ತುತ್ತು ಅನ್ನಕ್ಕೂ ಗತಿಯಿಲ್ಲದೆ ಕೇಡಿ ಜೆಡಿ ವಿಲ ವಿಲ! – ಹಳೇ ಸಾಮ್ರಾಜ್ಯ ಮರಳಿ ಪಡೆದ ಗೌತಮ್ ದಿವಾನ್!

ಅಮೃತಧಾರೆ ಸೀರಿಯಲ್‌ನಲ್ಲಿ ಈಗ ಕೇಡಿಗಳಿಗೆ ಉಳಿಗಾಲವಿಲ್ಲ. ಕುತಂತ್ರಿ ಶಕುಂತಲಾ ಈಗಾಗಲೇ ಎಲ್ಲಾ ಕಳೆದುಕೊಂಡು ಗೌತಮ್ ಆಶ್ರಯ ಅರಸಿ ಬಂದಾಗಿದೆ. ಇದೀಗ ಕೇಡಿ ಜೈದೇವ್ ಪರಿಸ್ಥಿತಿ ಕೂಡಾ ಅತಂತ್ರವಾಗಿದೆ.
ಇದನ್ನೂ ಓದಿ:ಟಾಕ್ಸಿಕ್ ಟೀಂ ಜೊತೆ ಕಿಯಾರಾ ಕಿರಿಕ್? – ಆ ಸೀನ್ ತೆಗೆದುಹಾಕಲು ಡಿಮ್ಯಾಂಡ್ ಮಾಡಿದ್ರಾ ಬೋಲ್ಡ್ ಬ್ಯೂಟಿ?
ಅಮೃತಧಾರೆ ಸೀರಿಯಲ್ ಮುಗಿಯುವ ಲಕ್ಷಣ ಕಾಣುತ್ತಿದೆ. ಸದ್ಯ ಸೀರಿಯಲ್‌ನಲ್ಲಿರೋ ವಿಲನ್‌ಗಳ ಅಟ್ಟಹಾಸಕ್ಕೆ ಬ್ರೇಕ್ ಬಿದ್ದಿದೆ. ಗೌತಮ್ ದಿವಾನ್ ಮಲತಾಯಿ ಶಕುಂತಲಾ ಸೊಕ್ಕು ಮುರಿದಾಗಿದೆ. ಈಗ ಶಕುಂತಲಾ ಒಳ್ಳೆಯವಳಾಗಿದ್ದಾಳೆ. ಮತ್ತೊಂದೆಡೆ ಕೇಡಿ ಜೈದೇವ್ ಸ್ಥಿತಿ ನೋಡಿ ಸ್ವತಃ ಅಭಿಮಾನಿಗಳೇ ಮರುಗುವಂತಾಗಿದೆ. ಜೈದೇವ್ ಪಾತ್ರವನ್ನು ತುಂಬಾನೇ ಸ್ಟೈಲಿಶ್ ಆಗಿ ತೋರಿಸಿಕೊಂಡು ಬರಲಾಗಿತ್ತು. ಗೌತಮ್ ಮತ್ತು ಭೂಮಿಕಾ ಮುಂದೇ ಪದೇ ಪದೇ ಸೋತ್ರೂ ಜೈದೇವ್ ದುರಂಹಕಾರ ಕಡಿಮೆಯಾಗಿರಲಿಲ್ಲ. ಆದ್ರೆ ಇದೀಗ ಜೈದೇವ್ ಪಾತ್ರದ ಪರಿಸ್ಥಿತಿ ನೋಡಿದರೆ ಅಯ್ಯೋ ಅನಿಸುವಂತಾಗಿದೆ. ತನ್ನ ಪಾಪಕೃತ್ಯಗಳಿಂದ ಬೀದಿಗೆ ಬಂದಿರೋ ಜೈದೇವ್, ಸದ್ಯ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ಬಂದಿದ್ದಾನೆ. ಕೈಯಲ್ಲಿ ಬಿಡಿಗಾಸು ಇಲ್ಲದಿದ್ರೂ ಜೈದೇವ್‌ಗೆ ಫಾಸ್ಟ್‌ಫುಡ್ ತಿನ್ನೋ ಆಸೆ. ಆದ್ರೆ ಮುಂಗಡ ಹಣ ನೀಡದ ಕಾರಣ ಜೈದೇವ್‌ಗೆ ಇಷ್ಟದ ಆಹಾರ ಸಿಕ್ಕಿಲ್ಲ. ಇದೀಗ ರಸ್ತೆ ಬದಿಯಲ್ಲಿರುವ ಅಂಗಡಿಗೆ ಬಂದು ಊಟ ಮಾಡಿದ್ದಾನೆ. ಆದ್ರೆ ಈ ಊಟದ ಹಣ ನೀಡಲು ಜೈದೇವ್ ಬಳಿ ಒಂದು ರೂಪಾಯಿಯೂ ಇಲ್ಲ.
ಅಂಗಡಿಯೊಂದರ ಮುಂದೆ ಮಲಗಿದ್ದ ಜೈದೇವ್ ಧರಿಸಿದ್ದ ವಾಚ್, ಉಂಗುರಗಳನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿದ್ದಾನೆ. ಕಾಲಲ್ಲಿ ಚಪ್ಪಲಿ ಇಲ್ಲದೇ ಜೈದೇವ್ ಓಡಾಡುತ್ತಿದ್ದಾನೆ.
ಈ ಎಲ್ಲಾ ಬೆಳವಣಿಗೆ ನಡುವೆ ಗೌತಮ್ ತನ್ನ ಕುಟುಂಬದೊಂದಿಗೆ ದಿವಾನ್ ಮನೆತನದ ಮನೆಗೆ ಹಿಂದಿರುಗುತ್ತಿದ್ದು, ಇದಕ್ಕಾಗಿ ಪೂಜೆ ಸಹ ಏರ್ಪಾಟು ಮಾಡಿದ್ದಾನೆ. ಒಟ್ನಲ್ಲಿ ಅಮೃತಧಾರೆ ಸೀರಿಯಲ್‌ನಲ್ಲಿ ಒಂದೆಡೆ ಗೌತಮ್ ತನ್ನ ಸಾಮ್ರಾಜ್ಯವನ್ನು ಮರಳಿ ಪಡೆದಿದ್ದಾನೆ. ಕೇಡಿ ಜೈದೇವ್ ಕೈಯಲ್ಲಿ ಬಿಡಿಗಾಸು ಇಲ್ಲದೇ ಬೀದಿ ಬೀದಿ ಅಲೆಯುತ್ತಿದ್ದಾನೆ.

ನೋಡಿರಿ

