ಬರೋಬ್ಬರಿ 26 ಬೆರಳುಗಳಿರುವ ಶಿಶು ಜನನ! – ʼದೇವರ ಮಗುʼ ಎಂದ ಜನ!

ಬರೋಬ್ಬರಿ 26 ಬೆರಳುಗಳಿರುವ ಶಿಶು ಜನನ! – ʼದೇವರ ಮಗುʼ ಎಂದ ಜನ!

ರಾಜಸ್ತಾನ: ಕಮಾನ್‌ ಬ್ರಜ್‌ ನಗರದ ಅತೀ ದೊಡ್ಡ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶುವನ್ನು ನೋಡಿದ ಆಸ್ಪ್ರತ್ರೆಯ ಸಿಬ್ಬಂದಿ ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ. ಏಕೆಂದರೆ ಮಗುವಿನ ಕೈ ಕಾಲುಗಳಲ್ಲಿ 20 ಬೆರಳುಗಳ ಬದಲು 26 ಬೆರಳುಗಳಿದ್ಧವು!

ಇದನ್ನೂ ಓದಿ: ಸಂಜು ಸ್ಯಾಮ್ಸನ್‌ಗೆ ಮತ್ತೆ ಅನ್ಯಾಯ – ಮಾತಾಡದೇ ಮನದಲ್ಲಿರುವ ನೋವನ್ನು ಮೆಸೇಜ್ ಮೂಲಕ ಹೊರಹಾಕಿದ ಸಂಜು

ರಾಜಸ್ಥಾನದ ಡೀಗ್‌ ಜಿಲ್ಲೆಯಲ್ಲಿ ಕಳೆದ ಶನಿವಾರ ಈ ರೀತಿ 26 ಬೆರಳುಗಳನ್ನು ಹೊಂದಿದ್ದ ಅಪರೂಪದ ಮಗು ಜನಿಸಿದೆ. ಈ ಮಗುವಿನ ಕೈ ಕಾಲುಗಳ ಬೆರಳುಗಳನ್ನು ಲೆಕ್ಕ ಹಾಕಿದಾಗ ಒಟ್ಟು 26 ಬೆರಳುಗಳಿರುವುದು ಬೆಳಕಿಗೆ ಬಂದಿದೆ. ನವಜಾತ ಶಿಶುವಿನ ಕೈಯಲ್ಲಿ ಹೆಚ್ಚುವರಿ ಎರಡು ಬೆರಳುಗಳಿದ್ದು  ಹಾಗೂ ಕಾಲಿನಲ್ಲಿ ಒಂದು ಹೆಚ್ಚುವರಿ ಬೆರಗಳಿವೆ. ಎಲ್ಲವೂ ಸೇರಿ ಒಟ್ಟು 26 ಬೆರಳುಗಳಿವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಹೆಚ್ಚುವರಿ ಬೆರಳುಗಳಿಂದ ಮಗುವಿನ ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಈ ಹೆಚ್ಚುವರಿ ಬೆರಳುಗಳು ಅನುವಂಶೀಯ ಅಸ್ವಸ್ಥತೆಯಿಂದ ಮಗುವಿಗೆ ಹೆಚ್ಚುವರಿ ಬೆರಳು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಗುವಿಗಿರುವ ಈ ಹೆಚ್ಚುವರಿ ಬೆರಳುಗಳಿಂದ ಕುಟುಂಬದವರು ಮಗುವಿಗೆ ಆಧ್ಯಾತ್ಮಿಕ ಆಯಾಮ ನೀಡಿದ್ದಾರೆ. ತಾವು ಪೂಜಿಸುವ ದೋಲಗರ್ ದೇವಿಯ ಕೃಪೆ ಇದು. ಆಕೆ ದೇವಿಯ ಪ್ರತೀಕವಾಗಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Shwetha M