IPLಗೆ ಹೊಸ ರೂಲ್ಸ್ ತಂದ BCCI – ಹೆಚ್ಚುವರಿ 10 ಪಂದ್ಯ ಸೇರಿಸಿದ್ದೇಕೆ?
REVENGE ಗೇಮ್.. ಹೇಗಿರುತ್ತೆ ಟೂರ್ನಿ?

IPLಗೆ ಹೊಸ ರೂಲ್ಸ್ ತಂದ BCCI – ಹೆಚ್ಚುವರಿ 10 ಪಂದ್ಯ ಸೇರಿಸಿದ್ದೇಕೆ?REVENGE ಗೇಮ್.. ಹೇಗಿರುತ್ತೆ ಟೂರ್ನಿ?

ಟೆಸ್ಟ್, ಟಿ-20ಐ ಹಾಗೇ ಒಡಿಐ ಅಂತಾ ಬಿಸಿಸಿಐ ಸಾಲು ಸಾಲು ಶೆಡ್ಯೂಲ್​ಗಳ ನಡುವೆ 2026ರ ಐಪಿಎಲ್​ಗೂ ಸಿದ್ಧವಾಗ್ತಿದೆ. ಬಟ್ ನೆಕ್ಸ್​ಟ್ ಸೀಸನ್ ನಲ್ಲಿ ಬಿಗ್ ಟ್ವಿಸ್ಟ್ ಇರೋದಂತೂ ಪಕ್ಕಾ. ಯಾಕಂದ್ರೆ ಮುಂದಿನ ಆವೃತ್ತಿಗೆ ಹೆಚ್ಚುವರಿಯಾಗಿ ಹತ್ತು ಪಂದ್ಯಗಳನ್ನ ಸೇರಿಸೋಕೆ ಬಿಸಿಸಿಐ ಮಟ್ಟದಲ್ಲಿ ಚರ್ಚೆಯಾಗ್ತಿದೆ. 19ನೇ ಆವೃತ್ತಿಯ ಐಪಿಎಲ್​ಗೆ ಸಿದ್ಧವಾಗ್ತಿರೋ ಬಿಸಿಸಿಐ ಈಗಾಗ್ಲೇ ರಿಲೀಸ್ ಌಂಡ್ ರಿಟೇನ್ ಲಿಸ್ಟ್​​ಗೆ ಸೂಚನೆ ನೀಡಿದೆ. ಅದ್ರಂತೆ ಇದೇ ತಿಂಗಳಲ್ಲೇ ಫ್ರಾಂಚೈಸಿಗಳಿಂದ ಲಿಸ್ಟ್ ಕೂಡ ರಿಲೀಸ್ ಆಗ್ಬೋದು. ಹಾಗೇ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 13 ಮತ್ತು 15 ರ ನಡುವೆ ನಡೆಯುವ ಸಾಧ್ಯತೆಗಳಿವೆ.  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಫ್ರಾಂಚೈಸಿ ಪ್ರತಿನಿಧಿಗಳ ನಡುವಿನ ಚರ್ಚೆಗಳಿಗೆ ಡೆಡ್​ಲೈನ್ ನೀಡಲಾಗಿದೆ. ಇದೆಲ್ಲಾ ಒಂದ್ಕಡೆಯಾದ್ರೆ ಮುಂದಿನ ಆವೃತ್ತಿಗೆ ಪಂದ್ಯಗಳ ಹೆಚ್ಚುವರಿಯೇ ದೊಡ್ಡ ಟ್ವಿಸ್ಟ್ ಕೊಟ್ಟಿದೆ.

ಇದನ್ನೂ ಓದಿ : ಪಂಜಾಬ್ ಕ್ರಿಕೆಟ್ ಮಂಡಳಿಯಿಂದ ಹರ್ಮನ್‌ಪ್ರೀತ್, ಅಮನ್‌ಜೋತ್‌ಗೆ 11 ಲಕ್ಷ ರೂ. ಬಹುಮಾನ ಘೋಷಣೆ

2026ನೇ ಸೀಸನ್ ಗೆ 74 ಅಲ್ಲ 84 ಪಂದ್ಯಗಳು?

ಜಗತ್ತಿನ ದಿ ಮೋಸ್ಟ್ ರಿಚೆಸ್ಟ್ ಲೀಗ್ ಅಂತಾನೇ ಕರೆಸಿಕೊಳ್ಳೋ ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಗೆ ಇನ್ನು ಐದು ತಿಂಗಳಷ್ಟೇ ಬಾಕಿ. ಬಟ್ ಹಿಂದಿನ ಸೀಸನ್​ಗಳಿಗೂ ಮುಂದಿನ ಸೀಸನ್​ಗೂ ಕಂಪೇರ್ ಮಾಡಿದ್ರೆ ಸಾಕಷ್ಟು ವೇರಿಯೇಷನ್ಸ್ ಆಗೋ ಚಾನ್ಸಸ್ ಇದೆ. ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಬಿಸಿಸಿಐ ಐಪಿಎಲ್ ಸೀಸನ್-19 ರಲ್ಲಿ 84 ಪಂದ್ಯಗಳನ್ನು ಆಯೋಜಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಅದರಂತೆ ಮುಂದಿನ ಸೀಸನ್​ ಐಪಿಎಲ್​ನಲ್ಲಿ ಒಟ್ಟು 84 ಪಂದ್ಯಗಳನ್ನಾಡಬೇಕಾಗುತ್ತದೆ. ಅಂದರೆ ಐಪಿಎಲ್ 2026 ರಿಂದ ಹೆಚ್ಚುವರಿ 10 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಚಿಂತಿಸಿದೆ. ಌಕ್ಚುಲಿ ಎಲ್ಲವೂ ಕರೆಕ್ಟ್ ಆಗಿ ಇಂಪ್ಲಿಮೆಂಟ್ ಆಗಿದ್ರೆ 2025ರಲ್ಲೇ ನಾವು ಎಕ್ಸ್​ಟ್ರಾ ಪಂದ್ಯಗಳಿಗೆ ಸಾಕ್ಷಿ ಆಗ್ಬೇಕಿತ್ತು. ಐಪಿಎಲ್ 2025 ಮತ್ತು 2026 ರಲ್ಲಿ 84 ಪಂದ್ಯಗಳನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಲಾಗಿತ್ತು. ಅಲ್ಲದೆ 2027 ರಲ್ಲಿ ಐಪಿಎಲ್ ಪಂದ್ಯಗಳ ಸಂಖ್ಯೆಯನ್ನು 94 ಕ್ಕೇರಿಸಲು ಚಿಂತನೆ ನಡೆದಿತ್ತು. ಬಟ್ 2025ರಲ್ಲಿ ಇದು ಕಾರ್ಯರೂಪಕ್ಕೆ ಬರ್ಲಿಲ್ಲ. ಯಾಕಂದ್ರೆ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆದಿತ್ತು. ಜೊತೆಗೆ ಎಕ್ಸ್​ಟ್ರಾ ಮ್ಯಾಚ್​ಗಳನ್ನ ಆಡಿಸಿದ್ರೆ ವಿದೇಶಿ ಪ್ಲೇಯರ್​ಗಳು ಪ್ಲೇಆಫ್ಸ್ ಪಂದ್ಯಗಳನ್ನ ಮಿಸ್ ಮಾಡಿಕೊಳ್ಳೋ ಚಾನ್ಸಸ್ ಇತ್ತು. ಹೀಗಾಗಿ ಈ ಬಾರಿ ಮೊದಲೇ ಸೂಚನೆ ನೀಡಿ 84 ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೀತಿದೆ. ಹಿಂದಿನ ಸೀಸನ್​ಗಳಲ್ಲಿ ಲೀಗ್ ಹಂತದ 70 ಪ್ಲಸ್ ಪ್ಲೇಆಫ್ 4 ಪಂದ್ಯಗಳೂ ಸೇರಿ ಟೋಟಲ್ ಆಗಿ 74 ಪಂದ್ಯಗಳು ನಡೀತಿತ್ತು. ಬಟ್ ನೆಕ್ಸ್​ಟ್ ಸೀಸನ್​ಗೆ 84 ಪಂದ್ಯಗಳು ನಡೆಯೋ ಸಾಧ್ಯತೆ ಇದೆ.

2027ಕ್ಕೆ 94 ಪಂದ್ಯ.. ಒಂದೊಂದು ತಂಡಕ್ಕೆ 18 ಮ್ಯಾಚ್!

ಇನ್ನು ಇದೆಲ್ಲ ಒಂದ್ಕಡೆಯಾದ್ರೆ 2027 ರಿಂದ  ಇನ್ನಷ್ಟು ಟ್ವಿಸ್ಟ್ ಪಡ್ಕೊಳುತ್ತೆ. ಅಂದರೆ ಇಲ್ಲಿ ಪ್ರತಿ ತಂಡಗಳು 18 ಪಂದ್ಯಗಳನ್ನಾಡಬೇಕಾಗುತ್ತೆ. 9 ಪಂದ್ಯಗಳು ಹೋಮ್ ಗ್ರೌಂಡ್​ನಲ್ಲಿ ನಡೆದರೆ, ಉಳಿದ 9 ಪಂದ್ಯಗಳು ಅವೇ  ಪಿಚ್​ನಲ್ಲಿ ನಡೆಯುತ್ತವೆ. ಅಂದ್ರೆ ಲೀಗ್​ ಹಂತದಲ್ಲಿ ಪ್ರತಿ ತಂಡಗಳು 18 ಪಂದ್ಯಗಳನ್ನಾಡಲಿದೆ. ಅಷ್ಟಕ್ಕೂ ಸಡನ್ ಆಗಿ ಪಂದ್ಯಗಳ ಸಂಖ್ಯೆಯನ್ನ ರೈಸ್ ಮಾಡೋಕೆ ಮುಖ್ಯ ಕಾರಣ ಏನು ಅಂತಾ ನಿಮಗೆ ಅನ್ನಿಸ್ಬೋದು.  ಅದಕ್ಕೆ ಕಾರಣ ಐಪಿಎಲ್ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಬಿಸಿಸಿಐ ಐಪಿಎಲ್ ಸೀಸನ್-18 ಮತ್ತು 19 ರಲ್ಲಿ 84 ಪಂದ್ಯಗಳನ್ನು ಆಯೋಜಿಸುವುದಾಗಿ ತಿಳಿಸಿತ್ತು. ಆದರೆ ಕಳೆದ ಬಾರಿ ಆಯೋಜಿಸಿರಲಿಲ್ಲ. ಅದಕ್ಕೆ ಏನು ಕಾರಣ ಅನ್ನೋದನ್ನೂ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ರಿವೀಲ್ ಮಾಡಿದ್ದಾರೆ. ಮಾರ್ಚ್​ನಲ್ಲಿ ಚಾಂಪಿಯನ್ಸ್ ಟ್ರೋಪಿ ಫಿಕ್ಸ್ ಆಗಿತ್ತು. ಌಂಡ್ ನೆಕ್ಸ್​ಟ್ ಜೂನ್​ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಫಿಕ್ಸ್ ಆಗಿತ್ತು. ಹೀಗಾಗಿ ಹೆಚ್ಚುವರಿ ಪಂದ್ಯಗಳನ್ನ ಌಡ್ ಮಾಡೋಕೆ ಆಗಿರ್ಲಿಲ್ಲ ಎಂದಿದ್ದಾರೆ. ಆದ್ರೀಗ ಮತ್ತೊಮ್ಮೆ ಪಂದ್ಯಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಐಪಿಎಲ್ ಪ್ರಸಾರಕ ಸಂಸ್ಥೆಗಳು ಮುಂದಿಟ್ಟಿವೆ. ಹೀಗಾಗಿ ಐಪಿಎಲ್ 2026 ರಲ್ಲಿ 84 ಪಂದ್ಯಗಳು ನಡೆಯುವುದು ಬಹುತೇಕ ಫಿಕ್ಸ್ ಎನ್ನಬಹುದು. ಅದೂ ಅಲ್ದೀ ಈ ಹಿಂದಿನ ಸೀಸನ್​ಗಳಲ್ಲಿ ನೀವೇ ನೋಡಿದಂತೆ ರಿವೇಂಜ್ ಮ್ಯಾಚ್ ಸಿಗೋದಿಲ್ಲ. ಅಂದ್ರೆ ಇಡೀ ಟೂರ್ನಿಯಲ್ಲಿ ಕೆಲ ತಂಡಗಳೊಂದಿಗೆ ಒಮ್ಮೆ ಮಾತ್ರ ಮುಖಾಮುಖಿ ಆಗೋ ಚಾನ್ಸಸ್ ಇರುತ್ತೆ. ರಿವೇಂಜ್ ಫೈಟ್ ಇರೋದಿಲ್ಲ. ಬಟ್ ಪಂದ್ಯಗಳ ಸಂಖ್ಯೆ ಹೆಚ್ಚಿಸಿದಾಗ ರಿವೇಂಜ್ ಮ್ಯಾಚ್​ಗಳ ಸಂಖ್ಯೆಯೂ ಹೆಚ್ಚಾಗುತ್ತೆ.

Shantha Kumari