ಕಡಲ ತೀರದಲ್ಲಿ ಶ್ವಾನಗಳ ಚೆಂಡಿನ ಆಟ – ನಾಯಿಗಳ ಗೆಳೆತನಕ್ಕೆ ಮನಸೋತ ಜನ

ಕಡಲ ತೀರದಲ್ಲಿ ಶ್ವಾನಗಳ ಚೆಂಡಿನ ಆಟ – ನಾಯಿಗಳ ಗೆಳೆತನಕ್ಕೆ ಮನಸೋತ ಜನ

ಈ ಪ್ರಾಣಿಗಳ ತುಂಟಾಟ ನೋಡುವುದೇ ಚೆಂದ.. ಅವುಗಳ ಮುಗ್ದತೆ ನೋಡಿ ನಾವು ಕಳೆದುಬಿಡುತ್ತೇವೆ. ಇಂತಹ ದೃಶ್ಯಗಳನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬವಿದ್ದಂತೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚೆಗಂತೂ ಸಾಕು ನಾಯಿಗಳ ಮತ್ತು ಬೆಕ್ಕುಗಳ ಮುದ್ದಾದ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಹರಿದಾಡುತ್ತಿವೆ. ಇದೀಗ ಇಲ್ಲೊಂದು ಕಡೆ ಬೀಚ್‌ ಬಳಿ ನಾಯಿ ಮರಿ ಚೆಂಡಿನಲ್ಲಿ ಆಟವಾಡುತ್ತಿದ್ದು, ಅದಕ್ಕೆ ನಾಯಿಯೊಂದು ಸಹಾಯ ಮಾಡುತ್ತಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ  ಮಳೆಯ ಸಿಂಚನ –  ಮಟ ಮಟ ಮಧ್ಯಾಹ್ನವೇ ವರುಣನ ಅಬ್ಬರ

ಶ್ವಾನಗಳ ನಿಷ್ಠೆ, ತೋರಿಸುವ ಪ್ರೀತಿ ಎಲ್ಲವೂ ಅದ್ಭುತ. ಅದೂ ಅಲ್ಲದೆ ಕೆಲವೊಂದು ಶ್ವಾನಗಳು ಸಮಯೋಚಿತವಾಗಿ ಯೋಚಿಸುವ ಮೂಲಕವೂ ಗಮನ ಸೆಳೆಯುತ್ತವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ. ಇದು ದೊಡ್ಡ ಶ್ವಾನ ಮತ್ತೊಂದು ಮರಿ ಶ್ವಾನಕ್ಕೆ ಸಹಾಯ ಮಾಡುವ ದೃಶ್ಯ. ಈ ಗೆಳೆತನ ಈ ದೃಶ್ಯವನ್ನು ಮತ್ತೆ ಮತ್ತೆ ನೋಡುವಂತೆಯೂ ಮಾಡುತ್ತದೆ.

ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪ್‌ನಲ್ಲಿ ಕಡಲತೀರದಲ್ಲಿ ಎರಡು ಶ್ವಾನಗಳು ಆಟ ಆಡುತ್ತಿರುವ ದೃಶ್ಯವನ್ನು ನೋಡಬಹುದು. ಇದರಲ್ಲಿ ಒಂದು ಶ್ವಾನ ಮರಳಿನಲ್ಲಿ ಆಡುತ್ತಿದ್ದರೆ ಇನ್ನೊಂದು ಮರಿ ಶ್ವಾನ ಚೆಂಡಿನಲ್ಲಿ ಆಡುವುದು ಕಾಣುತ್ತದೆ. ಈ ಆಟದ ವೇಳೆ ಪುಟಾಣಿ ಶ್ವಾನ ಆಡುತ್ತಿದ್ದ ಚೆಂಡು ನೀರಿನ ಅಲೆಗಳ ಸಮೀಪ ಬೀಳುತ್ತದೆ. ಆದರೆ ಅಲೆಗಳಿಗೆ ಹೆದರಿ ಅಲ್ಲಿಗೆ ಹೋಗಲು ಮರಿ ಶ್ವಾನ ಹಿಂಜರಿಯುತ್ತದೆ. ಇದನ್ನು ಗಮನಿಸಿದ ದೊಡ್ಡ ಶ್ವಾನ ಓಡಿ ಹೋಗಿ ಅಲೆಗಳಿಂದ ಚೆಂಡನ್ನು ರಕ್ಷಿಸಿ ಬಾಯಿಯಲ್ಲಿ ಕಚ್ಚಿಕೊಂಡು ಬಂದು ಮರಿ ಶ್ವಾನದ ಬಳಿಕ ಹಾಕಿ ಬಳಿಕ ತನ್ನ ಆಟದ ಜಾಗಕ್ಕೆ ಓಡುತ್ತದೆ. ಈ ಕ್ಷಣವನ್ನು ನೋಡುವಾಗಲೇ ಖುಷಿಯಾಗುತ್ತದೆ. ವೈರಲ್‌ ಆದ ವಿಡಿಯೋ ನೋಡಿ ಶ್ವಾನ ಪ್ರಿಯರಂತು ಈ ಮುದ್ದಿನ ಶ್ವಾನದ ಪ್ರೀತಿ, ಬುದ್ಧಿವಂತಿಕೆಗೆ ಮನಸೋತಿದ್ದಾರೆ.

Shwetha M

Leave a Reply

Your email address will not be published. Required fields are marked *