ದಿಟ್ಟಿಸಿ ನೋಡ್ಬೇಡ ಅಮ್ಮಾ.. – ತಾಯಿಯ ಒಂದು ನೋಟಕ್ಕೆ ಹೆದರಿ ಪೂಲ್‌ನಿಂದ ಮೇಲೆ ಬಂದ ಮರಿ ಹಿಪ್ಪೋ!

ದಿಟ್ಟಿಸಿ ನೋಡ್ಬೇಡ ಅಮ್ಮಾ.. – ತಾಯಿಯ ಒಂದು ನೋಟಕ್ಕೆ ಹೆದರಿ ಪೂಲ್‌ನಿಂದ ಮೇಲೆ ಬಂದ ಮರಿ ಹಿಪ್ಪೋ!

ನೀರಿನಲ್ಲಿ ಆಟವಾಡೋದು ಅಂದ್ರೆ ಮಕ್ಕಳಿಗೆ ತುಂಬಾ ಇಷ್ಟ.. ಆದ್ರೆ ತಾಯಂದಿರಿಗೆ ಮಕ್ಕಳು ನೀರಲ್ಲಿ ಆಟವಾಡಿದ್ರೆ ಎಲ್ಲಿ ಜ್ವರ, ಶೀತ ಶುರುವಾಗುತ್ತೋ ಅನ್ನೋ ಭಯ.. ಹೀಗಾಗೇ ನೀರಲ್ಲಿ ಆಟವಾಡ್ಬೇಡಿ ಅಂತಾ ಹೇಳ್ತಾರೆ.. ಕೆಲ ಪ್ರಾಣಿಗಳು ಕೂಡ ಮನುಷ್ಯರಂತೆ ವರ್ತಿಸುತ್ತವೆ. ತಮ್ಮ ಮರಿಗಳನ್ನ ಕಾಳಜಿಯಿಂದ ನೋಡಿಕೊಳ್ತವೆ. ಇದೀಗ ಇಲ್ಲೊಂದು ಮರಿ ಹಿಪ್ಪೋ ನೀರಿನಲ್ಲಿ ಆಟವಾಡ್ತಿದ್ದ ವೇಳೆ ತಾಯಿ ಹಿಪ್ಪೋ ಗುರಾಯಿಸಿ ನೋಡಿದೆ. ತಾಯಿಯ ಒಂದು ಲುಕ್‌ ನೋಡಿ ಮರಿ ಹಿಪ್ಪೋ ನೀರಿನಿಂದ ಮೇಲೆ ಬಂದಿದೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಇದನ್ನೂ ಓದಿ: ಮುಂದಿನ 4 ದಿನ ರಾಜ್ಯದಲ್ಲಿ ಮಳೆ ಆರ್ಭಟ – ಕರಾವಳಿ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಿದ IMD!

ಅಮ್ಮಂದಿರು ಹಾಗೇ ಅಲ್ವಾ.. ಮಕ್ಕಳು ತಪ್ಪು ಮಾಡಿದ್ರೆ ಬುದ್ದಿ ಹೇಳ್ತಾಳೆ.. ಮಕ್ಕಳು ಕೂಡ ತಾಯಿಯ ಒಂದು ನೋಟದಲ್ಲೇ ಅಮ್ಮನಿಗೆ ಕೋಪ ಬಂದಿದೆ ಅಂತ ಅರ್ಥ ಮಾಡಿಕೊಳ್ತಾರೆ. ಇದೀಗ ಇಲ್ಲೊಂದು ಮರಿ ಹಿಪ್ಪೋ ವಿಚಾರದಲ್ಲೂ ಹೀಗೆ ಆಗಿದೆ. ವೈರಲ್‌ ಆಗಿರೋ ದೃಶ್ಯ ನೋಡಿದ್ರೆ, ಮರಿ ಹಿಪ್ಪೋಗೆ ತಾಯಿ ಮೇಲೆ ಎಷ್ಟು ಭಯವಿದೆ ಅನ್ನೋದು ತಿಳಿಯುತ್ತೆ. ಸದ್ಯ ಈ ಕ್ಯೂಟ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ವೈರಲ್‌ ಆದ ವಿಡಿಯೋ ಕನ್ಸಾಸ್ ನ ಟ್ಯಾಂಗನಿಕಾ ವನ್ಯಜೀವಿ ಉದ್ಯಾನವನದ್ದು ಎನ್ನಲಾಗಿದೆ. @AMAZINGNATURE ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ಅಮ್ಮನ ನೋಟ, ಎಲ್ಲಾ ಜೀವಿಗಳಲ್ಲಿಯೂ ಸಾರ್ವತ್ರಿಕವಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಟೇಕ್ ಕೇರ್ ಹಿಪ್ಪೋ ಮರಿಯನ್ನು ನೀರಿನ ಕೊಳದಿಂದ ತಾಯಿಯತ್ತ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಮರಿ ಹಿಪ್ಪೋ ಮಾತ್ರ ಇದನ್ನು ನಿರಾಕರಿಸಿ ಕೊಳದತ್ತ ತಪ್ಪಿಸಿಕೊಂಡು ಓಡುತ್ತಿದೆ. ಈ ವೇಳೆ ತಾಯಿ ಹಿಪ್ಪೋ ಅಲ್ಲಿಗೆ ಬಂದಿದೆ.. ತಾಯಿ ಹಿಪ್ಪೋ ಮರಿಯನ್ನ ಒಂದು ಕ್ಷಣ ದಿಟ್ಟಿಸಿ ನೋಡಿದ್ದೆ ತಡ, ಕೊಳದಲ್ಲಿದ್ದ ಈ ಮರಿ ಹಿಪ್ಪೋ ತನ್ನ ತಾಯಿಯತ್ತ ಎದ್ನೋ ಬಿದ್ನೋ ಅಂತ ಓಡಿ ಹೋಗಿದೆ. ಸದ್ಯ ಈ ವಿಡಿಯೋ ಭಾರಿ ವೈರಲ್‌ ಆಗಿದ್ದು, ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ತಾಯಿಯ ಪ್ರೀತಿ ಅತ್ಯಂತ ಬಲಿಷ್ಠವಾದದ್ದು, ಆ ಪ್ರೀತಿ ಹಾಗೂ ಕಾಳಜಿಯನ್ನು ಯಾರಿಂದಲು ನೀಡಲು ಸಾಧ್ಯವಿಲ್ಲ. ತಾಯಿಯ ಒಂದೇ ಒಂದು ನೋಟಕ್ಕೆ ಅಷ್ಟು ಶಕ್ತಿಯಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

Shwetha M