ಮೀಸಲಾತಿ ಪ್ರಮಾಣ ಶೇ.77 ಕ್ಕೆ ಹೆಚ್ಚಿಸುವ ಮಸೂದೆ ಅಂಗೀಕಾರ ಮಾಡಿದ ಜಾರ್ಖಾಂಡ್ ವಿಧಾಸಭೆ

ಮೀಸಲಾತಿ ಪ್ರಮಾಣ ಶೇ.77 ಕ್ಕೆ ಹೆಚ್ಚಿಸುವ ಮಸೂದೆ ಅಂಗೀಕಾರ ಮಾಡಿದ ಜಾರ್ಖಾಂಡ್ ವಿಧಾಸಭೆ

ರಾಂಚಿ: ವಿವಿಧ ವರ್ಗಗಳಿಗೆ ನೀಡಿರುವ ಮೀಸಲಾತಿಯ ಪ್ರಮಾಣವನ್ನು ಒಟ್ಟು ಶೇ 77 ಕ್ಕೆ ಹೆಚ್ಚಿಸುವ ಮಸೂದೆಯನ್ನು ಜಾರ್ಖಂಡ್ ವಿಧಾನಸಭೆ ಶುಕ್ರವಾರ ಅಂಗೀಕರಿಸಿದೆ.

ಇದನ್ನೂ ಓದಿ: ಶೇ.21 ರಷ್ಟು ತೆಲಂಗಾಣ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲ- ಅಧ್ಯಯನ ವರದಿಯಿಂದ ಬಹಿರಂಗ

ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ “ಜಾರ್ಖಾಂಡ್ ರಾಜ್ಯದ ಹುದ್ದೆಗಳು ಹಾಗೂ ಸೇವೆಗಳಲ್ಲಿ ಮೀಸಲಾತಿ ಕಾಯ್ದೆ, 2001”ಕ್ಕೆ ತಿದ್ದುಪಡಿ ಮಾಡುವ ಮೂಲಕ ಮಸೂದೆಗೆ ಒಪ್ಪಿಗೆ ನೀಡಲಾಯಿತು. ಇದರೊಂದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಇತರ ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಸರ್ಕಾರಿ ಉದ್ಯೋಗದಲ್ಲಿನ ಮೀಸಲಾತಿ ಪ್ರಮಾಣ ಹೆಚ್ಚಳವಾಗಲಿದೆ. ಈ ಕಾಯ್ದೆಗೆ ತಿದ್ದುಪಡಿ ಮಾಡುವ ಮಾಸೂದೆಯನ್ನು ಅಂಗೀಕರಿಸುವ ಮೂಲಕ, ರಾಜ್ಯ ಸರ್ಕಾರ ಸಂವಿಧಾನದ 9 ನೇ ಶೆಡ್ಯೂಲ್ ನಲ್ಲಿ ಬದಲಾವಣೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಿದೆ.

ಉದ್ದೇಶಿತ  ಮೀಸಲಾತಿಯಿಂದಾಗಿ ಎಸ್ ಸಿಗಳಿಗೆ ಶೇ12 ರಷ್ಟು ಕೋಟಾ ಸಿಗಲಿದ್ದರೆ, ಎಸ್ ಟಿ ಗಳಿಗೆ ಶೇ. 28, ಇಬಿಸಿ ಶೇ.15, ಒಬಿಸಿ ಶೇ.12 ಹಾಗೂ ಇಡಬ್ಲ್ಯುಎಸ್ ಗಳಿಗೆ ಶೇ.10 ರಷ್ಟು ಕೋಟಾ ಸಿಗಲಿದೆ.

suddiyaana