ಮದುವೆ ಮನೆಗೆ ಗೂಳಿ ಎಂಟ್ರಿ… ಉಸಿರು ಬಿಗಿಹಿಡಿದು ನೋಡುವಂತಿದೆ ವಿಡಿಯೋ…

ಮದುವೆ ಮನೆಗೆ ಗೂಳಿ ಎಂಟ್ರಿ… ಉಸಿರು ಬಿಗಿಹಿಡಿದು ನೋಡುವಂತಿದೆ ವಿಡಿಯೋ…

ಮದುವೆ ಮನೆ ಎಂದಾಕ್ಷಣ ಅಲ್ಲಿ ಹಬ್ಬದ ವಾತಾವರಣ ಇರುತ್ತದೆ. ವಧು-ವರನ ನೆಂಟರಿಷ್ಟರು, ಸ್ನೇಹಿತರು ಬರುವುದು ಸಾಮಾನ್ಯ. ಇಂತಹ ಶುಭ ಕಾರ್ಯ ನಡೆಯುವ ವೇಳೆ ನಾಯಿ, ಬೆಕ್ಕು ನುಗ್ಗುವುದು ನೋಡಿದ್ದೇವೆ. ಆದರೆ ಇಲ್ಲೊಂದು ಮದುವೆ ಮನೆಯಲ್ಲಿ ದೊಡ್ಡ ಗೂಳಿಯೊಂದು ನುಗ್ಗಿ ಎಲ್ಲರನ್ನೂ ಆತಂಕಗೊಳ್ಳುವಂತೆ ಮಾಡಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ, ಮದುವೆ ನಡೆಯುವ ಸ್ಥಳವನ್ನು ಅತ್ಯಂತ ವೈಭವಯುತವಾಗಿ ಅಲಂಕರಿಸಲಾಗಿತ್ತು. ಶಿಸ್ತಾಗಿ ಪಾನೀಯ, ಆಹಾರದ ಕೌಂಟರುಗಳನ್ನು ಜೋಡಿಸಿ, ಅತಿಥಿಗಳ ಆಗಮನಕ್ಕೆ ಕುಟುಂಬಸ್ಥರು ಕಾಯುತ್ತಿದ್ದರು. ಈ ವೇಳೆ ಗೂಳಿಯೊಂದು ನುಗ್ಗಿ ಎಲ್ಲರನ್ನೂ ಆತಂಕಗೊಳ್ಳುವಂತೆ ಮಾಡಿದೆ.

ಇದನ್ನೂ ಓದಿ: ಸಿಳ್ಳೆ ಹೊಡೆದ ಹಕ್ಕಿ – ದರ್ಮಕ್ಕೆ ಏಟು ತಿಂದ ವ್ಯಕ್ತಿ

ವಿಡಿಯೋದಲ್ಲಿ ಗೂಳಿ ಒಳಬರುತ್ತಿದ್ದಂತೆ ಯಾರೋ ಒಬ್ಬರು ಕೈಸನ್ನೆಯಿಂದ ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಅದನ್ನು ಓಡಿಸುವುದಕ್ಕಿಂತ ತನ್ನನ್ನು ತಾನು ರಕ್ಷಿಸಿಕೊಳ್ಳುವುದೇ ಮೇಲು ಎನ್ನಿಸಿದಂತಿದೆ. ಗಾಜಿನಿಂದ ಅಲಂಕರಿಸಿದ ಕೌಂಟರಿನ ಕಡೆ ಓಡುತ್ತದೆ.

ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ನರೇಂದ್ರ ಸಿಂಗ್ ಎಂಬವರು ಟ್ವಿಟ್ಟರ್ ನಲ್ಲಿ 15 ಸೆಕೆಂಡುಗಳ ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಸದ್ಯ ಬೇಗನೇ ಗೂಳಿ ಮರಳಿದೆ. ಇಲ್ಲವಾದಲ್ಲಿ ಧ್ವಂಸ ಮಾಡದೇ ಇದು ಜಾಗ ಖಾಲಿ ಮಾಡುವ ಜಾಯಮಾನದ್ದು ಅಲ್ಲ. ಮನೆಯವರ ಅದೃಷ್ಟ ಚೆನ್ನಾಗಿದೆ ಅಂತ ಕಮೆಂಟ್ ಮಾಡಿದ್ದಾರೆ.

suddiyaana