ಮುಗ್ಗರಿಸಿ ಬಿದ್ದಿದ್ದಲ್ಲ.. ಸ್ಟಂಟ್ ಮಾಡಿದ್ದು.. – ಆನೆ ಮರಿ ತುಂಟಾಟದ ವಿಡಿಯೋ ವೈರಲ್!

ಆನೆಗಳ ಆಟ ತುಂಟಾಟ ನೋಡುವುದೇ ಕಣ್ಣಿಗೆ ಹಬ್ಬ. ಪುಟಾಣಿ ಆನೆಗಳು ಯಾವತ್ತೂ ಜನರಿಗೆ ಖುಷಿ ಕೊಡುವುದರಲ್ಲಿ ಹಿಂದೆ ಬೀಳುವುದಿಲ್ಲ. ತುಂಬಾ ಬೇಸರದಲ್ಲಿದ್ದಾಗ ಒಮ್ಮೆ ಇಂಟರ್ನೆಟ್ನಲ್ಲಿ ಬೇಬಿ ಎಲಿಫೆಂಟ್ ಎಂದು ಸರ್ಚ್ ಮಾಡಿದರೆ ಸಾಕು ಪುಟಾಣಿ ಆನೆಗಳ ಮುದ್ದು ಮುದ್ದಾದ ಸಾಕಷ್ಟು ವಿಡಿಯೋಗಳು ಕಾಣಸಿಗುತ್ತವೆ. ಇದೀಗ ಅಂತಹದ್ದೇ ವಿಡಿಯೋ ಇಂಟರ್ನೆಟ್ನಲ್ಲಿ ಸದ್ದು ಮಾಡ್ತಿದೆ. ಆನೆ ಮರಿ ತುಂಟಾಟ ಮಾಡಲು ಹೋಗಿ ಮುಗ್ಗರಿಸಿ ಬಿದ್ದಿದೆ. ಈ ವಿಡಿಯೋ ವೈರಲ್ ಆಗ್ತಿದೆ.
ಇದನ್ನೂ ಓದಿ: ಹಸಿ ಟೊಮೆಟೋ ಸೇವಿಸುತ್ತೀರಾ? – ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಿ!
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ವಿಡಿಯೋದಲ್ಲಿ ಆನೆ ಮರಿಯೊಂದು ಆಟವಾಡುತ್ತಿರುತ್ತದೆ. ಬಳಿಕ ಅಲ್ಲೇ ಅಡ್ಡಲಾಗಿ ಕಟ್ಟಿದ್ದ ಮರದ ಬೇಲಿ ದಾಟಲು ಪ್ರಯತ್ನಿಸಿದೆ. ಆದ್ರೆ ಆ ಬೇಲಿ ಸ್ಪಲ್ಪ ಎತ್ತರ ಇದ್ದಿದ್ರಿಂದ ಆನೆ ಮರಿ ಮುಗ್ಗರಿಸಿ ಬಿದ್ದಿದೆ. ಕೂಡಲೇ ತಾಯಾನೆ ಮರಿಯಾನೆಯನ್ನು ಮೇಲೆತ್ತಲು ಪ್ರಯತ್ನಿಸಿದೆ. ಈ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋವನ್ನ ಜೈತೂನ್ ಕ್ಯಾಝೆ (zaitunkyzazze) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಆನೆಗಳ ಹಿಂಡಿನಲ್ಲಿರುವ ಮರಿಯಾನೆ ಮರದ ತುಂಡುಗಳಿಂದ ಸುತ್ತಲೂ ಅಡ್ಡಲಾಗಿರುವ ಕಟ್ಟಿರುವ ಬೇಲಿ ದಾಟಲು ಮುಂದಾಗಿ ಮುಗ್ಗರಿಸಿ ಬಿದ್ದಿದೆ. ತನ್ನ ಕಂದಮ್ಮ ಬೀಳುತ್ತಿದ್ದಂತೆ ತಾಯಾನೆ ಸಹಾಯಕ್ಕೆ ಧಾವಿಸಿದೆ. ಬಿದ್ದ ಮರಿಯಾನೆ ಏನು ಆಗಿಲ್ಲ ಎನ್ನುವಂತೆ ಓಡೋಡಿ ಹೋಗಿ ಆನೆಗಳ ಗುಂಪು ಸೇರಿಕೊಂಡಿರುವುದನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ನೆಸ್ ಗೆ ಫಿದಾ ಆದೆ ಎಂದಿದ್ದಾರೆ. ಇನ್ನೊಬ್ಬರು ಕಾಮೆಂಟ್ ನಲ್ಲಿ, ಪಾಪ ನಾಚಿಕೆ ಆಯ್ತು ಕಾಣಿಸುತ್ತೆ ಓಡಿ ಹೋದ ಎಂದಿದ್ದಾರೆ. ಇನ್ನೊಬ್ಬರು ಆನೆ ಮರಿ ಬಿದ್ದಿದ್ದಲ್ಲ, ಸ್ಟಂಟ್ ಮಾಡಿದ್ದು ಅಂತ ಕಮೆಂಟ್ ಹಾಕಿದ್ದಾರೆ.
View this post on Instagram

ನೋಡಿರಿ

