ಚಿಂದಿ ಆಯುವ ವ್ಯಕ್ತಿಗೆ ಬಂಪರ್‌! – ರಸ್ತೆ ಬದಿಯಲ್ಲಿ ಸಿಕ್ಕ ಪ್ಲಾಸ್ಟಿಕ್ ಬ್ಯಾಗ್‌ ನಲ್ಲಿತ್ತು 30 ಲಕ್ಷ ರೂಪಾಯಿ!

ಚಿಂದಿ ಆಯುವ ವ್ಯಕ್ತಿಗೆ ಬಂಪರ್‌! – ರಸ್ತೆ ಬದಿಯಲ್ಲಿ ಸಿಕ್ಕ ಪ್ಲಾಸ್ಟಿಕ್ ಬ್ಯಾಗ್‌ ನಲ್ಲಿತ್ತು 30 ಲಕ್ಷ ರೂಪಾಯಿ!

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಏಕಾಏಕಿ ಹಣದ ರಾಶಿ ಸಿಕ್ಕಿದರೆ ಹೇಗಿರುತ್ತೆ ಅಂತಾ ಅನೇಕರು ಯೋಚಿಸುತ್ತಾರೆ. ನಮ್ಮ ಕಷ್ಟವೆಲ್ಲಾ ಒಂದೇ ಕ್ಷಣಕ್ಕೆ ಪರಿಹಾರವಾಗುತ್ತದೆ ಅಂತಾ ಅನೇಕರು ಅಂದುಕೊಳ್ಳುತ್ತಾರೆ. ಇಲ್ಲೊಬ್ಬ ಚಿಂದಿ ಆಯುವ ವ್ಯಕ್ತಿಗೆ ಸುಮಾರು 30 ಲಕ್ಷ ರೂ ಮೌಲ್ಯದ 3 ಮಿಲಿಯನ್ ಡಾಲರ್ ಹಣ ರಸ್ತೆ ಬದಿಯಲ್ಲಿ ಸಿಕ್ಕಿದೆ.

ಅಚ್ಚರಿಯಾದ್ರೂ ಸತ್ಯ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಿಂದಿ ಆಯುವ ಸೇಲ್ಮನ್ ಎಸ್‌ಕೆ (39) ಅವರಿಗೆ ಶುಕ್ರವಾರ ನಾಗವಾರ ರೈಲು ನಿಲ್ದಾಣದ ಪ್ರದೇಶದಲ್ಲಿ ಸುಮಾರು 3 ಮಿಲಿಯನ್ ಡಾಲರ್ ಹಣವಿದ್ದ ಪ್ಲಾಸ್ಟಿಕ್ ಬ್ಯಾಗ್ ದೊರೆತಿದೆ. ಆದರೆ ಈ ಬ್ಯಾಗ್ ನ ಸತ್ಯಾಸತ್ಯತೆ ಇನ್ನೂ ಪತ್ತೆಯಾಗಿಲ್ಲ, ಜೊತೆಗೆ ನಗರದ ರೈಲ್ವೆ ಹಳಿಯಲ್ಲಿ ವಿಶ್ವಸಂಸ್ಥೆಯ ಮುದ್ರೆ ಹೊಂದಿರುವ ಪತ್ರವೂ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲು ಹೊರಟ ಇಸ್ರೇಲ್ – ಗಾಜಾ ನಗರವನ್ನೇ ವಿಭಜಿಸಿದ ಸೇನೆ!

ಪಶ್ಚಿಮ ಬಂಗಾಳದ ನಾಡಿಯಾ ಮೂಲದ ಸೇಲ್ಮನ್ ಎಸ್‌ಕೆ ನಗರದಲ್ಲಿ ಚಿಂದಿ ಆಯುವ ಕೆಲಸ ಮಾಡುತ್ತಾರೆ. ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಅವರು ಜೀವನ ಸಾಗಿಸುತ್ತಿದ್ದಾರೆ. ಶುಕ್ರವಾರ ನಾಗವಾರ ರೈಲು ನಿಲ್ದಾಣದ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಹುಡುಕುತ್ತಿದ್ದಾಗ ರೈಲ್ವೆ ಹಳಿ ಮೇಲೆ ಕಪ್ಪು ಚೀಲ ಪತ್ತೆಯಾಗಿದೆ. ಅದನ್ನು ಅವರು ಅಮೃತಹಳ್ಳಿಯ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸೇಲ್ಮನ್ ಪ್ಲಾಸ್ಟಿಕ್ ಚೀಲವನ್ನು ತೆರೆದಾಗ ಅದರಲ್ಲಿ ಡಾಲರ್ ಕಂಡುಬಂದವು.

ಈ ಡಾಲರ್ ಗಳನ್ನು ಏನು ಮಾಡಬೇಕೆಂದು ತಿಳಿಯದೆ, ಸೇಲ್ಮನ್ ಸ್ಕ್ರ್ಯಾಪ್ ಡೀಲರ್ ಬಪ್ಪನನ್ನು ಕರೆದು ತನಗೆ ಸಿಕ್ಕ ಹಣದ ಬಗ್ಗೆ ಹೇಳಿದರು. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಬಪ್ಪ ಅವರು ಬೆಂಗಳೂರಿಗೆ ಹಿಂದಿರುಗುವವರೆಗೆ ಹಣವನ್ನು ತನ್ನ ಬಳಿ ಇಟ್ಟುಕೊಳ್ಳುವಂತೆ ಸೇಲ್‌ಮನ್‌ಗೆ ಹೇಳಿದ್ದಾರೆ. ಬಳಿಕ ತನ್ನ ಮನೆಯಲ್ಲಿ ಹಣವನ್ನು ಇಡಲು ಕಷ್ಟವಾದ ಸಲೆಮಾನ್ ಭಾನುವಾರ ಸ್ವರಾಜ್ ಇಂಡಿಯಾದ ಸಾಮಾಜಿಕ ಕಾರ್ಯಕರ್ತ ಆರ್ ಕಲೀಂ ಉಲ್ಲಾ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಆದರೆ ಕಲೀಂ ಉಲ್ಲಾ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ವಿಷಯ ತಿಳಿಸಿದ್ದಾರೆ.

‘ಹಣದ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡಿದಾಗ ಹಣದ ಜತೆಗೆ ಸೇಲ್ಮನ್ ಅವರನ್ನು ಕಚೇರಿಗೆ ಕರೆತರುವಂತೆ ದಯಾನಂದ ಅವರು ಹೇಳಿದ್ದರು. ಬಳಿಕ ಅಧಿಕಾರಿರಗಳ ಬಳಿ ಸಾಲೇಮನ್ ರೈಲ್ವೆ ಹಳಿ ಮೇಲೆ ಹಣ ಸಿಕ್ಕಿರುವುದನ್ನು ಬಹಿರಂಗಪಡಿಸಿದ್ದಾರೆ. ಕಮಿಷನರ್ ಕೂಡಲೇ ಹೆಬ್ಬಾಳ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಘಟನಾ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು ಎಂದು ಉಲ್ಲಾ ಹೇಳಿದರು.

ಇನ್ನು ಈ ಡಾಲರ್ ಗಳು ನಕಲಿ ಎಂದು ತೋರುತ್ತಿದ್ದು, ಅವುಗಳನ್ನು ಸಂಪೂರ್ಣ ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕಳುಹಿಸಲಾಗಿದೆ ಎಂದು ಹೆಬ್ಬಾಳ ಪೊಲೀಸರು ತಿಳಿಸಿದ್ದಾರೆ.

Shwetha M