿಯಮಗಳು ಅನ್ವಯವಾಗುತ್ತದೆ. ಮೊದಲನೆಯದಾಗಿ, ವ್ಯಕ್ತಿಯೂ ಐರ್ಲೆಂಡ್‌ನ  ಕಡಲಾಚೆಯ 30 ದ್ವೀಪಗಳಲ್ಲಿ ಒಂದರಲ್ಲಿ ಆಸ್ತಿಯನ್ನು ಖರೀದಿಸಬೇಕು. ಆಸ್ತಿಯು 1993 ರ ಮೊದಲು ನಿರ್ಮಿಸಲ್ಪಟ್ಟಿರಬೇಕು ಮತ್ತು ಎರಡು ವರ್ಷಗಳವರೆಗೆ ಖಾಲಿಯಾಗಿರಬೇಕು. ಮತ್ತೂ ಖರೀದಿಸಿದ ಆಸ್ತಿಯನ್ನು ನಿರ್ವಹಿಸಲು ಸರ್ಕಾರವು ಒದಗಿಸುವ 71 ಲಕ್ಷ ರೂಪಾಯಿಗಳನ್ನು ಬಳಸಬೇಕು. ಅಂದರೆ ಈ ಹಣವನ್ನು ಮನೆಯನ್ನ ನಿರ್ಮಿಸಲು ಮಾತ್ರ ಬಳಸಿಕೊಳ್ಳಬೇಕು. ಈ ಎಲ್ಲಾ ಷರತ್ತುಗಳಿಗೆ ಹೊಂದಾಣಿಕೆ ಯಾಗಿದ್ದರೆ ಮಾತ್ರ ಜುಲೈ 1 ರಿಂದ  ಅರ್ಜಿಯನ್ನು ಸಲ್ಲಿಸಬಹುದು.

suddiyaana