ಬರೀ 700 ರೂಪಾಯಿಗೆ SUV 700 ಕಾರು ಕೇಳಿದ ಬಾಲಕ! – ವೈರಲ್ ಆದ ಪುಟ್ಟ ಪೋರನಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಆನಂದ್ ಮಹೀಂದ್ರಾ!

ಸೋಶಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ವಿಚಾರ ವೈರಲ್ ಆಗುತ್ತಲೇ ಇರುತ್ತದೆ. ಕಳೆದ ಕೆಲವು ದಿನಗಳ ಹಿಂದೆ ಬಾಲಕನೊಬ್ಬನ ವಿಡಿಯೋವೊಂದು ಭಾರಿ ವೈರಲ್ ಆಗಿತ್ತು. ಆ ಬಾಲಕ ಅಪ್ಪನ ಪರ್ಸ್ನಿಂದ 700 ರೂಪಾಯಿ ಹಣ ತೆಗೆದು ಮಹೀಂದ್ರಾ SUV 700 ಕಾರು ಖರೀದಿಸುವಂತೆ ಹೇಳಿದ್ದ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ವೈರಲ್ ಆದ ಬಾಲಕ ಚೀಕುಗೆ ಬಂಪರ್ ಗಿಫ್ಟ್ವೊಂದು ಸಿಕ್ಕಿದೆ. ಮಹೀಂದ್ರಾ ಗ್ರೂಪ್ ಕಂಪನಿಯ ಆನಂದ್ ಮಹೀಂದ್ರಾ ಅವರು ಚೀಕುಗೆ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: ವಿಪಕ್ಷಗಳ ಜಾತಿ ಗಣತಿ ಅಸ್ತ್ರಕ್ಕೆ ಬಜೆಟ್ ಮೂಲಕ ಕೌಂಟರ್ – ಲೋಕಸಭೆ ಎಲೆಕ್ಷನ್ಗೆ ಸಿಕ್ಕಿತಾ ಬಿಗ್ ಟ್ವಿಸ್ಟ್?
ಕಳೆದ ಕೆಲವು ದಿನಗಳ ಹಿಂದೆ ಚೀಕು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಕಂಡ ಆನಂದ್ ಮಹೀಂದ್ರಾ ಅವರು ಮನಸಾರೆ ಮೆಚ್ಚಿಕೊಂಡಿದ್ದರು. ಚೀಕು ಮುದ್ದಾದ ಮಾತಿಗೆ ಮಾರು ಹೋಗಿದ್ದ ಆನಂದ್ ಮಹೀಂದ್ರಾ ಅವರು ಬರೀ 700 ರೂಪಾಯಿಗೆ ಮಹೀಂದ್ರಾ SUV 700 ಕಾರು ಮಾರಾಟ ಮಾಡಿದ್ರೆ ದಿವಾಳಿ ಆಗುತ್ತೇನೆ ಎಂದು ಕಾಲೆಳೆದಿದ್ದರು. ಅಪ್ಪನ ಪರ್ಸ್ನಿಂದ 700 ರೂಪಾಯಿ ನೋಟು ತೆಗೆದು ಮಹೀಂದ್ರಾ SUV 700 ಕಾರು ಖರೀದಿ ಮಾಡು ಅಂತ ಕೇಳಿದ್ದ ಚೀಕುಗೆ ಆನಂದ್ ಮಹೀಂದ್ರಾ ಸರ್ಪ್ರೈಸ್ ಕೊಟ್ಟಿದ್ದಾರೆ. ಇದೀಗ ಈ ಪುಟ್ಟ ಪೋರ ಮಹಿಂದ್ರಾ ಗ್ರೂಪ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾನೆ.
ಉದ್ಯಮಿ ಆನಂದ್ ಮಹಿಂದ್ರಾ ಅವರು ಚೀಕು ಯಾದವ್ನನ್ನು ಪುಣೆಯ ತಮ್ಮ ಕಾರು ಉತ್ಪಾದನಾ ಪ್ಲಾಂಟ್ಗೆ ಆಹ್ವಾನ ನೀಡಿದ್ದಾರೆ. ಮಹೀಂದ್ರಾ ಚಕನ್ ಪ್ಲಾಂಟ್ಗೆ ಭೇಟಿ ನೀಡಿದ್ದ ಚೀಕು ಫುಲ್ ಖುಷಿಯಾಗಿ ಮಹೀಂದ್ರಾ ಕಾರಿನ ಬಗ್ಗೆ ತಿಳಿದುಕೊಂಡಿದ್ದಾನೆ. ಚೀಕು ತನ್ನ ತಂದೆಗೆ 700 ರೂಪಾಯಿ ಕೊಟ್ಟು ಮಹೀಂದ್ರಾ SUV 700 ಕಾರಿನಲ್ಲಿ ಸಖತ್ ಮಜಾ ಮಾಡಿದ್ದಾನೆ. ಚಕನ್ ಪ್ಲಾಂಟ್ಗೆ ಚೀಕು ಭೇಟಿ ಕೊಟ್ಟ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.