ವಿಮಾನದ ಶೌಚಾಲಯದಲ್ಲಿ ಬಾಂಬ್ ಇರುವ ಶಂಕೆ – ಪರಿಶೀಲನೆ ನಡೆಸಿದಾಗ ಅಧಿಕಾರಿಗಳಿಗೆ ಸಿಕ್ಕಿದ್ದು ಅಡಲ್ಟ್ ಡೈಪರ್!

ವಿಮಾನಗಳಲ್ಲಿ ಬಾಂಬ್ ಇದೆ ಎಂದು ಅನೇಕ ಹುಸಿ ಬೆದರಿಕೆ ಕರೆಗಳು ಆಗಾಗ ಕೇಳಿ ಬರುತ್ತವೆ. ಈ ವೇಳೆ ವಿಮಾನ ತುರ್ತು ಭೂಸ್ಪರ್ಶ ಮಾಡಿರುವತಂಹ ಹಲವಾರು ಘಟನೆಗಳನ್ನು ನಾವು ಕೇಳಿದ್ದೇವೆ. ಇತಂಹದ್ದೇ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ವಿಮಾನದ ಶೌಚಾಲಯದಲ್ಲಿ ಬಾಂಬ್ ಇದೆ ಎಂದು ಶಂಕಿಸಿ, ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಲಾಗಿದೆ.
ಏನಿದು ಘಟನೆ?
ಅಮೆರಿಕದ ಕೋಪಾ ಏರ್ಲೈನ್ ವಿಮಾನವು ಪನಾಮ ಸಿಟಿಯ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫ್ಲೋರಿಡಾದ ಟ್ಯಾಂಪಾ ನಗರಕ್ಕೆ ತೆರಳುತ್ತಿದ್ದಾಗ ಶೌಚಾಲಯದಲ್ಲೊಂದು ಅನುಮಾನಾಸ್ಪದ ವಸ್ತು ಸಿಕ್ಕಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ವಿಮಾನದಲ್ಲಿ ಬಾಂಬ್ ಇದೆ ಅಂತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ವಿಮಾನವನ್ನು ಪನಾಮ ಏರ್ಪೋರ್ಟ್ನಲ್ಲಿಯೇ ತುರ್ತು ಭೂಸ್ಪರ್ಷ ಮಾಡಲಾಗಿದೆ. ಆ ವಿಮಾನದಲ್ಲಿದ್ದ 144 ಪ್ರಯಾಣಿಕರನ್ನು ಕೆಳಗಿಳಿಸಿ, ವಿಮಾನವನ್ನು ಭದ್ರತಾ ತಂಡದ ಸಹಾಯದಿಂದ ಸಂಪೂರ್ಣವಾಗಿ ಪರಿಶೀಲಿಸಲಾಯಿತು. ಈ ವೇಳೆ ಆ ಅನುಮಾನ ವಸ್ತು ಯಾವುದು ಅಂತಾ ಗೊತ್ತಾಗಿದೆ. ಇದನ್ನು ಕಂಡ ಅಧಿಕಾರಿಗಳಿಗೆ ಅಳಬೇಕೋ, ನಗಬೇಕೋ ಅಂತಾ ಗೊತ್ತಾಗದೇ ತಲೆ ಮೇಲೆ ಕೈ ಇಡುವಂತಾಗಿತ್ತು.
ಇದನ್ನೂ ಓದಿ: ಮನೆ ಬಾಡಿಗೆಗೆ ಇದ್ದ ವ್ಯಕ್ತಿ ಜೊತೆ ಲವ್ವಿಡವ್ವಿ.. – ಪ್ರಿಯಕರನ ಜೊತೆ ಸೇರಿ ಅತ್ತೆ ಕತೆ ಮುಗಿಸಿಬಿಟ್ಲು ಪಾಪಿ ಸೊಸೆ!
ಶೌಚಾಲಯದಲ್ಲಿ ಸಿಕ್ಕಿದ್ದೇನು?
ಪನಾಮ ನಗರದ ಟೊಕುಮೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ತಂಡವು ವಿಮಾನದ ಶೋಧವನ್ನು ನಡೆಸಿದ್ದಾರೆ. ಬಾಂಬ್ ಅಂತಾ ಅನುಮಾನ ವ್ಯಕ್ತಪಡಿಸಿದ ಸಿಬ್ಬಂದಿಗೆ ಅಸಲಿ ವಿಚಾರ ಗೊತ್ತಾಗಿದೆ. ಅಷ್ಟಕ್ಕೂ ಶೌಚಾಲಯದಲ್ಲಿ ಸಿಕ್ಕಿರುವುದು ಬಾಂಬ್ ಅಲ್ಲ.. ಅದು ಅಡಲ್ಟ್ ಡೈಪರ್ ಆಗಿದೆ. ಮತ್ತೊಮ್ಮೆ ಪರಿಶೀಲನೆ ನಡೆಸಿದ ಭದ್ರತಾ ಸಿಬ್ಬಂದಿ ವಿಮಾನದಲ್ಲಿ ಯಾವುದೇ ರೀತಿಯ ಬಾಂಬ್ ಇಲ್ಲ ಅಂತಾ ಸ್ಪಷ್ಟಿಕರಣ ಕೊಟ್ಟಿದ್ದಾರೆ. ಬಾಂಬ್ ಇದೆ ಎಂಬ ಗೊಂದಲದಿಂದ ಉಂಟಾದ ವಿಳಂಬದ ಹೊರತಾಗಿಯೂ ಕೋಪಾ ಏರ್ಲೈನ್ ವಿಮಾನವು ಅಂತಿಮವಾಗಿ ತನ್ನ ಪ್ರಯಾಣವನ್ನು ಪುನರಾರಂಭಿಸಿ, ಸುರಕ್ಷಿತವಾಗಿ ಟ್ಯಾಂಪಾ ನಗರಕ್ಕೆ ತಲುಪಿದೆ.
ವಿಮಾನವನ್ನು ಸುರಕ್ಷಿತ ರನ್ ವೇಯಲ್ಲಿ ಲ್ಯಾಂಡಿಗ್ ಮಾಡಿ, ವಿಶೇಷ ಶ್ವಾನದಳ ಮತ್ತು ಸಶಸ್ತ್ರ ಪಡೆಗಳ ಸಹಾಯದಿಂದ ವಿಮಾನವನ್ನು ಸಂಪೂರ್ಣವಾಗಿ ಪರೀಕ್ಷಿಸಲಾಯಿತು. ಮತ್ತು ಆ ಶಂಕಿತ ವಸ್ತು ಬಾಂಬ್ ಅಲ್ಲ ಬದಲಿಗೆ ಅದು ಅಡಲ್ಟ್ ಡೈಪರ್ ಅಷ್ಟೆ. ವಿಮಾನದಲ್ಲಿ ಯಾವುದೇ ರೀತಿಯ ಬಾಂಬ್ ಇಲ್ಲ” ಎಂದು ವಿಮಾನ ನಿಲ್ದಾಣದ ಭದ್ರತಾ ತಂಡದ ಮುಖ್ಯಸ್ಥ ಜೋಸ್ ಕ್ಯಾಸ್ಟ್ರೋ ಹೇಳಿಕೆ ನೀಡಿದ್ದಾರೆ. ಪನಾಮದ ರಾಷ್ಟ್ರೀಯ ಪೋಲಿಸ್ ದಳ ತನ್ನ ಟ್ವಿಟರ್‌ನಲ್ಲಿ ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿದೆ.