ಜಗತ್ತಿನ ಸುಖ ಜೀವಿ ಇದು! – ಉಯ್ಯಾಲೆಯಲ್ಲಿ ಮಲಗಿ ಗೊರಕೆ ಹೊಡೆಯುತ್ತಿರುವ ಮರಿಯಾನೆ!

ಪುಟಾಣಿ ಆನೆಗಳು ಸಖತ್ ಕ್ಯೂಟ್.. ಅವುಗಳ ಆಟ, ತುಂಟಾಟವನ್ನ ನೋಡುವುದೇ ಕಣ್ಣಿಗೆ ಒಂಥರಾ ಹಬ್ಬ.. ಇನ್ನೂ ನಿದ್ರೆ ಮಾಡ್ತಿದ್ರೆ ಅವುಗಳನ್ನ ಮುದ್ದಾಡಿ ಬಿಡುವ ಅಂತ ಅನ್ನಿಸುತ್ತೆ. ಇದೀಗ ಇಲ್ಲೊಂದು ಮರಿಯಾನೆ ನಿದ್ರಿಸುತ್ತಿದೆ.. ಇದ್ರ ಮುದ್ದಾದ ವಿಡಿಯೋ, ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಪ್ರೀತಿಯಲ್ಲಿ ಬಿದ್ದ ಉರ್ಫಿ.. ಮದುವೆಗೂ ಮುಹೂರ್ತ ಫಿಕ್ಸ್? – ಉರ್ಫಿ ಮನ ಗೆದ್ದ ಹುಡ್ಗ ಯಾರು?
ಮರಿಯಾನೆಗಳಿಗೆ ಆಟದೊಂದಿಗೆ ನಿದ್ದೆಯೂ ಮುಖ್ಯ.. ಸಾಮಾನ್ಯವಾಗಿ ಮರಿಯಾನೆಗಳು ಅಮ್ಮನೊಂದಿಗೆ ಹಾಯಾಗಿ ನಿದ್ದೆ ಮಾಡುತ್ತವೆ. ಇಲ್ಲೊಂದು ಆನೆ ಮರಿ ಉಯ್ಯಾಲೆಯಲ್ಲಿ ನಿದ್ರೆಗೆ ಜಾರಿದ್ದು, ಜೋರಾಗಿ ಗೊರಕೆ ಹೊಡೆಯುತ್ತಿದೆ. ಮರಿಯಾನೆ ಗೊರಕೆ ಹೊಡೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಪ್ರಾಣಿಗಳು ಗೊರಕೆ ಹೊಡೆಯುತ್ತಾ ಎಂದು ಕೆಲವರು ಕೇಳಿದ್ದಾರೆ.
https://www.instagram.com/p/DNUdNr3xmJJ/?utm_source=ig_web_button_native_share
wildliferescuers ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಜೋಳಿಗೆಯಲ್ಲಿ ಮಲಗಿ ಪುಟಾಣಿ ಆನೆಯೊಂದು ಗಡದ್ದಾಗಿ ನಿದ್ದೆಗೆ ಜಾರಿದೆ. ಈ ವೇಳೆಯಲ್ಲಿ ಮರಿಯಾನೆ ಗೊರಕೆ ಹೊಡೆದಿದ್ದು, ಈ ದೃಶ್ಯವನ್ನು ರೆಕಾರ್ಡ್ ಮಾಡಲಾಗಿದೆ. ಈ ವಿಡಿಯೋದೊಂದಿಗೆ ಹೀಗೆ ಬರೆದುಕೊಳ್ಳಲಾಗಿದೆ. ರಕ್ಷಿಸಲ್ಪಟ್ಟ ಮರಿ ಆನೆಯೊಂದು ಥೈಲ್ಯಾಂಡ್‌ನ ಆನೆ ಅಭಯಾರಣ್ಯದಲ್ಲಿ, ನಿದ್ರೆಯ ವೇಳೆ ಗೊರಕೆ ಹೊಡೆಯುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಮಕ್ಕಳಂತೆ ಈ ಪುಟಾಣಿ ಆನೆಗಳು ನಿದ್ರೆಯಲ್ಲಿ ಗೊರಕೆ ಹೊಡೆಯುತ್ತವೆ. ಅವುಗಳು ಉಸಿರಾಡುವಾಗ ಅಥವಾ ಪಕ್ಕಕ್ಕೆ ಇಲ್ಲವಾದರೆ ಬೆನ್ನಿನ ಮೇಲೆ ಮಲಗಿರುವಾಗ ಅವುಗಳ ವಾಯುಮಾರ್ಗಗಳು ಕಂಪಿಸುತ್ತವೆ. ಹೀಗಾಗಿ ಈ ಶಬ್ದವು ಜೋರಾಗಿ ಮತ್ತು ಮುದ್ದಾಗಿಯೇ ಕೇಳಿಸುತ್ತವೆ. ಈ ಪ್ರಾಣಿಗಳು ಸುರಕ್ಷಿತವಾದ ಅನುಭವವಿದ್ದಾಗ ಎಷ್ಟು ಆರಾಮವಾಗಿ ನಿದ್ದೆಗೆ ಜಾರುತ್ತವೆ ಹಾಗೂ ಮನುಷ್ಯರಂತೆ ನಿದ್ದೆ ಮಾಡುತ್ತವೆ ಎನ್ನುವುದನ್ನು ನೋಡಬಹುದು.
ಮರಿಯಾನೆಗಳು ಹುಟ್ಟುವಾಗಲೇ ಸುಮಾರು 200 ಪೌಂಡ್‌ಗಳ ತೂಕ ಇರುತ್ತವೆ. ಹುಟ್ಟಿದ ಕೆಲವೇ ಕೆಲವು ಜಗಂಟೆಗಳಲ್ಲಿ ಅವು ನಿಂತಬಲ್ಲದು ಹಾಗೂ ನಡೆಯಬಲ್ಲದು. ಹೊಸದ್ದನ್ನು ಕಲಿಯುವುದಕ್ಕೆ, ರಕ್ಷಣೆ ಹಾಗೂ ಎಲ್ಲಾ ರೀತಿಯ ಸೌಕರ್ಯಕ್ಕಾಗಿ ತಾಯಂದಿರು ಹಿಂಡಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತವೆ. ಈ ಮರಿಯಾನೆಗಳು ಕೆಲವು ತಿಂಗಳವರೆಗೆ ಹಾಲು ಕುಡಿಯುತ್ತವೆ, ಆ ಬಳಿಕ ಹುಲ್ಲು ಮತ್ತು ಹಣ್ಣುಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುತ್ತವೆ. ತುಂಟಾಟಗಳ ಮೂಲಕ ಪಕ್ಷಿಗಳನ್ನು ಬೆನ್ನಟ್ಟುವುದು, ನೀರಿನಲ್ಲಿ ಆಟವಾಡುವುದು, ಸೊಂಡಿಲನ್ನು ತನ್ನ ಕೆಲಸಗಳಿಗೆ ಬಳಸಿಕೊಳ್ಳುತ್ತವೆ. ಆರೈಕೆಯಲ್ಲಿ ಬೆಳೆಯುವ ಆನೆಗಳು ಕೆಲವೇ ಕೆಲವು ವರ್ಷಗಳಲ್ಲಿ ಈ ಭೂಮಿಯ ದೈತ್ಯ ಪ್ರಾಣಿಯಾಗುತ್ತವೆ ಎಂದಿದ್ದಾರೆ.
ಈ ವಿಡಿಯೋವನ್ನು ನಲವತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ನೋಡಲು ನನ್ನ ಕಿರಿಯ ಸಹೋದರನಂತೆ ಇದೆ ಎಂದು ತಮಾಷೆಯಾಗಿಯೇ ಹೇಳಿದ್ದಾರೆ. ಮತ್ತೊಬ್ಬರು ನನ್ನ ಅಜ್ಜ ಮನೆಯಲ್ಲಿ ಹೀಗೆಯೇ ಇರುತ್ತಾರೆ ಎಂದಿದ್ದಾರೆ. ನೋಡೋದಕ್ಕೆ ಖುಷಿಯಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ. ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೋಡಿರಿ

