ಬೋಟ್ ಮುಳುಗಿ 22 ಮಂದಿ ಸಾವು – ಹಲವರ ರಕ್ಷಣೆ, ಇಬ್ಬರು ನಾಪತ್ತೆ

ಬೋಟ್ ಮುಳುಗಿ 22 ಮಂದಿ ಸಾವು – ಹಲವರ ರಕ್ಷಣೆ, ಇಬ್ಬರು ನಾಪತ್ತೆ

ಪೂರ್ವ ಆಫ್ರಿಕಾ: ಸುಮಾರು 47 ಜನರನ್ನು ಹೊತ್ತೊಯ್ಯುತ್ತಿದ್ದ ಬೋಟೊಂದು ಸಮುದ್ರದಲ್ಲಿ ಮುಳುಗಿ 22 ಮಂದಿ ಸಾವನ್ನಪ್ಪಿದ ಘಟನೆ ಪೂರ್ವ ಆಫ್ರಿಕಾದ ಮಡಗಾಸ್ಕರ್‌ನಲ್ಲಿ ನಡೆದಿದೆ.

ಆಫ್ರಿಕನ್ ರಾಷ್ಟ್ರದ ಉತ್ತರದಲ್ಲಿರುವ ಅಂಕಝೊಂಬೊರೊನಾ ಸಮುದ್ರದಲ್ಲಿ ದೋಣಿ ಮುಳುಗಡೆಯಾಗಿದೆ.ದೋಣಿ ಅವಘಡ ಸಂಭವಿಸಿದ ಮಾಹಿತಿ ತಿಳಿದ ರಕ್ಷಣಾ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ ನೀರಿನಲ್ಲಿ ಮುಳುಗಿದ್ದ 23 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. 22 ಮಂದಿಯ ದೇಹಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಯ್ಯೋ ನನ್ನ ಹೆಂಡ್ತಿ ಯಾವಾಗ್ಲೂ ನಿದ್ದೆ ಮಾಡ್ತಾಳೆ – ಠಾಣೆ ಮೆಟ್ಟಿಲೇರಿದ ಪತಿ

ಮಡಗಾಸ್ಕರ್‌ನ ಬಂದರು ಪ್ರಾಧಿಕಾರವು ಫ್ರೆಂಚ್ ದ್ವೀಪವಾದ ಮಯೊಟ್ಟೆಗೆ ನೌಕಾಯಾನ ಮಾಡಲು ಯತ್ನಿಸಿದ ವೇಳೆ ದೋಣಿ ಮಗುಚಿ ಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಾಪತ್ತೆಯಾದವರನ್ನು ಪತ್ತೆಹಚ್ಚಲು ರಕ್ಷಣಾ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ ನೀರಿನಿಂದ ಹೊರತೆಗೆದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

suddiyaana